ETV Bharat / state

ಮುಂದಿನ 14 ದಿನ ಮಹತ್ವದ ಸಮಯ...ಲಾಕ್​​ಡೌನ್ ಪಾಲನೆ ಕಡ್ಡಾಯ: ಸಿಎಂ ಬಿಎಸ್​​​ವೈ - ಲಾಕ್​​ಡೌನ್ ಆದೇಶ ಪಾಲಿಸುವಂತೆ ಸಿಎಂ ಮನವಿ

ಕೊರೊನಾ ವೈರಸ್​​ ನಿಯಂತ್ರಿಸುವಲ್ಲಿ ಮುಂದಿನ 14 ದಿನಗಳು ಬಹಳ ಮಹತ್ವದ್ದಾಗಿದ್ದು,ಜನರು ಮನೆಯಿಂದ ಹೊರಬರದೇ ಲಾಕ್​​ಡೌನ್​ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಿಎಂ ಮನವಿ ಮಾಡಿದ್ದಾರೆ.

yadiyurappa requesting people to follow lockdown properly
ಸಿಎಂ ಬಿ.ಎಸ್​. ಯಡಿಯೂರಪ್ಪ ಮನವಿ
author img

By

Published : Apr 1, 2020, 11:51 AM IST

ಬೆಂಗಳೂರು: ಕೋವಿಡ್-19 ವಿರುದ್ಧ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು,ಇನ್ನೂ 14 ದಿನ ಮಹತ್ವದ ಸಮಯವಾಗಿದೆ. ಹೀಗಾಗಿ ಈ ವೇಳೆ ಎಲ್ಲರೂ ಮನೆಯಲ್ಲಿಯೇ ಇದ್ದು ಲಾಕ್​ಡೌನ್ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸಿಎಂ ಬಿ.ಎಸ್​. ಯಡಿಯೂರಪ್ಪ ಮನವಿ

ಇಡೀ ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್-19 ತಡೆಗೆ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್​​​​ಡೌನ್ ಘೋಷಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಅದರಂತೆ ರಾಜ್ಯದಲ್ಲಿ ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ,ರಾಜ್ಯದ ಜನ ಕೂಡ ಬಹುತೇಕ ಲಾಕ್ ಡೌನ್ ಪಾಲನೆ ಮಾಡುತ್ತಿದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲಿ ಮೂರನೇ ಸ್ಥಾ‌ನದಲ್ಲಿದ್ದ ರಾಜ್ಯ ಈಗ ಐದನೇ ಸ್ಥಾನಕ್ಕೆ ಬಂದಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ಇನ್ನು 14 ದಿನಗಳ ಕಾಲ ಲಾಕ್ ಡೌನ್ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದ್ದು, ಯಾರೂ ಮನೆಯಿಂದ ಹೊರಬರದಿರುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಬೇಕೆಂದು ರಾಜ್ಯದ ಜನತೆಗೆ ಸಿಎಂ ಮನವಿ ಮಾಡಿದ್ದಾರೆ.ಮನೆಯಲ್ಲಿ ಸ್ವಚ್ಛತೆ,ನೈರ್ಮಲ್ಯ ಕಾಪಾಡಿ,ಸಾಮಾಜಿಕ‌ ಅಂತರ ಕಾಯ್ದುಕೊಳ್ಳಿ , ಆರೋಗ್ಯ ಸರಿಯಾಗಿ ನೋಡಿಕೊಳ್ಳಿ, ರೋಗ ಲಕ್ಷಣಗಳು ಕಂಡುಬಂದರೆ ಸಮೀಪದ ಚಿಕಿತ್ಸಾ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ, ಕೊರೊನಾ‌ ಹೋಗಲಾಡಿಸಲು‌ ಸರ್ಕಾರದ ಜೊತೆ ಎಲ್ಲರೂ ಕೈಜೋಡಿಸಬೇಕು, ಸರ್ಕಾರದ ಸಲಹೆ,ಸೂಚನೆ ಪಾಲನೆ ಮಾಡಬೇಕು ಎಂದು ಸಿಎಂ ಕರೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.