ETV Bharat / state

'ಎರಡು ತಿಂಗಳಲ್ಲಿ‌ ಬಡವರಿಗೆ ಮನೆ ಹಂಚಿಕೆ ಮಾಡದಿದ್ದರೆ ಜೈ ಬೋಲೋ ಭಾರತ್ ಚಳವಳಿ' - Jai bholo Bhrat movement

ಬಡವರಿಗೆ ವಸತಿ ಹಂಚಿಕೆ ಮಾಡುವ ಯೋಜನೆಗಳಲ್ಲಿ ಕೆಲ ಲೋಪದೋಷಗಳಿದ್ದು, ಕೂಡಲೇ ಅವುಗಳನ್ನೆಲ್ಲಾ ಸರಿಪಡಿಸಿ ಎರಡು ತಿಂಗಳೊಳಗಾಗಿ ಬಡವರಿಗೆ ಮನೆ ಹಂಚಬೇಕು. ಇಲ್ಲವಾದಲ್ಲಿ ಜೈ ಬೋಲೋ ಭಾರತ್ ಚಳವಳಿ ಆರಂಭಿಸಿ ದೆಹಲಿಗೆ ಹೋಗುತ್ತೇವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಜೊತೆ ಚರ್ಚೆ ನಡೆಸುತ್ತಿರುವ ಹೆಚ್ ಎಸ್ ದೊರೈಸ್ವಾಮಿ
author img

By

Published : Aug 28, 2019, 2:26 PM IST

Updated : Aug 28, 2019, 3:59 PM IST

ಬೆಂಗಳೂರು: ಸರ್ಕಾರದಿಂದ ಬಡವರಿಗೆ ಮನೆ ಹಂಚಿಕೆ ಕೆಲಸ ನಿರ್ದಿಷ್ಟ ಅವಧಿಯೊಳಗೆ ಮಾಡದಿದ್ದರೆ ಜೈ ಬೋಲೋ ಭಾರತ್ ಚಳವಳಿ ಆರಂಭಿಸಿ ದೆಹಲಿಗೆ ಹೋಗುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಬಡವರಿಗೆ ವಸತಿ ಹಂಚುವ ಯೋಜನೆಗಳ ಲೋಪದೋಷಗಳ ಕುರಿತು ಮಾತುಕತೆ ನಡೆಸಿತು. ಕಾಲಮಿತಿಯಲ್ಲಿ ನಿವಾಸಗಳ ಹಂಚಿಕೆ ಮಾಡುವಂತೆ ಸಿಎಂಗೆ ಮನವಿ ಮಾಡಿತು.

ಸಿಎಂ ಜೊತೆ ಚರ್ಚೆ ನಡೆಸಿದ ಹೆಚ್.ಎಸ್.ದೊರೈಸ್ವಾಮಿ

ಸಿಎಂ ಬಿಎಎಸ್​ವೈ ಭೇಟಿ ಬಳಿಕ ಮಾತನಾಡಿದ ದೊರೆಸ್ವಾಮಿ, ಸರ್ಕಾರದಿಂದ ಬಡವರಿಗೆ ಮನೆ ಹಂಚಿಕೆ ಕೆಲಸ ಆಗಿಲ್ಲ. ನಿರ್ದಿಷ್ಟ ಅವಧಿಯೊಳಗೆ ಇದನ್ನು ‌ಮುಗಿಸೋ ಕೆಲಸ ಮಾಡಬೇಕು. ಬೆಂಗಳೂರಿನ ಸುತ್ತಮುತ್ತ ಗ್ರೀನ್ ಬೆಲ್ಟ್ ಜಮೀನನ್ನು ವಸತಿಗಾಗಿ ಕೊಡಬೇಕು‌. ಆ ಜಮೀನಿನಲ್ಲಿ ಬಡವರಿಗೆ ಮನೆ ಕಟ್ಟಿಕೊಡಬೇಕು. ಡೀಮ್ಡ್ ಜಮೀನನ್ನು ವ್ಯವಸಾಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿಗೆ ಕೇಳಿಕೊಂಡಿದ್ದೇವೆ.‌ ಸಿಎಂ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಮಾಡುವುದಾಗಿ ಭರವಸೆ ಕೂಡ ನೀಡಿದರು ಎಂದರು.

ನಾನು ಸಾಯೋದರ ಒಳಗೆ ಈ ಕೆಲಸ ಮಾಡಿಕೊಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ಎರಡು ತಿಂಗಳೊಳಗೆ ಮನೆ ಹಂಚಿಕೆ ಆಗದೆ ಇದ್ದರೆ ಜೈ ಬೋಲೋ ಭಾರತ್ ಚಳವಳಿ ಮಾಡುತ್ತೇವೆ. 5 ಸಾವಿರ ಜನ ಸೇರಿ ದೆಹಲಿಗೆ ಹೋಗುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Intro:

ಬೆಂಗಳೂರು: ಸರ್ಕಾರದಿಂದ ಬಡವರಿಗೆ ಮನೆ ಹಂಚಿಕೆ ಕೆಲಸ
ನಿರ್ಧಿಷ್ಟ ಅವಧಿಯೊಳಗೆ ಮಾಡದಿದ್ದರೆ ಜೈ ಬೋಲೋ ಭಾರತ್ ಚಳುವಳಿ ಆರಂಭಿಸಿ ದೆಹಲಿಗೆ ಹೋಗುತ್ತೇವೆ ರಾಜ್ಯ ಸರ್ಕಾರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೈಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಬಡವರಿಗೆ ವಸತಿ ಹಂಚಿಕೆ ಮಾಡುವ ಯೋಜನೆಗಳ ಲೋಪದೋಶಗಳ ಕುರಿತು ಮಾತುಕತೆ ನಡೆಸಿತು. ಕಾಲಮಿತಿಯಲ್ಲಿ ನಿವಾಸಗಳ ಹಂಚಿಕೆ ಮಾಡುವಂತೆ ಸಿಎಂಗೆ ಮನವಿ ಮಾಡಿತು.

ಸಿಎಂ ಬಿಎಸ್ವೈ ಭೇಟಿ ಬಳಿಕ ಮಾತನಾಡಿದ ಹೆಚ್ ಎಸ್ ದೊರೈಸ್ವಾಮಿ,ಸರ್ಕಾರದಿಂದ ಬಡವರಿಗೆ ಮನೆ ಹಂಚಿಕೆ ಕೆಲಸ ಆಗಿಲ್ಲ ನಿರ್ಧಿಷ್ಟ ಅವಧಿಯೊಳಗೆ ಇದನ್ನು ‌ಮುಗಿಸೋ ಕೆಲಸ ಮಾಡಬೇಕು ಬೆಂಗಳೂರಿನ ಸುತ್ತ ಮುತ್ತ
ಗ್ರೀನ್ ಬೆಲ್ಟ್ ಜಮೀನನ್ನು ವಸತಿಗಾಗಿ ಕೊಡಬೇಕು‌ ಆ ಜಮೀನಿನಲ್ಲಿ ಬಡವರಿಗೆ ಮನೆ ಕಟ್ಟಿ ಕೊಡಬೇಕು ಡೀಮ್ಡ್ ಜಮೀನನ್ನು ವ್ಯವಸಾಯಕ್ಕೆ ಅವಕಾಶ ಮಾಡಿಕೊಡಬೇಕು ಈ ಜಮೀನನ್ನು ಕೂಡ ಜನರಿಗೆ ಹಂಚಿ ಎಂದು ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದೇವೆ‌ ಸಿಎಂ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಮಾಡುವುದಾಗಿ ಭರವಸೆ ಕೂಡ ನೀಡಿದರು ಎಂದರು.

ನಾನು ಸಾಯೋದರ ಒಳಗೆ ಈ ಕೆಲಸ ಮಾಡಿಕೊಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ ಎರಡು ತಿಂಗಳ ಒಳಗೆ ಮನೆ ಹಂಚಿಕೆ ಆಗದೆ ಇದ್ದರೆ ಜೈ ಬೋಲೋ ಭಾರತ್ ಚಳುವಳಿ ಮಾಡುತ್ತೇವೆ 5 ಸಾವಿರ ಜನರ ಮೂಲಕ ದೆಹಲಿಗೆ ಹೋಗುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Body:.Conclusion:
Last Updated : Aug 28, 2019, 3:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.