ನೆಲಮಂಗಲ: ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿನ ರಾಜಮಾತೆ ಉಚ್ಚಂಗಿ ದೇವಸ್ಥಾನದ ಒಳಗೆ ಬಿಳಿ ಗೂಬೆಯೊಂದು ಕಂಡು ಬಂದಿದ್ದು, ಇದು ಶುಭವೋ, ಅಪಶಕುನವೋ ಎಂಬ ಗೊಂದಲದಲ್ಲಿ ಭಕ್ತರಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್ಡೌನ್ ಹಂತ-ಹಂತವಾಗಿ ಸಡಿಲಿಸಿದರೂ ದೇವಸ್ಥಾನಗಳ ಬಾಗಿಲು ಮಾತ್ರ ಬಂದ್ ಆಗಿತ್ತು. ಆದ್ರೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಇಂದಿನಿಂದ ದೇವಾಲಯಗಳ ಬಾಗಿಲು ತೆರೆದಿದ್ದು, ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಅದರಂತೆಯೇ ಇಂದು ಬಾಗಿಲು ತೆರೆದ ಬೆಂಗಳೂರಿನ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿನ ರಾಜಮಾತೆ ಉಚ್ಚಂಗಿ ದೇವಸ್ಥಾನದ ಗರ್ಭಗುಡಿ ಮೇಲೆ ಬಿಳಿ ಗೂಬೆ ಕುಳಿತುಕೊಂಡಿದೆ. ಲಕ್ಷ್ಮೀ ಸ್ವರೂಪವಾದ ಬಿಳಿ ಗೂಬೆ ದೇವಿಯ ಗರ್ಭಗುಡಿಯ ಮೇಲೆ ಕುಳಿತ್ತಿದ್ದು, ಅರ್ಚಕ ಉದಯ್ ಅವರಿಂದ ಪೂಜೆ ನಡೆಯುತ್ತಿದೆ. ದೇವಾಲಯ ಬಿಟ್ಟು ಕದಲದ ಬಿಳಿ ಗೂಬೆ ಕಂಡು ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ ದೇವಾಲಯದಲ್ಲಿ ಪೂಜೆ, ರಾಮ ನಾಮ, ಭಜನೆ ನಡೆಯುತ್ತಿದೆ.
ಕೊರೊನಾದಿಂದಾಗಿ ನಿಧಾನ ಗತಿಯಲ್ಲಿ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇನ್ನೂ ದೇವಸ್ಥಾನ ಬಿಟ್ಟು ಕದಲದ ಬಿಳಿ ಗೂಬೆ ಲಕ್ಷ್ಮೀ ಸ್ವರೂಪದ್ದಾಗಿದ್ದು, ಸಾಮಾನ್ಯವಾಗಿ ಎಲ್ಲಿಯೂ ಕಾಣಿಸುವುದಿಲ್ಲ. ದೊಡ್ಡ ದೊಡ್ಡ ಮರಗಳಲ್ಲಿ ಮಾತ್ರ ವಾಸಿಸುವಂತದ್ದು.