ETV Bharat / state

ಸೋನಿಯಾಗೆ ಬರೆದ ಪತ್ರ ಸೋರಿಕೆ ಮಾಡಿದವರಿಗೆ ಶಿಕ್ಷೆಯಾಗಬೇಕು: ವೀರಪ್ಪ ಮೊಯ್ಲಿ - ಸೋನಿಯಾಗೆ ಬರೆದ ಪತ್ರ

ನಾವು ಬರೆದ ಪತ್ರ ಲೀಕ್ ಮಾಡುವ ಅಗತ್ಯವಿರಲಿಲ್ಲ. ಸಿಡಬ್ಲ್ಯುಸಿ ಸಭೆ ನಡೆಯುವಾಗಲೇ ಈ ಪತ್ರ ಲೀಕ್ ಆಗಿದ್ದು ಹೇಗೆ?. ಇದು ದೊಡ್ಡ ಪ್ರಮಾದವೇ ಸರಿ. ಇದರ ಬಗ್ಗೆ ಅವರು ವಿಚಾರಿಸಲೇಬೇಕು ಎಂದು ಪಕ್ಷದ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಆಗ್ರಹಿಸಿದರು.

Veerappa Moily
ವೀರಪ್ಪ ಮೊಯ್ಲಿ
author img

By

Published : Aug 25, 2020, 5:12 PM IST

ಬೆಂಗಳೂರು: ನಾವು ನಮ್ಮ ಪತ್ರವನ್ನು ಅಧ್ಯಕ್ಷೆಗೆ ಮಾತ್ರ ಬರೆದಿದ್ದು. ಅದು ಹೇಗೆ ಲೀಕ್ ಆಯ್ತು ಅನ್ನೋದು ಗೊತ್ತಿಲ್ಲ. ಈ ಪತ್ರವನ್ನು ಲೀಕ್ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ.

ಆರ್.ಟಿ.ನಗರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಆಗಿದೆ. ಪ್ರಮುಖ ಚರ್ಚೆ, 23 ಜನ ಕಾಂಗ್ರೆಸ್ ಪುನರ್ ಸಂಘಟನೆ ಬಗ್ಗೆ ಪತ್ರ ಬರೆದಿರುವವರಲ್ಲಿ ನಾನೂ ಒಬ್ಬ. ಅದು ನಾಯಕತ್ವ ಬದಲಾವಣೆ ಬಗ್ಗೆ ಅಲ್ಲವೆಂದು ಸ್ಪಷ್ಟಪಡಿಸಿದರು.

ನಾವು ಸೋನಿಯಾಗೆ ಬರೆದ ಪತ್ರ ಸೋರಿಕೆ ಮಾಡಿದವರಿಗೆ ಶಿಕ್ಷೆಯಾಗಬೇಕು: ವೀರಪ್ಪ ಮೊಯ್ಲಿ

ಕಾಂಗ್ರೆಸ್ ಈಗ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದೆ. ಕಾಂಗ್ರೆಸ್ ಎಲ್ಲಾ ಚಟುವಟಿಕೆಗಳಲ್ಲಿ ನಾವು ಭಾಗಿಯಾದವರು. ಪಕ್ಷದಲ್ಲಿ ದೇವರಾಜ್ ಅರಸ್ ಅವರು ಕಾಂಗ್ರೆಸ್ ವಿರುದ್ಧ ಹೋದರು. ಜೊತೆಗೆ ನಮ್ಮ ಪಕ್ಷದ ನಾಯಕರು ಅವರ ಜೊತೆಗೆ ಹೋದರು. ನಾನು ಪಕ್ಷಕ್ಕೆ ವಿಧೇಯನಾಗಿ ಕೆಲಸ ಮಾಡಿದ್ದೇನೆ. ನಾನು ಸಾಯುವವರೆಗೂ ಕಾಂಗ್ರೆಸ್​ನಲ್ಲಿ ಇರುತ್ತೇನೆ, ಬಿಜೆಪಿಗೆ ಹೋಗುವ ಪ್ರಶ್ನೆ ಇಲ್ಲವೆಂದು ಮೊಯ್ಲಿ ಸ್ಪಷ್ಟಪಡಿಸಿದರು.

2024ರಲ್ಲಿ ಪಕ್ಷ ಅಧಿಕಾರಕ್ಕೆ ಬರಲೇಬೇಕು. ಆ ಹಿತದೃಷ್ಟಿಯಿಂದ ನಾವು ಪತ್ರ ಬರೆದಿದ್ದೇವೆ. ಸೋನಿಯಾ ಗಾಂಧಿ ಅವರು ನಮಗೆ ತಾಯಿಗೆ ಸಮಾನ, ಅವರ ನಾಯಕತ್ವನ್ನು ನಾನು ಒಪ್ಪುತ್ತೇನೆ. ಬಿಜೆಪಿ ಜೊತೆಗೆ ಕೈ ಜೋಡಿಸಿದ್ದಾರೆ ಎಂಬ ವಿಚಾರ ತುಂಬಾ ಮನಸಿಗೆ ನೋವಾಗಿದೆ ಎಂದರು.

ನಿನ್ನೆ ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚೆಯಾಗಿದೆ. ಅಲ್ಲಿನ ಚರ್ಚೆಯ ಪ್ರತಿ ವಿಚಾರವೂ ಸೋರಿಕೆಯಾಗಿದೆ. ಈ ರೀತಿ ಸೋರಿಕೆಯಾಗೋದು ಸರಿಯಲ್ಲ. ನಮ್ಮ ಪತ್ರವೂ ಹಾಗೆಯೇ ಸೋರಿಕೆಯಾಗಿದೆ. ಪತ್ರ ಲೀಕ್ ಮಾಡುವ ಅಗತ್ಯವಿರಲಿಲ್ಲ. ಸಿಡಬ್ಲ್ಯುಸಿ ಸಭೆ ನಡೆಯುವಾಗಲೇ ಈ ಪತ್ರ ಲೀಕ್ ಆಗಿದ್ದು ಹೇಗೆ?. ಇದು ದೊಡ್ಡ ಪ್ರಮಾದವೇ ಸರಿ. ಇದರ ಬಗ್ಗೆ ಅವರು ವಿಚಾರಿಸಲೇಬೇಕು ಎಂದು ಆಗ್ರಹಿಸಿದರು.

ರಾಷ್ಟ್ರದ ಹಿತದೃಷ್ಟಿಯಿಂದ ನಾವು ಪತ್ರ ಬರೆದಿದ್ದೇವೆ. ತಳಮಟ್ಟ, ಬೂತ್ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಸಂಘಟನೆಯಾಗಬೇಕು. ಇದರ ಬಗ್ಗೆಯೇ ನಾವು ಪತ್ರ ಬರೆದಿದ್ದು. ಸೋನಿಯಾ ಗಾಂಧಿ ಅಧ್ಯಕ್ಷರಾಗಿ ಮುಂದುವರಿದಿರೋದಕ್ಕೆ ಸ್ವಾಗತವಿದೆ. ಪಕ್ಷದ ಘನತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಸೋನಿಯಾ ಮಾಡಿದ್ದಾರೆ. ಪಕ್ಷದ ಮಟ್ಟಿಗೆ ಅವರು ತಾಯಿಯಿದ್ದಂತೆ. ಆ ಬೆಂಬಲ ಇಂದು ಎಂದೆಂದಿಗೂ ಮುಂದುವರಿಯಲಿದೆ ಎಂದು ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.