ಬೆಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆ ಮನೆಯಿಂದ ಹೊರ ಬರಬೇಡಿ ಎಂದು ಪೊಲೀಸರು ಮನವಿ ಮಾಡಿದರೂ ಸಹ ಕವಡೆ ಕಾಸಿನ ಕಿಮ್ಮತ್ತು ನೀಡದ ಪಡ್ಡೆಗಳ ಓಡಾಟಕ್ಕೆ ಇತ್ತೀಚೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಹೊಸೂರು ಹೆದ್ದಾರಿಯಲ್ಲಿ ಸುತ್ತಾಡುತ್ತಿದ್ದ ಬೈಕ್ ಸವಾರರನ್ನು ತಡೆದು ಓಡಾಟದ ಕಾರಣ ಕೇಳಿದಾಗ ಸಮರ್ಪಕವಾಗಿ ಉತ್ತರಿಸದೆ ಸಿಕ್ಕಿಬಿದ್ದ ಯುವಕರಿಂದ ಸಾವಿರಾರು ಬೈಕ್ಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಗ್ನೇಯ ವಿಭಾಗದಲ್ಲಿ 13 ಠಾಣೆಗಳಿಂದ ಒಟ್ಟು 5 ಸಾವಿರಕ್ಕೂ ಹೆಚ್ಚು ಬೈಕ್ಗಳನ್ನು ಸೀಜ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬೈಕ್ಗಳನ್ನು ಸೀಜ್ ಮಾಡಲಾಗಿದೆ.