ETV Bharat / state

ಮತದಾರರ ಮಾಹಿತಿ ಕಳವು ಪ್ರಕರಣ: ತನಿಖೆಗೆ 12 ಕೆಎಎಸ್ ಅಧಿಕಾರಿಗಳ ನೇಮಕ - ಈಟಿವಿ ಭಾರತ ಕನ್ನಡ

5 ವಿಧಾನಸಭಾವಾರು ಮತದಾರರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಸಮಸ್ಯೆಗಳಿದ್ದರೆ ವೆಬ್​​ಸೈಟ್​ನಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳ ಮಾಹಿತಿ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದರು.

bbmp-appointed-12-kas-officers-for-investigation
ಮತದಾರರ ಮಾಹಿತಿ ಅಕ್ರಮ ಸಂಗ್ರಹ: ತನಿಖೆಗೆ 12 ಕೆಎಎಸ್ ಅಧಿಕಾರಿಗಳ ನೇಮಕ
author img

By

Published : Dec 16, 2022, 6:15 PM IST

ಮತದಾರರ ಮಾಹಿತಿ ಅಕ್ರಮ ಸಂಗ್ರಹ: ತನಿಖೆಗೆ 12 ಕೆಎಎಸ್ ಅಧಿಕಾರಿಗಳ ನೇಮಕ

ಬೆಂಗಳೂರು: ಮತದಾರರ ಮಾಹಿತಿ ಕಳವು ಆರೋಪ ಪ್ರಕರಣದ ತನಿಖೆಗೆ ಬಿಬಿಎಂಪಿ 12 ಕೆಎಎಸ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಿ, ಪರಿಷ್ಕರಣೆ ಪ್ರಕ್ರಿಯೆಗೆ ಮುಂದಾಗಿದೆ. ಈ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈಗಾಗಲೇ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮತದಾರರ ಮಾಹಿತಿ ಪರಿಶೀಲನೆ ನಡೆಯಲಿದೆ ಎಂದರು.

ಚಿಕ್ಕಪೇಟೆ, ಮಹದೇವಪುರ, ಶಿವಾಜಿನಗರದಲ್ಲಿ ಮತದಾರರ ಮಾಹಿತಿ ಪರಿಷ್ಕರಣೆ ‌ಆಗುತ್ತಿದೆ. ವಾರಕ್ಕೊಮ್ಮೆ ರಾಜಕೀಯ ಮುಖಂಡರ ಸಭೆ ನಡೆಸಲು ತೀರ್ಮಾನವಾಗಿದೆ. ಪ್ರತಿ‌ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರೇ ಮುಖಂಡರನ್ನು ಸಭೆಗೆ ಕರೆಯುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಮತದಾರರ ಮಾಹಿತಿ ವೆಬ್​ಸೈಟ್​ನಲ್ಲಿ ಪ್ರಕಟ: 5 ವಿಧಾನಸಭಾವಾರು ಮತದಾರರ ಮಾಹಿತಿಯನ್ನು ವೆಬ್ ಸೈಟ್​ನಲ್ಲಿ ಪ್ರಕಟಿಸಲಾಗುವುದು. ಸಮಸ್ಯೆ ಇದ್ದರೆ ವೆಬ್​​ಸೈಟ್​ನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮಾಹಿತಿಯನ್ನೂ ನೀಡಲಾಗುವುದು.

ಬೂತ್ ಮಟ್ಟದ ಏಜೆಂಟ್ ನೇಮಕ: ಬೂತ್ ಮಟ್ಟದ ಏಜೆಂಟ್ ನೇಮಿಸಿದರೆ, ಮತದಾರರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಎಲ್ಲಾ ಬಿಎಲ್​ಓಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗುವುದು.

ಎಲ್ಲ ವಲಯಗಳಿಗೂ ಎಡಿಒ: ನಗರದ ಎಲ್ಲಾ ವಲಯಗಳಿಗೂ ಎಡಿಒಗಳನ್ನು ಕೇಂದ್ರ ಚುನಾವಣಾ ಆಯೊಗ ನೇಮಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಬೂತ್ ನಿರೀಕ್ಷಕರನ್ನು ನಿಗದಿಪಡಿಸಿದ ಬಳಿಕ ಮತ್ತೊಮ್ಮೆ ಎಲ್ಲಾ ಮಾಹಿತಿಯನ್ನು ಜನರಿಗೆ ನೀಡುತ್ತೇವೆ.‌ ಕೇಂದ್ರ ಚುನಾವಣಾ ಆಯೋಗದಿಂದ ನಮಗೆ ಸೂಚನೆ ಬಂದಿದೆ.

ಇಮೇಲ್ ಮೂಲಕ ಮಾಹಿತಿ ರವಾನೆ: ಎಲ್ಲಾ ರಾಜಕೀಯ ಪಕ್ಷಗಳ ಇಮೇಲ್ ಐಡಿ ಪಡೆದುಕೊಂಡಿದ್ದೇವೆ.‌ ಅವರಿಗೆ ಮತಪಟ್ಟಿ ಪರಿಷ್ಕರಣೆಯ ಮಾಹಿತಿಯನ್ನು ಪ್ರತಿ ವಾರ ಸಲ್ಲಿಸುತ್ತಿದ್ದೇವೆ. ಶಿವಾಜಿನಗರ, ಚಿಕ್ಕಪೇಟೆ, ಮಹಾದೇವಪುರದಲ್ಲಿ ಪ್ರತಿ ಮನೆಗೆ ತೆರಳಿ ವಿಚಾರಿಸಿ ಶೇ.100ರಷ್ಟು ಮತಪಟ್ಟಿ ಪರಿಷ್ಕರಣೆ ಮಾಡುತ್ತೇವೆ ಎಂದು ಆಯುಕ್ತರು ತಿಳಿಸಿದರು.

ಇದನ್ನೂ ಓದಿ:MLC ವಿಶ್ವನಾಥ್ ಉಪ ಚುನಾವಣೆಗೆ 15 ಕೋಟಿ ತೆಗೆದುಕೊಂಡಿದ್ದರು: ಶ್ರೀನಿವಾಸ್ ಪ್ರಸಾದ್ ಹೊಸ ಬಾಂಬ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.