ETV Bharat / state

ವೊಯ್ಲ್ಯಾ ರೆಸಾರ್ಟ್ ಎಂಡಿಗೆ ಬೆದರಿಕೆ ಹಾಕಿದ ಪ್ರಕರಣ: ಆರೋಪಿ ಬಂಧಿಸಿದ ಮಲ್ಲೇಶ್ವರಂ ಪೊಲೀಸರು - Viola Resort

ವೊಯ್ಲ್ಯಾ ರೆಸಾರ್ಟ್​ನ ಎಂಡಿಗೆ ಹಣ ನೀಡುವಂತೆ ಬೆದರಿಕೆ ಹಾಕಿದ ಆರೋಪದಡಿ ಗುತ್ತಿಗೆದಾರ ಬಿನೋಯ್​ ಜೋಸೆಫ್​ನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಬಿನೋಯ್ ಜೋಸೆಫ್ ಬಂಧನ
ಬಿನೋಯ್ ಜೋಸೆಫ್ ಬಂಧನ
author img

By

Published : Dec 6, 2020, 7:52 PM IST

ಬೆಂಗಳೂರು: ಮಲ್ಲೇಶ್ವರಂ ಪೊಲೀಸರಿಂದ ವೊಯ್ಲ್ಯಾ ರೆಸಾರ್ಟ್​ನ ಗುತ್ತಿಗೆದಾರ ಬಿನೋಯ್​​ ಜೋಸೆಫ್​ನನ್ನು ಬಂಧಿಸಲಾಗಿದೆ.

ಬೇಲೂರು ಸಮೀಪ ನಿರ್ಮಾಣವಾಗುತ್ತಿರುವ ರೆಸಾರ್ಟ್​ನ ಗುತ್ತಿಗೆ ಪಡೆದು ಗುಣಮಟ್ಟದ ಕಾಮಗಾರಿ ಮಾಡದ ಹಿನ್ನೆಲೆ ಎಂಡಿ ಉದಯಕುಮಾರ್​ ಗದರಿಸಿದ್ದರು. ಆದರೆ ಕಾಮಗಾರಿ ಮಾಡದೇ ಹಣ ನೀಡುವಂತೆ ಬಿನೋಯ್ ಜೋಸೆಫ್ ಬೆದರಿಕೆ ಹಾಕಿದ್ದರು. ಜೊತೆಗೆ ರೆಸಾರ್ಟ್ ‌ಮುಂದೆ ಪ್ರತಿಭಟನೆ ಮಾಡಿ ಸುಳ್ಳು ಆರೋಪ ಮಾಡಿದ್ದರು. ಈ ವೇಳೆ ಕಂಪನಿಯ ಎಂಡಿಗೆ ಕೆರೆ ಮಾಡಿ ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗ್ತಿದೆ.

ಬಿನೋಯ್ ಜೋಸೆಫ್ ಬಂಧನ
ಆರೋಪಿ ಬಿನೋಯ್ ಜೋಸೆಫ್ ಬಂಧನ

ಹಣ ನೀಡದ ಹಿನ್ನೆಲೆ ಅವಾಚ್ಯ ಪದಗಳಿಂದ ನಿಂದಿಸಿ‌ ಜೀವಬೆದರಿಕೆ ಹಾಕಿದ್ದ. ಈತನ ಜೊತೆ ಇದ್ದ ಮತ್ತೊಬ್ಬ ಆರೋಪಿ ಮೂಡಿಗೆರೆಯ ಚಂದ್ರು ಆರ್. ವಡೆಯರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 32ನೇ ಎಸಿಎಂಎಂ ಕೋರ್ಟ್​ನಲ್ಲಿ ಉದಯಕುಮಾರ್ ಪಿಸಿಆರ್ ದಾಖಲಿಸಿದ್ದರು. ಕೋರ್ಟ್ ಆದೇಶದ‌ ಮೇರೆಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.