ETV Bharat / state

ಅತಂತ್ರ ವಿಧಾನಸಭೆ ಸೃಷ್ಟಿ ಬೇಡ, ಬಿಜೆಪಿ ಬಹುಮತದಿಂದ ಸರ್ಕಾರ ರಚಿಸಬೇಕು: ಅಮಿತ್ ಶಾ ಸೂಚನೆ

ಸರ್ಕಾರದ ಯೋಜನೆಗಳನ್ನು ಮನೆ-ಮನೆಗೆ ತಲುಪಿಸುವ ಮೂಲಕ ಮತ್ತೊಮ್ಮೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಅಮಿತ್​ ಶಾ ಅವರು ಸೂಚಿಸಿದ್ದಾಗಿ ಸಂಸದ ಬಿ.ವೈ.ವಿಜಯೇಂದ್ರ ಮಾಧ್ಯಮಗಳಿಗೆ ತಿಳಿಸಿದರು.

ಬಿಎಸ್​ ವಿಜಯೇಂದ್ರ ಗೃಹ ಮಂತ್ರಿ ಅಮಿತ್​ ಶಾ
ಬಿಎಸ್​ ವಿಜಯೇಂದ್ರ ಗೃಹ ಮಂತ್ರಿ ಅಮಿತ್​ ಶಾ
author img

By

Published : Mar 24, 2023, 12:13 PM IST

Updated : Mar 24, 2023, 1:14 PM IST

ಬಿ ವೈ ವಿಜಯೇಂದ್ರ ಹೇಳಿಕೆ

ಬೆಂಗಳೂರು: "ಯಡಿಯೂರಪ್ಪನವರು ಮತ್ತು ಅಮಿತ್ ಶಾರ ನಡುವೆ ರಾಜಕಾರಣದ ಹೊರತು ಬೇರೇನೂ ಚರ್ಚೆ ನಡೆಯುವುದಿಲ್ಲ. ಇಂದೂ ಕೂಡ ಅದೇ ರೀತಿಯ ಚರ್ಚೆಯಾಯಿತು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಾರದು, ಬಿಜೆಪಿ ಬಹುಮತದಿಂದ ಸರ್ಕಾರ ರಚಿಸಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆಯಿತು" ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಬಿಎಸ್ವೈ ಅಧಿಕೃತ ನಿವಾಸ ಕಾವೇರಿಯಲ್ಲಿ ಉಪಹಾರ ಕೂಟದ ನಂಚರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ಇಂದು ಯಡಿಯೂರಪ್ಪನವರ ಆಹ್ವಾನದ ಮೇರೆಗೆ ಉಪಹಾರಕ್ಕೆ ಬಂದಿದ್ದರು. ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಬಂದರು. ಉಪಹಾರದ ಸಂದರ್ಭದಲ್ಲಿ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಯಿತು. ರಾಜ್ಯದಲ್ಲಿ ಚುನಾವಣೆ ಎದುರಿಸಬೇಕಿದೆ, ಅದಕ್ಕಾಗಿ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಯಡಿಯೂರಪ್ಪ ಎಲ್ಲ ನಾಯಕರೂ ಸೇರಿ ಸುದೀರ್ಘ ಸಮಾಲೋಚನೆ ನಡೆಸಿದರು ಎಂದರು.

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಬಳಿಕ ಪಕ್ಷದಲ್ಲಿ ಯಡಿಯೂರಪ್ಪ ಸೈಡ್ ಲೈನ್ ಆಗಿದ್ದಾರೆ ಎಂದೆಲ್ಲಾ ಸುದ್ದಿ ಹರಡುತ್ತಿತ್ತು. ಆದರೆ ಅದು ತಪ್ಪು ಕಲ್ಪನೆ, ಪಕ್ಷದಲ್ಲಿ ಅವರನ್ನು ಕಡೆಗಣಿಸಿಲ್ಲ ಎಂದು ಹಲವು ಬಾರಿ ಬಿಎಸ್ವೈ ಖುದ್ದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ. ಸಿಎಂ ಆಗಿದ್ದಾಗ ಹೇಗಿದ್ದರೋ ಈಗಲೂ ಅದೇ ಬದ್ದತೆಯಿಂದ ಯಡಿಯೂರಪ್ಪ ಇದ್ದಾರೆ. ರಾಜಕಾರಣದಲ್ಲಿ ಎಲ್ಲವೂ ಸಹಜ. ಹಿಂದಿನ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಕೆಲವರು ಪಕ್ಷ ತೊರೆಯುವ ಊಹಾಪೋಹದ ಚರ್ಚೆ ನಡೆಸುತ್ತಿದ್ದಾರೆ. ಇದೆಲ್ಲದಕ್ಕೂ ಇತಿಶ್ರೀ ಹಾಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ವರುಣಾದಿಂದ ಸ್ಪರ್ಧೆ ಚಿಂತನೆ ಇಲ್ಲ: ಅಮಿತ್ ಶಾ ಇಂದು ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸಿದರು. ಇದರಿಂದ ನನಗೆ ಆನೆ ಬಲ ಬಂದಂತೆ ಆಗಿದೆ. ವರುಣಾದಿಂದ ಸ್ಪರ್ಧೆ ಮಾಡುವ ಚಿಂತನೆ ಇಲ್ಲ. ಶಿಕಾರಿಪುರ ಕ್ಷೇತ್ರದ ಜನತೆ, ಮತದಾರರ ಅಭಿಪ್ರಾಯ ಮೇರೆಗೆ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಈಗಾಗಲೇ ಅಲ್ಲಿ ಪ್ರವಾಸ ಮಾಡಿದ್ದು, ಮತ್ತೊಮ್ಮೆ ಪ್ರವಾಸ ಮಾಡುತ್ತೇನೆ. ಆದರೂ ಎಲ್ಲಿ ಸ್ಪರ್ಧೆ ಎನ್ನುವುದನ್ನು ಕೇಂದ್ರದ ನಾಯಕರ ನಿರ್ಧಾರಕ್ಕೆ ಬಿಡಲಾಗಿದೆ ಎಂದರು.

ಸೋಮಣ್ಣ ಹಿರಿಯರಿದ್ದಾರೆ, ಚಾಮರಾಜನಗರ ಉಸ್ತುವಾರಿಯೂ ಇದ್ದಾರೆ. ಅವರಿಗೆ ಅಲ್ಲಿಗೆ ಹೋಗಲು ಅಮಿತ್ ಶಾ ಹೇಳಿದ್ದರೆ ಅದಕ್ಕೆ ಕಾರಣ ಇರಲಿದೆ ಎಂದು ಸೋಮಣ್ಣಗೆ ಚಾಮರಾಜನಗರ ಜವಾಬ್ದಾರಿ ನೀಡಿದ್ದನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಬಿಎಸ್​ವೈ ಬದಲು ವಿಜಯೇಂದ್ರರಿಂದಲೇ ಮೊದಲು ಹೂಗುಚ್ಛ ಸ್ವೀಕರಿಸಿದ ಅಮಿತ್ ಶಾ!

Last Updated : Mar 24, 2023, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.