ETV Bharat / state

ಕೋರಂ ಕೊರತೆ.. ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ - Vidhana Parishad session postpone

ವಿಧಾನ ಪರಿಷತ್​ನಲ್ಲಿ ಅಧಿಕಾರಿಗಳ ಅನುಪಸ್ಥಿತಿ, ಸಚಿವರು ಹಾಗೂ ಸದಸ್ಯರ ಅನುಪಸ್ಥಿತಿಗೆ ಸಭಾಪತಿ ಬಸವರಾಜ ಹೊರಟ್ಟಿ ಸಾಕಷ್ಟು ಗರಂ ಆದರು. ಅಂತಿಮವಾಗಿ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಸೋಮವಾರಕ್ಕೆ ಕಲಾಪ ಮುಂದೂಡಿದರು.

Vidhana Parishad session
ವಿಧಾನ ಪರಿಷತ್​ ಕಲಾಪ
author img

By

Published : Mar 10, 2021, 3:59 PM IST

ಬೆಂಗಳೂರು: ವಿಧಾನ ಪರಿಷತ್​ ಕಲಾಪದಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕರು, ಸಚಿವರು ಹಾಗೂ ಸದಸ್ಯರ ಅನುಪಸ್ಥಿತಿಗೆ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆದರು.

ಭೋಜನ ವಿರಾಮ ಬಳಿಕ ಕಲಾಪ ಸೇರುತ್ತಿದ್ದಂತೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಎಲ್ಲಾ ಪಕ್ಷದ ಸಚೇತಕರು ಅನುಪಸ್ಥಿತರಿದ್ದರು. ಸಚಿವರೂ ಇರದ ಹಿನ್ನೆಲೆ ಬಜೆಟ್ ಮೇಲಿನ ಚರ್ಚೆಗೆ ಸದಸ್ಯರ ಕೊರತೆ ಕಾಡಿತು. ಇದೇ ವೇಳೆ ಹಲವು ಸದಸ್ಯರು ಸೋಮವಾರಕ್ಕೆ ಕಲಾಪ ಮುಂದೂಡುವಂತೆ ಒತ್ತಾಯಿಸಿದರು.

ಸಭಾಪತಿಗಳು ಹತ್ತು ನಿಮಿಷ ಮುಂದೂಡಬೇಕು ಇಲ್ಲವೇ ಸೋಮವಾರಕ್ಕೆ ಮುಂದೂಡಬೇಕು. ಎರಡೇ ಆಯ್ಕೆ ಇರುವುದು ಎಂದಾಗ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ ಅವರು ಕಾರಣ ನೀಡಿ ಕಲಾಪ ಮುಂದೂಡಿ ಎಂದು ಮನವಿ ಮಾಡಿದರು.

ಅಷ್ಟರಲ್ಲೇ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಆಗಮಿಸಿ ಎಲ್ಲಾ ಸದಸ್ಯರಿಗೂ ಕರೆ ಮಾಡಿದ್ದೇನೆ, ಬರುತ್ತಿದ್ದಾರೆ ಎಂದು ವಿವರಿಸಿದರು. ಪ್ರತಿಪಕ್ಷ ನಾಯಕರು ಸೇರಿದಂತೆ ಬಹುತೇಕ ಸದಸ್ಯರು ಸೋಮವಾರ ಬೆಳಗ್ಗೆ ಕಲಾಪ ಸಮಾವೇಶಗೊಂಡರೆ ಅನುಕೂಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಭಾಪತಿಗಳು ಆಡಳಿತ ಪಕ್ಷದ ಸದಸ್ಯ ರವಿಕುಮಾರ್ ಅಭಿಪ್ರಾಯ ಕೇಳಿದರು.

ವಿಧಾನಸಭೆ ಕಲಾಪ ಸಹ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ನಾಳೆ ಶಿವರಾತ್ರಿ ಇರುವ ಹಿನ್ನೆಲೆ ಬಹುತೇಕ ಸದಸ್ಯರು ತಮ್ಮ ಊರಿಗೆ ತೆರಳಿದ್ದಾರೆ. ಸದಸ್ಯರು ಬರುವುದು ಅನುಮಾನ ಎಂದು ರವಿಕುಮಾರ್ ವಿವರಿಸಿದರು.

ಬಿಎಸಿ ಸಭೆ ನಿರ್ಣಯ ಪ್ರಕಟ : ಮಾರ್ಚ್ 15ರಿಂದ 26ರವರೆಗೆ ಪ್ರತಿನಿತ್ಯ ಕೈಗೊಳ್ಳುವ ಚರ್ಚೆಗಳ ಕುರಿತು ಹಾಗೂ ಬೆಳಗಿನ ಹೊತ್ತು ಪ್ರಶ್ನೋತ್ತರ ಅವಧಿ ಹಾಗೂ ಸಂಜೆಯ ಅವಧಿಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಸುವ ಕುರಿತು ನಿರ್ಧಾರ ಸೇರಿದಂತೆ ಬಿಎಸಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಸದನಕ್ಕೆ ಮಾಹಿತಿ ನೀಡಿದರು.

ಬಿಎಸಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಇಂದು ಸಂಜೆ 4 ಗಂಟೆಯವರೆಗೆ ಕಲಾಪ ನಡೆಸಬೇಕಿತ್ತು. ಆದರೆ ಸದಸ್ಯರ ಕೊರತೆ ಕಾಡಿದ ಹಿನ್ನೆಲೆ ಸಭಾಪತಿ ಹೊರಟ್ಟಿ ವಿಧಾನಪರಿಷತ್ ಕಲಾಪವನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ಮುಂದೂಡಿದರು.

ಒಟ್ಟಾರೆ ವಿಧಾನ ಪರಿಷತ್​ನಲ್ಲಿ ಅಧಿಕಾರಿಗಳ ಅನುಪಸ್ಥಿತಿ, ಸಚಿವರು ಹಾಗೂ ಸದಸ್ಯರ ಅನುಪಸ್ಥಿತಿಗೆ ಸಭಾಪತಿ ಬಸವರಾಜ ಹೊರಟ್ಟಿ ಸಾಕಷ್ಟು ಗರಂ ಆದರು. ಅಂತಿಮವಾಗಿ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಸೋಮವಾರಕ್ಕೆ ಮುಂದೂಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.