ETV Bharat / state

ಜನಪ್ರತಿನಿಧಿಗಳ ಇತ್ತೀಚಿನ ವರ್ತನೆ ನೆನೆದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬೇಸರ - ಎಫ್​​ಕೆಸಿಸಿಐನ ಸರ್ ಎಂವಿ ಸ್ಮಾರಕ ಪ್ರಶಸ್ತಿ ಸಮಾರಂಭ

ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜ್ಯಸಭೆಯಲ್ಲಿ ನಡೆದಿದ್ದ ಗದ್ದಲ ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷಗಳು ಕಲಾಪ ವೇಳೆ ಅಶಿಸ್ತು ಪ್ರದರ್ಶಿಸಿದ್ದರಿಂದ ಕಲಾಪದ ನಡುವೆಯೂ ವೆಂಕಯ್ಯನಾಯ್ಡು ಭಾವುಕರಾಗಿದ್ದರು..

vice-president-venkaiah-naidu
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು
author img

By

Published : Aug 18, 2021, 2:41 PM IST

Updated : Aug 18, 2021, 3:38 PM IST

ಬೆಂಗಳೂರು : ರಾಜ್ಯಸಭೆ ಕಲಾಪ ವೇಳೆ ನಡೆದ ಘಟನೆಯಿಂದ ಬೇಸರ ಮೂಡಿತ್ತು. ಜನಪ್ರತಿನಿಧಿಗಳು ಜನರಿಗೆ ಮಾದರಿ ಆಗಿರ್ತಾರೆ, ಅದನ್ನ ಮನಸ್ಸಿನಲ್ಲಿಟ್ಟುಕೊಂಡು ವರ್ತಿಸಬೇಕಾಗುತ್ತದೆ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ಎಫ್​​ಕೆಸಿಸಿಐನ ಸರ್ ಎಂವಿ ಸ್ಮಾರಕ ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳಲ್ಲಿ ಶಾಸಕರು ತೋರಿದ ವರ್ತನೆ ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದರು.

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಚುನಾಯಿತ ಜನಪ್ರತಿನಿಧಿಗಳು ಜನರಿಗೆ ರೋಲ್ ಮಾಡೆಲ್ ಆಗಿರಬೇಕು, ಜನ ಟಿವಿಗಳಲ್ಲಿ ಜನಪ್ರತಿನಿಧಿಗಳನ್ನು ಗಮನಿಸುತ್ತಿರುತ್ತಾರೆ. ಜನಪ್ರತಿನಿಧಿಗಳ ನಡವಳಿಕೆ ಕೆಟ್ಟದಾಗಿದ್ದಾಗ ಜನ ಅಸಹ್ಯ, ಬೇಸರ ಪಟ್ಕೋತಾರೆ ಎಂದು ಜನಪ್ರತಿನಿಗಳಿಗೆ ಕಿವಿಮಾತು ಹೇಳಿದರು.

‘ಬೆಂಗಳೂರಲ್ಲಿ ಖುಷಿಯಿಂದ ಕಳೆದಿದ್ದೇನೆ’

ಬೆಂಗಳೂರಿನ ವಾತಾವರಣ ಅತ್ಯದ್ಭುತ, ಎಲ್ಲೆಡೆ ಹಸಿರು ತುಂಬಿದೆ, ತಂಪಿದೆ. ಹಸಿರು ಬದುಕಿಗೆ ಖುಷಿ ನೀಡುತ್ತೆ, ನಾನು ಪ್ರತೀ ಕ್ಷಣ ಕೂಡ ಬೆಂಗಳೂರಿನಲ್ಲಿ ಖುಷಿಯಿಂದ ಕಳೆದಿದ್ದೇನೆ. ಕರ್ನಾಟಕದ ಊಟ, ಜನ, ಮಣ್ಣು ಎಲ್ಲವೂ ನಮಗೆ ಪ್ರಿಯ ಎಂದರು.

ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರು ಕೈಗಾರಿಕೆ, ಆಡಳಿತ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಇವತ್ತಿಗೆ ಸರ್ ಎಂ ವಿಶ್ವೇಶ್ವರಯ್ಯನವರಂತವರ ಅವಶ್ಯಕತೆ ಇದೆ. ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ನನ್ನ ಅಂತರಾಳದಿಂದ ಹೇಳುತ್ತೇನೆಂದರು.

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

‘ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ನಂಬರ್ ಒನ್ ಆಗಬೇಕು’
ರಾಜ್ಯವನ್ನು ನಂಬರ್ ಒನ್ ಮಾಡಲು ಕೈಗಾರಿಕಾ ಕ್ಷೇತ್ರದವರ ಜತೆ ನಾನು ಒಂದು‌ ಮೈಲು ಹೆಚ್ಚು ಹೆಜ್ಜೆ ಹಾಕುತ್ತೇನೆ. ಈ ನಿಟ್ಟಿನಲ್ಲಿ ಕೈಗಾರಿಕಾ ಕ್ಷೇತ್ರದವರಿಗೆ ಸರ್ಕಾರದ ಸಹಕಾರ, ಬೆಂಬಲ ಸದಾ ಇರಲಿದೆ. ಜೊತೆಗೆ ಅಂತಹವರನ್ನ ಗುರುತಿಸಿ, ಪ್ರೋತ್ಸಾಹ ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ಆಶ್ವಾಸನೆ ನೀಡಿದರು.

ಓದಿ: ಅಧಿಕಾರ ಸ್ವೀಕರಿಸದ ಸಚಿವ ಆನಂದ್ ಸಿಂಗ್: 'ನೀವುಂಟು, ಅವರುಂಟು' ಎಂದ ಸಿಎಂ

Last Updated : Aug 18, 2021, 3:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.