ETV Bharat / state

ಬೆಲೆ ಏರಿಕೆ ಸಂಬಂಧ ಸಿದ್ದರಾಮಯ್ಯ ಚರ್ಚೆ: ವಿಧಾನಸಭೆಯಲ್ಲಿ ಆಡಳಿತ-ಪ್ರತಿಪಕ್ಷದ ನಡುವೆ ವಾಕ್ಸಮರ - ಕಲಾಪದಲ್ಲಿ ಆಡಳಿತ-ಪ್ರತಿಪಕ್ಷದ ನಡುವೆ ಮಾತಿನ ಸಮರ

ಇಂದು ನಡೆದ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಬಂಧಿಸಿದಂತೆ ಮಾತನಾಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಸಮರ ನಡೆಯಿತು.

Siddaramaiah
ಸಿದ್ದರಾಮಯ್ಯ
author img

By

Published : Sep 15, 2021, 5:42 PM IST

Updated : Sep 15, 2021, 7:10 PM IST

ಬೆಂಗಳೂರು: ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಪರಸ್ಪರ ಮಾತಿನ ಸಮರ, ಕೂಗಾಟ ನಡೆದು ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ನಿಯಮ 69 ರಡಿ ಬೆಲೆ ಏರಿಕೆ ಮೇಲೆ ಚರ್ಚೆ ಆರಂಭಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಅಕ್ಕಿ, ಬೇಳೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಜನಸಾಮಾನ್ಯರು ಜೀವನ ಮಾಡುವುದೇ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.

'ಕ್ರಿಮಿನಲ್ ಲೂಟಿ ಎಂದಿದ್ದರು':

ಈ ಹಿಂದೆ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್, ಡೀಸೆಲ್ ಬೆಲೆ 7 ಹೆಚ್ಚಾಗಿದ್ದಕ್ಕೆ ಆಗಿನ ವಿರೋಧ ಪಕ್ಷದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಇದನ್ನು 'ಕ್ರಿಮಿನಲ್ ಲೂಟಿ'ಎಂದು ಕರೆದಿದ್ದರು. ಈಗ ನಾವು ಏನು ಕರೆಯಬೇಕು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಾನೂ ಸಹ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವನ್ನು ಕ್ರಿಮಿನಲ್ ಲೂಟಿ ಎಂದೇ ಕರೆಯುತ್ತೇನೆ ಎಂದರು.

ಬೆಲೆ ಏರಿಕೆ ಮೇಲೆ ಚರ್ಚೆ ಆರಂಭಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಸಿದ್ದರಾಮಯ್ಯ ಆರೋಪ:

ಕಳೆದ 7 ವರ್ಷಗಳಲ್ಲಿ ಹಿಂದೆಂದೂ ಕಾಣದಷ್ಟು ಬೆಲೆ ಏರಿಕೆಯಾಗಿದೆ. ಅದರಲ್ಲೂ ಕಳೆದ ಎರಡು ವರ್ಷಗಳಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದ ಆಹಾರ ಧಾನ್ಯಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಇಂಧನ ದರವನ್ನು ಇಳಿಸಿಲ್ಲ ಎಂದು ಆರೋಪಿಸಿದರು.

ಸಂಸತ್ ಭಾಷಣವೋ, ವಿಧಾನಸಭೆ ಭಾಷಣವೋ:

ಈ ವೇಳೆ ಮಧ್ಯೆ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು, ಪೆಟ್ರೋಲ್, ಡೀಸೆಲ್ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ರಾಜ್ಯಕ್ಕೂ ಅದಕ್ಕೂ ಸಂಬಂಧ ಇಲ್ಲ. ಸಂಸತ್ತಿನಲ್ಲಿ ಇದನ್ನು ಹೇಳಲಿ, ಇಲ್ಲಿ ಮಾಡುತ್ತಿರುವುದು ಸಂಸತ್ ಭಾಷಣವೋ, ವಿಧಾನಸಭೆ ಭಾಷಣವೋ ಎಂದು ಆಕ್ಷೇಪ ಎತ್ತಿದರು. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರು ಏಕಾಏಕಿ ಎದ್ದು ಮಾಧುಸ್ವಾಮಿಯವರ ವಿರುದ್ಧ ಮುಗಿಬಿದ್ದರು. ಈ ಹಂತದಲ್ಲಿ ಸದನದಲ್ಲಿ ಗದ್ದಲದ ವಾತಾವರಣ ಉಂಟಾಗಿ ಗೊಂದಲ ನಿರ್ಮಾಣವಾಯಿತು.

ವಿಧಾನಸಭೆಯಲ್ಲಿ ಆಡಳಿತ-ಪ್ರತಿಪಕ್ಷದ ನಡುವೆ ವಾಕ್ಸಮರ

ಗದ್ದಲದಲ್ಲೇ ಮಾತು ಮುಂದುವರೆಸಿದ ಸಿದ್ದರಾಮಯ್ಯನವರು, ನಾನು ಬೆಲೆ ಏರಿಕೆ ಬಗ್ಗೆ ಮಾತನಾಡುವುದು ಬೇಡ ಎಂದರೆ ಹೇಗೆ, ಇದು ರಾಜ್ಯಕ್ಕೆ ಸಂಬಂಧಿಸಿದ್ದು, ಬೆಲೆ ಏರಿಕೆಯಿಂದ ಕರ್ನಾಟಕದ ಜನರಿಗೂ ತೊಂದರೆಯಾಗಿದೆ. ಪಾರ್ಲಿಮೆಂಟ್‌ನಲ್ಲಿ ಮಾತನಾಡಿ ಎಂದರೆ ಹೇಗೆ ಎಂದು ಹರಿಹಾಯ್ದರು.

ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಬೆಲೆ ಏರಿಕೆಯಿಂದ ಆಗಿರುವ ತೊಂದರೆಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಬೆಲೆ ಏರಿಕೆಗೆ ತೈಲ ಬಾಂಡ್ ಕಾರಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಾರಣ ಎಂದು ಬಿಜೆಪಿ ಹೇಳುತ್ತಿರುವುದು ಸರಿಯಲ್ಲ. ಎಲ್ಲಾ ವಿಚಾರಗಳನ್ನು ಸಂಸತ್‌ನಲ್ಲಿ ಮಾತನಾಡಬೇಕು ನಿಜ. ಸಾಧ್ಯವಾದರೆ ಎಲ್ಲರೂ ಒಪ್ಪುವುದಾದರೆ ಬೆಲೆ ಏರಿಕೆ ವಿರುದ್ಧ ಸದನದಲ್ಲಿ ಒಂದು ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸೋಣ ಎಂದು ಸಲಹೆ ಮಾಡಿದರು.

ಮತ್ತೆ ಸದಸ್ಯರ ನಡುವೆ ವಾಗ್ವಾದ :

ಈ ಹಂತದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಎದ್ದು ನಿಂತು ಬೆಲೆ ಏರಿಕೆ ನಿರಂತರ ಪ್ರಕ್ರಿಯೆ. ಸುಮ್ಮನೆ ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ಮತ್ತೆ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದವು.

ತೈಲ ಬಾಂಡ್‌ ಸಮರ್ಥಿಸಿಕೊಂಡ ಸಿದ್ದು:

ಗದ್ದಲದಲ್ಲೇ ಮತ್ತೆ ಮಾತು ಮುಂದುವರೆಸಿದ ಸಿದ್ದರಾಮಯ್ಯನವರು ತೈಲ ಬಾಂಡ್ ತಂದಿದ್ದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ನಿಜ. ಆ ಕಾಲದಲ್ಲಿ ಅವರು ಕಾಲ ಕಾಲಕ್ಕೆ ಬಡ್ಡಿ, ಅಸಲು ಎಲ್ಲವನ್ನು ಕಟ್ಟಿದ್ದಾರೆ ಎಂದು ಹೇಳಿದಾಗ, ಸಚಿವ ಆರ್. ಅಶೋಕ್ ಎದ್ದುನಿಂತು ತೈಲ ಬಾಂಡ್ ತಂದಿದ್ದು ಸರಿಯೇ ತಪ್ಪೇ ಎನ್ನುವುದನ್ನು ನೀವೇ ಹೇಳಿ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯನವರು ಆ ಸಂದರ್ಭದಕ್ಕೆ ಸರಿ ಇತ್ತು. ತೈಲ ಕಂಪೆನಿಗಳು ಮತ್ತು ಗ್ರಾಹಕರ ಮೇಲೆ ಬೆಲೆ ಏರಿಕೆ ಬರೆ ಬೀಳಬಾರದು ಎಂಬ ಉದ್ದೇಶದಿಂದ ತೈಲ ಬಾಂಡ್ ಮಾಡಲಾಗಿತ್ತು ಎಂದು ತೈಲ ಬಾಂಡ್‌ನ್ನು ಸಮರ್ಥಿಸಿಕೊಂಡರು.

ಬೆಲೆ ಏರಿಕೆಯಿಂದ ಶ್ರೀಸಾಮಾನ್ಯರಿಗೆ ತೊಂದರೆ:

ಮತ್ತೆ ಬೆಲೆ ಏರಿಕೆಯ ಮೇಲೆ ತಮ್ಮ ಮಾತನ್ನು ಕೇಂದ್ರೀಕರಿಸಿದ ಸಿದ್ದರಾಮಯ್ಯನವರು ಬೆಲೆ ಏರಿಕೆ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಶ್ರೀಸಾಮಾನ್ಯ ಈಗಾಗಲೇ ತೆರಿಗೆ ಹೊರೆಯಿಂದ ಬಳಲುತ್ತಿದ್ದಾನೆ. ಬೆಲೆ ಏರಿಕೆ ಶ್ರೀಸಾಮಾನ್ಯನ ಜೀವನವನ್ನು ದುಸ್ತರಗೊಳಿಸಿದೆ. ಕಳೆದ ಏಳು ವರ್ಷಗಳಲ್ಲಿ ಕರ್ನಾಟಕ ರಾಜ್ಯ ಒಂದರಿಂದಲೆ ಪೆಟ್ರೋಲ್-ಡೀಸೆಲ್ ಸುಂಕ ಕೇಂದ್ರ ಸರ್ಕಾರಕ್ಕೆ 21 ಸಾವಿರ ಕೋಟಿ ರೂ. ಸಂದಾಯವಾಗಿದೆ. ಸದನದಲ್ಲಿ ಆಗಾಗ ಮಾತಿನ ಚಕಮಕಿಯಾಗುತ್ತಿತ್ತು. ಭೋಜನದ ಸಮಯವಾಗಿದ್ದರಿಂದ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.

ಮಂತ್ರಿಗಳನ್ನು ಕಿಚಾಯಿಸಿದ ಸಿದ್ದರಾಮಯ್ಯ

ಮುಂದಿನ ಸಾಲಿನ ಮಂತ್ರಿಗಳೆಲ್ಲಿ? :

ಬೆಲೆ ಏರಿಕೆ ಬಗ್ಗೆ ಸದನದಲ್ಲಿ ಚರ್ಚೆ ನಡೆಸುತ್ತಿದ್ದ ವೇಳೆ ಆಡಳಿತ ಪಕ್ಷದ ಮುಂದಿನ ಸೀಟುಗಳನ್ನು ಗಮನಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, 'ಯಾರೂ ಮಂತ್ರಿಗಳೇ ಇಲ್ಲ. ಎಲ್ಲಿ ಮಂತ್ರಿಗಳು ಮಾಧುಸ್ವಾಮಿ ಅವರೇ' ಎಂದು ಪ್ರಶ್ನಿಸಿದರು. ಆಗ ಮುಂದಿನ ಸಾಲಿನಲ್ಲಿ ಕುಳಿತ್ತಿದ್ದ ಮಾಧುಸ್ವಾಮಿ, ನಾನೂ ಮಂತ್ರಿಯೇ ಎಂದರು.

ತಕ್ಷಣ ಸಿದ್ದರಾಮಯ್ಯನವರು, ನೀವು ಮಂತ್ರಿಯೇ. ಆದರೆ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಮಂತ್ರಿಗಳೆಲ್ಲಿ ಎಂದರು. ಇದಕ್ಕೆ ಮಧ್ಯಪ್ರವೇಶಿಸಿದ ನಾರಾಯಣಗೌಡರನ್ನು ಕುರಿತು ನೀವು ಬಡ್ತಿ ಪಡೆದು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಪ್ಪ ಎಂದು ಕಿಚಾಯಿಸಿದರು.

ಇದನ್ನೂ ಓದಿ: ಸದನದ ಸ್ವಾರಸ್ಯ.. ಸಿದ್ದರಾಮಯ್ಯ ದೆಹಲಿ ಪೊಲಿಟಿಕ್ಸ್.. ಈಶ್ವರಪ್ಪ ಅಲ್ಲೂ ಹೋಗಲ್ಲ, ಇಲ್ಲೂ ಉಳಿಯಲ್ವಂತೆ..

Last Updated : Sep 15, 2021, 7:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.