ಬೆಂಗಳೂರು: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಯ್ತು... ಇದೀಗ ದಿನಬಳಕೆ ವಸ್ತುಗಳ ಬೆಲೆ ಮಿತಿಮೀರಿ ಹೆಚ್ಚಾಗುತ್ತಿದ್ದು, ದಿನಗೂಲಿ ಮಾಡುವ ಕಾರ್ಮಿಕರಿಂದ ಹಿಡಿದು ಮಧ್ಯಮ ವರ್ಗದವರಿಗೆ ಬಿಸಿ ತುಪ್ಪದಂತಾಗಿದೆ.
ಕಳೆದೆರಡು ವರ್ಷಗಳಿಂದ ಕೊರೊನಾ ಬೀರಿದ ಆರ್ಥಿಕ ಪರಿಣಾಮದಿಂದ ಜನತೆ ಕೊಂಚ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಅಗತ್ಯ ವಸ್ತಗಳ ಬೆಲೆ ಏರಿಕೆಯಾಗಿರುವುದು ಮತ್ತಷ್ಟು ಹೊಡೆತ ಬೀರಿದೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾದ ಪರಿಣಾಮ ಅಗತ್ಯ ವಸ್ತುಗಳ ಬೆಲೆಯೂ ಅಧಿಕವಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಅಗತ್ಯ ವಸ್ತುಗಳನ್ನು ತರುವಾಗ ಸರಕು ಸಾಗಣೆ ವೆಚ್ಚ ಹೆಚ್ಚಾಗಿದೆ. ಇದರಿಂದ ಅವುಗಳನ್ನು ಸಾಗಣೆ ಮಾಡಲು ವಾಹನಗಳಿಗೆ ಪೆಟ್ರೋಲ್ ಡಿಸೇಲ್ ಹಾಕಿಸಲೇ ಬೇಕು.
ಇದರಿಂದ ದೈನಂದಿನ ಸಾಮಗ್ರಿಗಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ. ಹಲವೆಡೆ ಮಳೆಯಾಗುತ್ತಿರುವುದರಿಂದ ತರಕಾರಿ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತದೆ. ಆದರೆ, ಇದು ತಾತ್ಕಾಲಿಕವಾಗಿ ಪರಿಣಾಮ ಬಿರುತ್ತದೆ. ವಿನಃ ದಿನಸಿ ಸಾಮಗ್ರಿ ಇದಕ್ಕಿಂತ ಹೆಚ್ಚು ಏರಿಕೆ ಆಗಲಿದೆ ಎಂದು ಎಪಿಎಂಸಿಯ ಕಾರ್ಮಿಕ ಸಂಘದ ಅಧ್ಯಕ್ಷ ಅರುಣ್ ಪರಮೇಶ್ ಹೇಳಿದರು.
ಹೇಗಿದೆ ತರಕಾರಿ ಬೆಲೆ ( ಹಾಪ್ ಕಾಮ್ಸ್ ದರ)
ತರಕಾರಿ- ದರ
- ಬೆಳ್ಳುಳ್ಳಿ- 136 ರೂ.
- ಚೆರಿ ಟೊಮೋಟೊ- 120 ರೂ.
- ಟೊಮೇಟೊ- 54 ರೂ.
- ದಪ್ಪ ಮೆಣಸಿನಕಾಯಿ- 114 ರೂ.
- ಹಸಿ ಮೆಣಸಿನಕಾಯಿ- 52 ರೂ.
- ಕ್ಯಾರೆಟ್- 80 ರೂ.
- ನಾಟಿ ಕ್ಯಾರೆಟ್- 75 ರೂ.
- ಹುರಳಿಕಾಯಿ(ಬೀನ್ಸ್)- 62 ರೂ.
- ಬದನೆಕಾಯಿ- 44 ರೂ.
- ಸೌತೆಕಾಯಿ- 22 ರೂ.
- ನುಗ್ಗೆ ಕಾಯಿ- 100 ರೂ.
- ಶುಂಠಿ- 84 ರೂ.
- ಈರುಳ್ಳಿ- 35( ಮಧ್ಯಮ)
- ಸಾಂಬರ್ ಈರುಳ್ಳಿ- 56 ರೂ.
- ಆಲೂಗಡ್ಡೆ- 32 ರೂ.
- ಮೂಲಂಗಿ- 51 ರೂ.
ದುಬಾರಿಯಾದ ಸೊಪ್ಪು:
- ಕೊತ್ತಂಬರಿ ಸೊಪ್ಪು- 150 ರೂ.
- ಮೆಂತ್ಯ ಸೊಪ್ಪು- 140 ರೂ.
- ಪಾಯಿ ಪಾಲಕ್ ಸೊಪ್ಪು- 104 ರೂ.
- ಸಬ್ಬಕ್ಕಿ ಸೊಪ್ಪು- 110 ರೂ.
- ಕರಿಬೇವು- 60 ರೂ.
- ಸೊಪ್ಪು- 67 ರೂ.
ತೆಂಗಿನ ಕಾಯಿ-32 ರೂ.
- ( ದಪ್ಪ) 28 ರೂ.
- ( ಮಧ್ಯಮ)22 ರೂ.
- ( ಸಣ್ಣ)17 ರೂ.