ಬೆಂಗಳೂರು : ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸಿ ಪ್ರತಿಭಟನಾ ನಿರತ ಸಾರಿಗೆ ನೌಕರರಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ತಮ್ಮ ಹಕ್ಕಿಗಾಗಿ ಹೋರಾಟ ಮಾಡುವಂತಹವರು ಕಡಿಮೆ ಎಂದರು.
ಸಾರಿಗೆ ನೌಕರರು ತಮ್ಮ ಪ್ರಮಾಣಿಕ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಗಂಭೀರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಯಡಿಯೂರಪ್ಪ ಸರ್ಕಾರ ಹಠಮಾರಿತನ ಮಾಡುತ್ತಿದೆ. ಸಾರಿಗೆ ನೌಕರರಿಗೆ ಬೆದರಿಕೆ ಒಡ್ಡುತ್ತಿದೆ. ಒಂದು ನಿಗಮಕ್ಕೆ ಒಂದೇ ಬಸ್ ಇದೆ. ಎರಡು ಸಾವಿರ ಬಸ್ ಬಿಟ್ಟಿರುವುದು ಸುಳ್ಳು ಎಂದು ದೂರಿದರು.
ಯಡಿಯೂರಪ್ಪ ಸರ್ಕಾರ ಭೋಗಸ್ ಸರ್ಕಾರ. ಸಾರಿಗೆ ನೌಕರರ ಸಮಸ್ಯೆಗಳು ಬಗೆಹರಿಸಲಿಲ್ಲ ಅಂದ್ರೇ ನಾವೂ ಬೀದಿಗೆ ಬರ್ತೀವಿ, ಹೋರಾಟ ಮಾಡುತ್ತೇವೆ. ನಾವು ಹಿಟ್ಲರ್ ಕಥೆ ಓದಿದ್ದೇವೆ. ಮತ್ತೊಮ್ಮೆ ಯಡಿಯೂರಪ್ಪ ಹಿಟ್ಲರ್ ಪಾತ್ರ ವಹಿಸುತ್ತಿದ್ದಾರೆ. ಸಾರಿಗೆ ನೌಕರರ ಜೊತೆ ಮಾತುಕಥೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.
ರಾಜ್ಯದ ಜನ ಸಾಮಾನ್ಯರಿಗೆ ಲಾಕ್ಡೌನ್ನಿಂದ ತೊಂದರೆಯಾಗುತ್ತದೆ. ಮೊದಲು ಆಸ್ಪತ್ರೆ ಸುಧಾರಿಸಬೇಕು. ನಮಗೆ ಲಾಕ್‌ಡೌನ್ ಬೇಡ ಎಂದು ಇದೇ ವೇಳೆ ವಾಟಾಳ್ ಒತ್ತಾಯಿಸಿದರು.