ಬೆಂಗಳೂರು: ಶುಕ್ರವಾರ ರಾಜ್ಯದಲ್ಲಿ ನಡೆ ಬೃಹತ್ ಲಸಿಕಾ ಅಭಿಯಾನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ದಿನದಲ್ಲಿ 4,04,496 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ "ಬೃಹತ್ ಕೋವಿಡ್ ಲಸಿಕಾ ಅಭಿಯಾನ" ನಗರದಾದ್ಯಂತ ಸುಮಾರು 2,200 ಲಸಿಕಾ ಕೇಂದ್ರಗಳಲ್ಲಿ ಲಸಿಕಾ ಕಾರ್ಯ ನಡೆದಿದ್ದು, ಒಂದೇ ದಿನ 4,04,496 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ.
ಲಸಿಕೆ ಹಾಕಿರುವುದರಲ್ಲಿ ದೇಶದ ನಗರಗಳ ಪೈಕಿ ಪಾಲಿಕೆಯು ಪ್ರಥಮ ಸ್ಥಾನದಲ್ಲಿದೆ. ಲಸಿಕಾ ಅಭಿಯಾನದ ಗುರಿ ತಲುಪಲು ನಾಳೆಯೂ ಸಹ ಅಭಿಯಾನ ಕಾರ್ಯಕ್ರಮ ಮುಂದುವರೆಸಲಿದೆ. ಕಳೆದ ಸಾಲಿನಲ್ಲಿ ಸಾಧಿಸಿದ ಪ್ರಗತಿಗಿಂತ 2.5 ರಷ್ಟು ಹೆಚ್ಚು ಪ್ರಗತಿ ಸಾಧಿಸಿದಂತಾಗಿದೆ. ಅಲ್ಲದೇ ಮೊದಲನೇ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯದವರು ಲಸಿಕಾ ಸ್ಥಳಗಳಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳಬಹುದು.
ಅಲ್ಲದೇ, ಯಲಹಂಕ ಮತ್ತು ಮಲ್ಕೇಶ್ವರಂ ನಲ್ಲಿ ಸ್ಥಾಪಿಸಿರುವ ಬೃಹತ್ ಲಸಿಕಾ ಶಿಬಿರಗಳಲ್ಲಿಯೂ ಸಹ ಅಭಿಯಾನ ಕಾರ್ಯಕ್ರಮ ನಡೆಯುತ್ತಿದೆ. ನಗದಲ್ಲಿ ವ್ಯವಸ್ಥೆ ಮಾಡಿರುವ ಲಸಿಕಾ ಕೇಂದ್ರಗಳ ಮಾಹಿತಿ ಪಡೆಯಲು https://bit.ly/cvcdetails ವೆಬ್ ಲಿಂಕ್ಗೆ ಬೇಟಿ ಕೊಡಬಹುದು ಅಥವಾ ಸಹಾಯವಾಣಿ ಸಂಖ್ಯೆ ‘1533’ಗೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಲಸಿಕೆ ಪಡೆಯಬಹುದು ಎಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ತಿಳಿಸಿದ್ದಾರೆ.
ಇದನ್ನು ಓದಿ:ದೇಶಾದ್ಯಂತ 2.25 ಕೋಟಿ ಕೋವಿಡ್ ಲಸಿಕೆ ಡೋಸ್ ವಿತರಣೆ: ಮೋದಿ ಜನ್ಮದಿನದಂದು ಐತಿಹಾಸಿಕ ದಾಖಲೆ