ETV Bharat / state

ರಾಜೀವ್ ಗಾಂಧಿ ವಸತಿ ಯೋಜನೆಯ 2ನೇ ಹಂತದಲ್ಲಿ 54 ಸಾವಿರ ಮನೆ ನಿರ್ಮಾಣ : ವಿ ಸೋಮಣ್ಣ

author img

By

Published : Nov 29, 2020, 4:10 PM IST

ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಕಾಮಗಾರಿ ಸ್ಥಳವನ್ನು ವಸತಿ ಸಚಿವ ವಿ ಸೋಮಣ್ಣ ಪರಿವೀಕ್ಷಣೆ ನಡೆಸಿದರು..

V Somanna
ವಿ ಸೋಮಣ್ಣ

ಬೆಂಗಳೂರು : ಮೊದಲ ಬಾರಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರಗೂ 1 ಲಕ್ಷ ಮನೆಯ ಪ್ರಗತಿ ನೋಡಲು ಹೋಗುತ್ತಿದ್ದೇವೆ. ಅಸಂಘಟಿತ ಕಾರ್ಮಿಕರಿಗೆ ಸೇರಿ ಅನೇಕ ಕುಟುಂಬಗಳಿಗೆ ಮನೆ ನೀಡುತ್ತಿದ್ದೇವೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ವಸತಿ ಸಚಿವ ವಿ ಸೋಮಣ್ಣ ಮಾತನಾಡಿದರು

ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಕಾಮಗಾರಿ ಸ್ಥಳ ಪರಿವೀಕ್ಷಣೆ ನಡೆಸಿದರು.

ಪರಿಶೀಲನೆ ನಡೆಸಿ ಮಾತನಾಡಿದ ಅವರು, ಗಾಣಿಗರಹಳ್ಳಿಯಲ್ಲಿ, ಅಗ್ರಹಾರ ಪಾಳ್ಯ, ಪಿಳ್ಳಹಳ್ಳಿ, ಲಕ್ಷ್ಮಿಪುರದಲ್ಲಿ ಮನೆ ನಿರ್ಮಾಣ ಆಗ್ತಿದೆ. ಈಗಾಗಲೇ 4 ವರ್ಷ ತಡವಾಗಿದೆ. ಮುಂದೆ ಹೀಗೆ ಆಗೋದು ಬೇಡ ಎಂದರು.

ನಾನು ಡಿಸೆಂಬರ್ 1 ರಿಂದ 4ರವರೆಗೂ ಬೀದರ್ ಸೇರಿ ಹಲವು ಕಡೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಈಗಾಗಲೇ 48 ಸಾವಿರ ಮನೆ ಮಾಡಲು ಟೆಂಡರ್ ಮಾಡಲಾಗಿದೆ. 4 ವರ್ಷದ ಯೋಜನೆ ಸ್ಥಗಿತಗೊಂಡಿತ್ತು. ಸಿಎಂ ಅವರ ಜೊತೆ ಮಾತನಾಡಿ ಕಾಮಗಾರಿ ವೀಕ್ಷಣೆ ನಡೆಸ್ತಿದ್ದೇವೆ ಎಂದರು.

V Somanna reviewing Rajiv Gandhi Housing Scheme building
ರಾಜೀವ್ ಗಾಂಧಿ ವಸತಿ ಯೋಜನೆಯ ಕಟ್ಟಡ ಪರಿಶೀಲನೆ
ಗಾಣಿಗರಹಳ್ಳಿಯಲ್ಲಿ 900 ಮನೆಗಳು ಆಗ್ತಿವೆ. ಅದು ಐದು ಎಕರೆ ಜಾಗದಲ್ಲಿ. ಇಲ್ಲಿಯೇ ಅಂಗನವಾಡಿ, ಪ್ರಾಥಮಿಕ ಶಾಲೆಯನ್ನ ನಿರ್ಮಿಸಲಾಗ್ತಿದೆ. 12-13 ತಿಂಗಳಲ್ಲಿ ಮುಗಿಯೋದಕ್ಕೆ ಡೆಡ್‌ಲೈನ್ ಕೊಟ್ಟಿದ್ದೇವೆ. 1 ಲಕ್ಷ ಮನೆಗಳನ್ನ ಕಟ್ಟಿ ಕೊಡೋದು ಪ್ರಧಾನಿ ಮೋದಿಯವರ ಕನಸಾಗಿದೆ ಎಂದರು.
ಬಡವರಿಗೆ, ಅಸಂಘಟಿತ ಕಾರ್ಮಿಕರಿಗೆ ಈ ಮನೆಗಳು ತಲುಪಬೇಕು. 36 ಸಾವಿರ ಅರ್ಜಿಗಳು ಬಂದಿವೆ. ಅರ್ಹತೆ ಪಡೆದವರಿಗೆ ಮನೆಗಳನ್ನ ಕೊಡಲಾಗುತ್ತೆ.12-13 ತಿಂಗಳಲ್ಲಿ ಫಲಾನುಭವಿಗಳಿಗೆ ಮನೆಗಳು ಸಿಗುತ್ತಿವೆ ಎಂದು ಹೇಳಿದರು.

4,475 ಕೋಟಿ ವೆಚ್ಚದಲ್ಲಿ ಸುಮಾರು 334 ಎಕರೆಯಲ್ಲಿ ಮನೆಗಳು ನಿರ್ಮಾಣವಾಗುತ್ತಿವೆ. ಈಗಾಗಲೇ 31,382 ಮನೆಗಳ ನೆಲಸಮಗೊಳಿಸುವ ಕಾರ್ಯ ಮುಕ್ತಾಯಗೊಂಡಿದ್ದು.16 ಸಾವಿರ ಮನೆಗಳ ಛಾವಣಿ ಕಾರ್ಯ ನಿರ್ಮಾಣ ಹಂತದಲ್ಲಿದೆ. 8,024 ಮನೆಗಳು ನಿರ್ಮಾಣ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.