ETV Bharat / state

ನಂದಿನಿ ಬ್ರ್ಯಾಂಡ್​ ಬೆಳೆಯಬೇಕು, ಅಮುಲ್ ಆನ್​ಲೈನ್ ಖರೀದಿ ಜನರಿಗೆ ಬಿಟ್ಟದ್ದು: ಶೋಭಾ ಕರಂದ್ಲಾಜೆ

"ನಂದಿನಿ ಬ್ರ್ಯಾಂಡ್ ಮತ್ತಷ್ಟು​ ಬೆಳೆಯಬೇಕು, ಅಮುಲ್ ಆನ್​ಲೈನ್ ಖರೀದಿ ಜನರಿಗೆ ಬಿಟ್ಟದ್ದು" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

shobha karandlaje
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
author img

By

Published : Apr 7, 2023, 2:07 PM IST

Updated : Apr 7, 2023, 5:15 PM IST

ಅಮೂಲ್​​ ಆನ್​ಲೈನ್​ ಖರೀದಿ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.

ಬೆಂಗಳೂರು: "ನಂದಿನಿ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ, ಅದು ಮತ್ತಷ್ಟು ಬೆಳೆಯಬೇಕು ಎನ್ನುವುದೇ ರಾಜ್ಯ ಸರ್ಕಾರದ ಪ್ರಮುಖ ಆದ್ಯತೆ. ಆದರೆ, ರಾಜ್ಯದಲ್ಲಿ ಅಮುಲ್ ಹಾಲು ಮತ್ತು ಮೊಸರು ಆನ್ ಲೈನ್ ಖರೀದಿ ಜನರ ಆಯ್ಕೆಗೆ ಬಿಟ್ಟ ವಿಚಾರವಾಗಿದೆ" ಎಂದು ಪರೋಕ್ಷವಾಗಿ ಅಮುಲ್ ಆನ್​ಲೈನ್​ ಮಾರಾಟ ನಿರ್ಬಂಧ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ನಂದಿನಿ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಅಮುಲ್ ಆನ್​ಲೈನ್ ಮಾರಾಟಕ್ಕೆ ನಿರ್ಬಂಧ ಸಾಧ್ಯವಿಲ್ಲ. ಆನ್​ಲೈನ್ ಖರೀದಿ ಜನರ ಆಯ್ಕೆ, ಆದರೆ, ಬಳಕೆಯ ದೃಷ್ಟಿಯಿಂದ ಕೆಎಂಎಫ್ ಬೆಳೆಯಬೇಕು. ಸರ್ಕಾರದ ಆಧ್ಯತೆಯೂ ಕೆಎಂಎಫ್ ಬೆಳೆಸಬೇಕು ಎನ್ನುವುದಾಗಿದೆ. ಅಮುಲ್ ಗಿಂತ ಬಲಿಷ್ಟವಾಗಿ ಕೆಎಂಎಫ್ ಬೆಳೆಯಬೇಕಿದೆ" ಎಂದರು.

"ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಗ್ಯಾರಂಟಿಗಳು ಸುಳ್ಳು. ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ಬೇಕು. ರಾಜ್ಯದ ಬಜೆಟ್ ಮೂರು ಲಕ್ಷ ಕೋಟಿ, ಅದರಲ್ಲಿ ಒಂದು ಲಕ್ಷ ಕೋಟಿ ಕೇವಲ ನಾಲ್ಕು ಯೋಜನೆಗೆ ವ್ಯಯ ಮಾಡುವುದು ಅಸಾಧ್ಯ. ಕಾಂಗ್ರೆಸ್ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡುತ್ತೇವೆ ಎನ್ನುವುದು ಸುಳ್ಳು ಭರವಸೆ. ರಾಜಸ್ಥಾನದಲ್ಲಿ ಅವರು ನೀಡಿದ್ದ ಭರವಸೆ ಈಡೇರಿಸಿಲ್ಲ, ಅಲ್ಲಿನ ಪ್ರಣಾಳಿಕೆ ನೋಡಿ ಕಾಂಗ್ರೆಸ್ ಇಲ್ಲಿ ಮಾತನಾಡಲಿ" ಎಂದರು.

"ಕೆಲವೆಡೆ ಪಡಿತರ ಕಾಳಸಂತೆ ಮಾರಾಟ ನಡೆದಿದೆ. ಇನ್ನು ಕೆಲವೆಡೆ ಕಾಳಸಂತೆ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ. ಜನರಿಗೆ ತಿಂಗಳಿಗೆ ಎಷ್ಟು ಧಾನ್ಯ ಬೇಕು, ಯಾವ ಧಾನ್ಯ ಬೇಕು ಎನ್ನುವ ಬಗ್ಗೆ ಸರ್ವೆ ಮಾಡಬೇಕಿದೆ. ನಮ್ಮ ಜಿಲ್ಲೆ ಉಡುಪಿಯಲ್ಲಿ ಅಕ್ಕಿ ಕೊಟ್ಟರೆ ಬಳಸಲ್ಲ, ಅದೆಲ್ಲ ಬ್ಲ್ಯಾಕ್​ ಮಾರ್ಕೆಟ್​ಗೆ ಹೋಗಲಿದೆ. ಅದಕ್ಕಾಗಿ ನಾವು ಆ ಭಾಗದಲ್ಲಿ ಈಗ ಕುಚ್ಚಲಕ್ಕಿ ಕೊಡುತ್ತಿದ್ದೇವೆ. ದಕ್ಷಿಣ ಕನ್ನಡದಲ್ಲಿ ಈಗ ಕುಚ್ಚಲಕ್ಕಿ ಕೊಡಲಾಗುತ್ತಿದೆ. ಆಯಾ ಭಾಗದ ಜನರು ಬಳಸುವ ಧಾನ್ಯವನ್ನೇ ಕೊಡಬೇಕು, ಆಗ ದುರುಪಯೋಗ ಕಡಿಮೆಯಾಗಲಿದೆ" ಎಂದು ಹೇಳಿದರು.

"80 ಕೋಟಿ ಜನರಿಗೆ ಅಕ್ಕಿ ಗೋಧಿ ರಾಗಿ ಕೊಡುವ ಕೆಲಸ ನಡೆಯುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಒದಗಿಸಬೇಕು ಎಂಬ ಈ ಕಾಯ್ದೆ ತರಲಾಗಿದೆ. ಇತ್ತೀಚೆಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು ಎನ್ನುವ ಬಗ್ಗೆ ಚರ್ಚೆಯಾಗಿದೆ. 2 ಲಕ್ಷ ಕೋಟಿ ವೆಚ್ಚ ಮಾಡಿ ಪಿಎಂ ಗರೀಬ್ ಕಲ್ಯಾಣ ಯೋಜನೆ ಮುಂದುವರೆದಿದೆ. 1.17 ಕೋಟಿ ಜನ ರಾಜ್ಯದಲ್ಲಿ ಅಕ್ಕಿ ಮತ್ತು ರಾಗಿ ಪಡೆಯುತ್ತಿದ್ದಾರೆ. ಅಂತ್ಯೋದಯ ಯೋಜನೆಯಲ್ಲಿ 10.50 ಲಕ್ಷ ಕುಟುಂಬಕ್ಕೆ ಅನ್ನ ಕೊಡುವ ಕೆಲಸ ನಡೆಯುತ್ತಿದೆ" ಎಂದು ತಿಳಿಸಿದರು.

"1.17 ಬಿಪಿಎಲ್ ಕಾರ್ಡ್ 10.5 ಲಕ್ಷ ಅಂತ್ಯೋದಯ ಅನ್ನ ಯೋಜನೆ ಜಾರಿಯಲ್ಲಿದೆ‌. 15 ಕೆಜಿ ರಾಗಿ, 20 ಕೆಜಿ ಅಕ್ಕಿ ಅಂತ್ಯೋದಯ ಅನ್ನ ಯೋಜನೆಯಡಿ ಕೊಡಲಾಗುತ್ತಿದೆ. 4 ಕೋಟಿ ಫಲಾನುಭವಿಗಳಿಗೆ 1.17 ಕೋಟಿ ರೇಷನ್ ಕಾರ್ಡ್ ಮೂಲಕ 4 ಕೆಜಿ ಅಕ್ಕಿ, 3 ಕೆಜಿ ರಾಗಿ ಕೊಡಲಾಗುತ್ತಿದೆ. 2.25 ಲಕ್ಷ ಕೆಜಿ ಅಕ್ಕಿ ಮತ್ತು ರಾಗಿಯನ್ನು ಪ್ರತಿ ತಿಂಗಳು ಕೊಡಲಾಗುತ್ತಿದೆ. ಅಲ್ಲದೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಮೂಲಕ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯಗಳಲ್ಲಿ ಪಡಿತರ ನೀಡಲಾಗುತ್ತಿದೆ. ಇದು ದೇಶವನ್ನು ಏಕತೆಯ ರೂಪದಲ್ಲಿ ಜೋಡಿಸುವ ದೊಡ್ಡ ಯೋಜನೆಯಾಗಿದೆ" ಎಂದರು.

"ಸಿದ್ದರಾಮಯ್ಯ ಅನ್ನಭಾಗ್ಯದ ರುವಾರಿ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಶೇ.90 ರಷ್ಟು ಹಣ ಕೇಂದ್ರದ್ದು, ಶೇ.10 ರಷ್ಟು ಮಾತ್ರ ರಾಜ್ಯದ್ದಾಗಿದೆ. 32 ರೂ.ಗೆ ಅಕ್ಕಿ ಖರೀದಿಸಿ 3 ರೂಗೆ ರಾಜ್ಯಕ್ಕೆ ಕಳಿಸುತ್ತಿದೆ. ಕೇಂದ್ರ 29 ರೂಪಾಯಿ ಭರಿಸುತ್ತಿದೆ. ಗೋಧಿಗೆ 22 ರೂಗೆ ಖರೀದಿಸಿ 20 ರೂ ಭರಿಸಿ 2 ರೂಗೆ ರಾಜ್ಯಕ್ಕೆ ಕೊಡುತ್ತಿದೆ. ಆದ್ಯತಾ ಪಡಿತರ ಚೀಟಿ ಅಡಿಯಲ್ಲಿ ಯಾರೂ ಪಡಿತರದಿಂದ ವಂಚಿತರಾಗಬಾರದು ಎಂದು ವ್ಯವಸ್ಥೆ ಮಾಡಲಾಗಿದೆ" ಎಂದು ತಿಳಿಸಿದರು.

"ಪೌಷ್ಟಿಕಾಂಶ ಕೊರತೆ ಇರುವ ನಮ್ಮ ದೇಶದ ಹಿಂದುಳಿದ ಜಿಲ್ಲೆಗಳಲ್ಲಿ ಅಕ್ಕಿಯ ಜೊತೆ ಅಕ್ಕಿಯ ರೀತಿಯಲ್ಲಿರುವ ಪ್ರೊಟೀನ್​ ಅನ್ನು ಮಿಶ್ರಣ ಮಾಡಿ ಕೊಡುವ ಪ್ರಯೋಗ ಆರಂಭವಾಗಿದೆ. ರಾಜ್ಯದ ರಾಯಚೂರಿನಲ್ಲಿ ಈ ರೀತಿಯ ಪ್ರಯೋಗ ಮಾಡಲಾಗುತ್ತಿದೆ. ಅಕ್ಕಿಯ ಜೊತೆ ಪೌಷ್ಟಿಕಾಂಶಯುಕ್ತ ಅಕ್ಕಿ ಮಿಶ್ರಣ ಮಾಡಿ ಕೊಡಲಾಗುತ್ತಿದೆ. ಪ್ರತಿ ಚೀಲದಲ್ಲಿ 15 ಕೆಜಿ ಪೌಷ್ಟಿಕಾಂಶ ಮಿಶ್ರಣ ಮಾಡಿ ನೀಡಲಾಗುತ್ತಿದೆ. ಈ ಪ್ರಯೋಗದ ನಂತರ ಆ ಭಾಗದಲ್ಲಿನ ಜನರಲ್ಲಿ ಪೌಷ್ಟಿಕಾಂಶ ಸುಧಾರಣೆ ಕಂಡುಬಂದಿದೆ" ಎಂದರು.

ಟಿಕೆಟ್ ನನ್ನ ವ್ಯಾಪ್ತಿ ಅಲ್ಲ: "ರಾಜ್ಯ ವಿಧಾನಸಭಾ ಟಿಕೆಟ್ ವಿಚಾರದಲ್ಲಿ ನಾನು ಮಾತನಾಡಲ್ಲ. ಟಿಕೆಟ್ ವಿಚಾರ ನನ್ನ ಪರಿಮಿತಿಯಿಂದ ಆಚೆಗಿದೆ. ಹಾಗಾಗಿ ಅದರ ಬಗ್ಗೆ ಮಾತನಾಡಲ್ಲ" ಎಂದ ಶೋಭಾ ಕರಂದ್ಲಾಜೆ, "ಮೋದಿ ಸಂಪುಟದಲ್ಲಿ ಹೆಚ್ಚಿನ ಮಹಿಳಾ ಸಚಿವರಿದ್ದಾರೆ. ಅದೇ ರೀತಿ ರಾಜ್ಯದಲ್ಲಿಯೂ ಹೆಚ್ಚಿನ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಸಿಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಪುತ್ರನಿಗೆ ಟಿಕೆಟ್ ಕೊಡಿ': ಬಿಎಸ್​ವೈಗೆ ಮನವಿ ಮಾಡಿದ ಎಂಟಿಬಿ

Last Updated : Apr 7, 2023, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.