ETV Bharat / state

ಹೊಸ ವರುಷಕೆ ಹೊಸ ಹರುಷ ತರುತಿದೆ ಯುಗಾದಿ.. ಸಿಲಿಕಾನ್‌ ಸಿಟಿಯಲ್ಲಿ ಎಲ್ಲೆಲ್ಲೂ ಹಬ್ಬ ಹಬ್ಬ.. - undefined

ರಾಜ್ಯದಾದಂತ್ಯ ಸಂಭ್ರಮ, ಸಡಗರದಿಂದ ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಿದ್ದು, ಸಿಲಿಕಾನ್​ ಸಿಟಿಯ ಜನರು ಕೂಡ ಸಂಭ್ರಮದ ಯುಗಾದಿ ಆಚರಿಸಿದರು.

ಯುಗಾದಿ
author img

By

Published : Apr 6, 2019, 10:29 PM IST

ಬೆಂಗಳೂರು: ಸಿಲಿಕಾನ್‌ ಸಿಟಿ ಜನ ಎಷ್ಟೇ ಬ್ಯುಸಿ ಇದ್ದರೂ ಹಬ್ಬ, ಹರಿದಿನಗಳನ್ನ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ನೂತನ ಸಂವತ್ಸರದ ಹಬ್ಬ ಯುಗಾದಿಯನ್ನು ಸಂಭ್ರಮ, ಸಡಗರದಿಂದಲೇ ಆಚರಿಸಲಾಗುತ್ತಿದೆ.

ಉದ್ಯಾನ ನಗರಿ ಬೆಂಗಳೂರಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಎಲ್ಲರ ಮನೆಯ ಮುಂದೆ ಹಸಿರು ತೋರಣಗಳು ಮನೆಯ ಅಂದವನ್ನ ಮತ್ತಷ್ಟು ಹೆಚ್ಚಿಸಿತ್ತು. ಈ ಮೂಲಕ ನೂತನ ವರ್ಷಾಚರಣೆಯನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು.

ಬೆಂಗಳೂರಿನ ತ್ಯಾಗರಾಜನಗರದಲ್ಲಿ ವಾಸವಾಗಿರುವ ವಿಜಯಲಕ್ಷ್ಮೀ ರೀಗ್ರೇಟ್​ ಅಯ್ಯರ್​ ಅವರ ಮನೆಯಲ್ಲಿ ಸಾಂಪ್ರದಾಯಿಕವಾಗಿ ಹಬ್ಬವನ್ನ ಆಚರಿಸಲಾಯಿತು. ಇವರು ಪ್ರತಿ ವರ್ಷ ಕೋಲಾರದ ಅಯ್ಯರ್​​ ಸಂಪ್ರದಾಯದಂತೆ ಮನೆಯಲ್ಲಿ ಹಬ್ಬವನ್ನ ಆಚರಣೆ ಮಾಡುತ್ತಾರೆ.

ಯುಗಾದಿ ಆಚರಣೆ

ಯುಗಾದಿ ಅಂದರೆ ಹೊಸತನದ ಹಬ್ಬ. ಪ್ರಕೃತಿಯಲ್ಲಿ ಆಗುವ ಬದಲಾವಣೆ. ಮೈ ಸುಡುವ ಬೇಸಿಗೆ ಸುಡುವ ಬೇಸಿಗೆಯ ಕಾಲ. ಈ ಸಮಯದಲ್ಲಿ ಭೂಮಿಯೊಳಗಿರುವ ವಿಷಕಾರಿ ಜಂತುಗಳು ಹೊರಬರುವುದಕ್ಕೆ ಶುರು ಮಾಡುತ್ತವೆ. ಹೀಗಾಗಿ ಇದರಿಂದ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮನೆಯಲ್ಲಿ ಚೋಳಿನ ಚಿತ್ರ ಬಿಡಿಸಿ, ಹೊಸ ಸಂವತ್ಸರ ಪಂಚಾಂಗವಿಟ್ಟು ಪೊಜೆ ಮಾಡಲಾಗುತ್ತೆ. ಕೋಲಾರಮ್ಮ ದೇವಿಯ ಮತ್ತೊಂದು ಹೆಸರು ಚೋಳಮ್ಮ ಅಂತಾ. ಈ ದೇವಿಯನ್ನ ಈ ಯುಗಾದಿ ದಿನದಂದು ಶ್ರದ್ಧೆ, ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವಿಜಯಲಕ್ಷ್ಮಿ ರೀಗ್ರೇಟ್​ ಅಯ್ಯರ್​ ಅವರು 'ಈಟಿವಿ ಭಾರತ್'​ನೊಂದಿಗೆ ಹಂಚಿಕೊಂಡರು.

Intro:ಸ್ಕ್ರಿಪ್ಟ್ ಎಫ್ ಟಿಪಿ ಮೂಲಕ ಕಳುಹಿಸಲಾಗಿದೆ

Body:ಸ್ಕ್ರಿಪ್ಟ್ ಎಫ್ ಟಿಪಿ ಮೂಲಕ ಕಳುಹಿಸಲಾಗಿದೆ

Conclusion:ಸ್ಕ್ರಿಪ್ಟ್ ಎಫ್ ಟಿಪಿ ಮೂಲಕ ಕಳುಹಿಸಲಾಗಿದೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.