ಆನೇಕಲ್: ನೀರಿನ ಸಂಪ್‌ನಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ತಿರುಪಾಳ್ಯ ಗ್ರಾಮದ ಶ್ರೀನಿವಾಸ ರೆಡ್ಡಿ ಎಂಬವರಿಗೆ ಸೇರಿದ ಸನ್ಶೈನ್ ಹೋಲ್ಡಿಂಗ್ ಕಂಪನಿಯಲ್ಲಿ ನಡೆದಿದೆ. ಬಿಹಾರ ಮೂಲದ ಕಾರ್ಮಿಕರಾದ ಚಂದನ್ ರಜ್ ಬನ್ ಸಿಂಗ್ (31) ಮತ್ತು ಪಿಂಟು ರಜ್ ಬನ್ ಸಿಂಗ್ (22) ಮೃತರು.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬುಧವಾರ ಸಂಜೆ 5.30ಕ್ಕೆ ಸ್ಫಚ್ಚತೆಗೆಂದು ಸಂಪ್ ಒಳಗೆ ಆ್ಯಸಿಡ್ ಹಾಕಲಾಗಿದೆ. ಒಂದು ಗಂಟೆಯ ನಂತರ ಚಂದನ್ ರಜ್ ಬನ್ ಸಿಂಗ್ ಮತ್ತು ಪಿಂಟು ರಜ್ ಬನ್ ಸಿಂಗ್ ಸಂಪ್‌ನೊಳಗೆ ಇಳಿದಿದ್ದರು. ತಕ್ಷಣವೇ ಕಾರ್ಮಿಕರಿಗೆ ಸಂಪ್‌ನೊಳಗೆ ಉಸಿರುಗಟ್ಟಲು ಪ್ರಾರಂಭಿಸಿದ್ದು, ಸಾವನ್ನಪ್ಪಿದ್ದಾರೆ.
ಮ್ಯಾನೇಜರ್ ಜಗದೀಶ್ ಮತ್ತು ಮಾಲೀಕರಾದ ಶ್ರೀನಿವಾಸ್ ರೆಡ್ಡಿ ಸಂಪ್‌ಗೆ ಇಳಿದಿದ್ದಾರೆ. ಈ ಇಬ್ಬರಿಗೂ ಉಸಿರಾಟದ ಸಮಸ್ಯೆಯಾಗಿದ್ದು ಮೇಲೆ ಬಂದು ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೊಳಗಾಗಿದ್ದಾರೆ.
ಇದನ್ನೂ ಓದಿ: ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ನಾಲ್ವರು ಕಾರ್ಮಿಕರ ಸಾವು