ETV Bharat / state

ಒನ್ ವೇನಲ್ಲಿ ಹೋದ ದ್ವಿಚಕ್ರ ವಾಹನ... ಲಾರಿ ಹರಿದು ಸವಾರ ಸಾವು - ಸಿಸಿ ಕ್ಯಾಮೆರಾದಲ್ಲಿ ಸೆರೆ

ಅಪಘಾತದಲ್ಲಿ ಸುಮನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಭೀಕರ ದೃಶ್ಯಾವಳಿ ಮೇಖ್ರಿ ವೃತ್ತದ ಶೆಲ್ ಪೆಟ್ರೊಲ್ ಬಂಕ್​ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Bike and Lorry accident
ಲಾರಿ ಇಂಜಿನ್​ಗೆ ಬೆಂಕಿ ತಗುಲಿರುವುದು
author img

By

Published : Sep 16, 2022, 4:10 PM IST

ಬೆಂಗಳೂರು : ಲಾರಿ ಹರಿದು ದ್ವಿಚಕ್ರ ವಾಹನ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ 4 ಗಂಟೆ ಸುಮಾರಿಗೆ ಮೇಖ್ರಿ ವೃತ್ತದ ಶೆಲ್ ಪೆಟ್ರೊಲ್ ಬಂಕ್ ಮುಂಭಾಗದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸುಮನ್ ಎಂದು ಗುರುತಿಸಲಾಗಿದೆ.

ಮುಂಜಾನೆಯಾಗಿದ್ದರಿಂದ ವನ್ ವೇನಲ್ಲಿ ತೆರಳಿದ್ದ ಸುಮನ್ ದ್ವಿಚಕ್ರ ವಾಹನಕ್ಕೆ ಮುಂಬದಿಯಿಂದ ಬಂದ ಲಾರಿ ಢಿಕ್ಕಿಯಾಗಿದೆ. ಪರಿಣಾಮ ಸುಮಾರು 300 ಮೀಟರ್​ನಷ್ಟು ದೂರ ದ್ವಿಚಕ್ರ ವಾಹನವನ್ನು ಲಾರಿ ಎಳೆದೊಯ್ದಿದ್ದು ಅಪಘಾತದಿಂದಾಗಿ ಲಾರಿ ಇಂಜಿನ್‌ಗೆ ಬೆಂಕಿ ತಗುಲಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ

ಅಪಘಾತದ ಪರಿಣಾಮ ಸುಮನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಭೀಕರ ದೃಶ್ಯಾವಳಿ ಪೆಟ್ರೋಲ್ ಬಂಕ್​ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 25 ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ: ನಡುರಸ್ತೆಯಲ್ಲೇ ಧಗಧಗಿಸಿದ ಬಸ್​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.