ETV Bharat / state

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ - ಬೆಂಗಳೂರು ನ್ಯಾಯಾಲಯ

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷಿ ವಿಧಿಸಿ ಕೋರ್ಟ್ ಆದೇಶಿಸಿದೆ.

ನ್ಯಾಯಾಲಯ
ನ್ಯಾಯಾಲಯ
author img

By

Published : Jan 28, 2023, 7:24 AM IST

ಬೆಂಗಳೂರು: ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ಪ್ರತ್ಯೇಕ ಪ್ರಕರಣಗಳಲ್ಲಿ ಅತ್ಯಾಚಾರವೆಸಗಿದ್ದ ಇಬ್ಬರು ಅಪರಾಧಿಗಳಿಗೆ ನಗರದ ತ್ವರಿತಗತಿಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಎರಡೂ ಪ್ರಕರಣಗಳ ವಿಚಾರಣೆ ನಡಸಿದ ನಗರದ 3ನೇ ತ್ವರಿತಗತಿಯ ನ್ಯಾಯಾಲಯದ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅವರು ಇಬ್ಬರೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ 35 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ಅಪರಾಧಿಗಳಿಂದ ದಂಡದಲ್ಲಿ 20 ಸಾವಿರ ಸೇರಿಸಿ 4 ಲಕ್ಷ ರೂ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಕೀಲರಾದ ಗೀತಾ ರಾಮಕೃಷ್ಣ ಗೊರವರ ಅವರು ವಾದ ಮಂಡಿಸಿದ್ದರು.

ಪ್ರಕರಣದ 1: ಅಪರಾಧಿ ಮಂಜುನಾಥ್ ರಾವ್ ಅವರು ನಗರದ ಸಿಂಗಸಂದ್ರದಲ್ಲಿ ಎಂಟರ್ ಪ್ರೈಸಸ್ ಹೆಸರಿನಲ್ಲಿ ಇಂಡಸ್ಟ್ರಿಯಲ್ ಮತ್ತು ಮೆಡಿಕಲ್ ಗ್ಯಾಸ್ ಸಿಲಿಂಡರ್ ವ್ಯವಹಾರ ನಡೆಸಿತ್ತಿದ್ದರು. ಜತೆಗೆ, ದೇವರ ಫೋಟೋಗಳನ್ನುಟ್ಟುಕೊಂಡು ಅಂಗಡಿಗೆ ಬರುವ ಮಹಿಳೆಯರು ಮತ್ತ ಮಕ್ಕಳಿಗೆ ಧೂಪ ಸ್ತುತಿ ಪ್ರಸಾದ ಕೊಟ್ಟು ಕಳುಹಿಸುತ್ತಿದ್ದನು. ಈ ನಡುವೆ ಸಂತ್ರಸ್ತ ಬಾಲಕಿಯ ತಾಯಿ ಲಲಿತಮ್ಮಾ ತನ್ನ ಅಪ್ರಾಪ್ತ ಮಗಳನ್ನು ಅಪರಾಧಿಯ ಅಂಗಡಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಂಜುನಾಥ್ ರಾವ್, ಮಗಳು ವಯಸ್ಸಿಗೆ ಬಂದಿದ್ದು, ಅವರಿಗೆ ನಾಗದೋಷವಿದೆ ಈ ಸಂಬಂಧ ಪೂಜೆ ಮಾಡಬೇಕಾಗಿದ್ದು ಮುಂದಿನ ವಾರ ಬರಬೇಕು ಎಂದು ಹೇಳಿ ಕಳುಹಿಸಿದ್ದರು. ಇದಾದ ಬಳಿಕ 2021ರ ಜುಲೈ 23 ರಂದು ಬೆಳಗ್ಗೆ 11 ಗಂಟೆಗೆ ಬಾಲಕಿಯೊಂದಿಗೆ ಅಂಗಡಿ ಬಳಿ ಬಂದಾಗ ಪೂಜೆ ಸಾಮಾಗ್ರಿ ತರುವಂತೆ ತಾಯಿಗೆ ಅಪರಾಧಿ ಸೂಚನೆ ನೀಡಿ ಹೊರಕ್ಕೆ ಕಳುಹಿಸಿದ್ದರು.

ಈ ಸಂದರ್ಭದಲ್ಲಿ ಬಾಲಕಿಯನ್ನು ಅಂಗಡಿಗೆ ಕರೆದು ಏನಾದರೂ ಸಮಸ್ಯೆ ಇದಿಯೇ ಎಂದು ಪ್ರಶ್ನಿದ್ದು, ಇದಕ್ಕೆ ಪ್ರತಿಕ್ರಿಯಿಸಿದ್ದ ಬಾಲಕಿ ಕೈ ಕಾಲು ನೋವು ಇದೆ ಎಂದು ವಿವರಿಸಿದ್ದರು. ಆಗ ನಾಗದೋಷವಿದ್ದರೆ ಇದು ಸಾಮಾನ್ಯ ಎಂದು ಹೇಳಿ ದೇವರ ಕಾರ್ಯ ಮಾಡುವುದಾಗಿ ಆಕೆಯ ಮೈಮೇಲೆ ಇದ್ದ ಬಟ್ಟೆಯನ್ನು ತೆಗೆದು ಎಣ್ಣೆ ಸವರಿ ಮಾಲಿಷ್ ಮಾಡಿ ಲೈಂಕಿಕವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ ಬಾಲಕಿ, ಈ ರೀತಿ ಮಾಡುವುದು ತಪ್ಪು ಎಂದರೂ ಕೇಳದೆ ದೌರ್ಜನ್ಯದಿಂದ ಅತ್ಯಾಚಾರ ನಡೆಸಿದ್ದರು. ಅಲ್ಲದೆ, ಈ ವಿಚಾರವನ್ನು ಎಲ್ಲಿಯಾದರೂ ತಿಳಿಸಿದ್ದೇ ಆದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆರೋಪಿಯ ಕೃತ್ಯದಿಂದ ಬಾಲಕಿ ಬಾಲಕಿ ಗರ್ಭಿಣಿಯಾಗಿದ್ದರು. ಈ ಅಂಶ ಬೆಳಕಿಗೆ ಬರುತ್ತಿದ್ದಂತೆ ಬಾಲಕಿಯ ತಾಯಿ ಪರಪ್ಪನ ಅಗ್ರಹಾರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಅಪರಾಧಿಯ ವಿರುದ್ಧ ಪೋಕ್ಸೋ ಮತ್ತು ಐಪಿಸಿ ಕಾಯಿದೆಗಳ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಗೀತಾ ರಾಮಕೃಷ್ಣ ಗೊರವರ ವಾದ ಮಂಡಿಸಿದ್ದರು.

ಪ್ರಕರಣ 2: ಪ್ರಕರಣದ ಆರೋಪಿ ವರದರಾಜು ಅವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಬೇಕು ಎಂಬ ಉದ್ದೇಶದಿಂದ ಜೆಪಿ ನಗರದ 6ನೇ ಹಂತದಿಂದ ಸಾರಕ್ಕಿ ಗಾರ್ಡ್ನ್ ದುರ್ಗಾ ಕಾಂಡಿಮೆಂಟ್ಸ್ ಬಳಿಗೆ ಕರೆದುಕೊಂಡು ಹೋಗಿದ್ದರು. ಇದೇ ಕಾರಣದಿಂದ ಮಹದೇವಪುರದ ಮೋರ್ ಸೂಪರ್ ಮಾರುಕಟ್ಟೆಯ ಬಳಿಯಲ್ಲಿರುವ ಶೀಟ್ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ 3 ರಿಂದ 4 ಬಾರಿ ಅತ್ಯಾಚಾರಿ ನಡೆಸಿದ್ದರು. ಆರೋಪಿಯ ವಿರುದ್ಧ ಸಂತ್ರಸ್ತೆ ತಂದೆ ದೂರು ನೀಡಿದ್ದರು. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಂ.ಎಂ. ಪ್ರಶಾಂತ್ ಅವರು ತನಿಖೆ ನಡೆಸಿದ ಅಪರಾಧಿ ವಿರುದ್ಧ ಐಪಿಸಿ ಮತ್ತು ಫೋಕ್ಸೋ ಕಾಯಿದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

(ಇದನ್ನೂ ಓದಿ: ಬೆಂಗಳೂರಿನ ಫಾರ್ಮ್‌ಹೌಸ್‌ನಿಂದ 139 ಅಪರೂಪದ ವನ್ಯಜೀವಿಗಳನ್ನು ವಶಕ್ಕೆ ಪಡೆದ DRI)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.