ETV Bharat / state

ಬೆಂಗಳೂರಿನಲ್ಲಿ ಕಾರು ಕಳ್ಳತನ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ - ಎಸ್ಐ ಮಲ್ಲಿಕಾರ್ಜುನ

ಅಶೋಕ್ ನಗರ ಪೊಲೀಸರು ಇಬ್ಬರು ಅಂತಾರಾಜ್ಯ ಕಾರುಗಳ್ಳರನ್ನ ಬಂಧಿಸಿದ್ದಾರೆ.

ಕಾರು ಕಳ್ಳತನ
ಕಾರು ಕಳ್ಳತನ
author img

By

Published : Sep 2, 2022, 5:09 PM IST

ಬೆಂಗಳೂರು: ಪೊಲೀಸರಿಗೆ ಮೈಯೆಲ್ಲಾ ಕಣ್ಣು ಆಗಿರಬೇಕು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕ ಸಣ್ಣ ಮಾಹಿತಿ ಹಿಂದೆ ಬಿದ್ದ ಅಶೋಕನಗರ ಪೊಲೀಸರು ಬೃಹತ್‌ ಕಾರು ಕಳ್ಳತನದ ಜಾಲ ಪತ್ತೆ ಹಚ್ಚಿದ್ದಾರೆ.

ಅಶೋಕ್ ನಗರ ಪೊಲೀಸರು ಇಬ್ಬರು ಅಂತರರಾಜ್ಯ ಕಾರುಗಳ್ಳರನ್ನ ಬಂಧಿಸಿದ್ದಾರೆ. ಅಯಾಝ್ ಪಾಷಾ ಮತಿನುದ್ದಿನ್ ಎಂಬುವರನ್ನು ಬಂಧಿಸಿರುವ ಪೊಲೀಸರು 1.20 ಕೋಟಿ ಮೌಲ್ಯದ 9 ಕಾರುಗಳನ್ನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಹಲವು ವರ್ಷಗಳಿಂದಲೂ ಇದೇ ರೀತಿಯಾದ ಕೃತ್ಯವನ್ನ ಮಾಡಿರೋದು ಪತ್ತೆಯಾಗಿದೆ.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಅವರು ಮಾತನಾಡಿರುವುದು

ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರುಕಳ್ಳರು ಕದ್ದ ಕಾರಿನಲ್ಲಿ ಓಡಾಡುತ್ತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆ ಯಾವ ಕಾರು,‌ ಕಾರಿನ ಬಣ್ಣ ಎಲ್ಲವನ್ನೂ ತಿಳಿದುಕೊಂಡ ಎಸ್ಐ ಮಲ್ಲಿಕಾರ್ಜುನ ಹಾಗೂ ಕ್ರೈಂ ಪಿಸಿ ಚಂದ್ರು , ತಮ್ಮ ಇನ್ಪಾರ್ಮರ್​ಗಳಿಗೆ ಮೆಸೇಜ್​ ಪಾಸ್ ಮಾಡಿದ್ದರು. ನಿರಂತರವಾಗಿ ಮೂರು ದಿನಗಳ ಕಾರ್ಯ ನಡೆಸಿದ್ದ ಇಬ್ಬರು ಮೊದಲು ಅಯಾಝ್ ಪಾಷಾ ಎಂಬಾತನನ್ನ ಲಾಕ್ ಮಾಡಿದ್ಧರು.

ನಕಲಿ ನಂಬರ್ ಪ್ಲೇಟ್​ಗಳನ್ನ ಬಳಸಿ ಮಾರಾಟ: ನಂತರ ಮೊಬೈಲ್ ಮುಖಾಂತರ ಮತ್ತೊಬ್ಬ ಆರೋಪಿ ಮತೀನುದ್ದಿನ್​ನನ್ನೂ ಹೆಡೆ ಮುರಿಕಟ್ಟಿ ಇಬ್ಬರನ್ನ ವಿಚಾರಣೆ ನಡೆಸಿದಾಗ ದೆಹಲಿ, ಉತ್ತರ ಪ್ರದೇಶ, ಮದ್ಯಪ್ರದೇಶ, ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವೆಡೆ ಕಾರುಗಳನ್ನ ಕದ್ದು ನಗರಕ್ಕೆ ತಂದು ಇಲ್ಲಿ ನಕಲಿ ನಂಬರ್ ಪ್ಲೇಟ್​ಗಳನ್ನ ಬಳಸಿ ಮಾರಾಟ ಮಾಡ್ತಿದ್ದರು ಎಂಬ ವಿಚಾರ ಹೊರಬಿದ್ದಿದೆ.

ಆರೋಪಿಗಳಿಗಾಗಿ ಪೊಲೀಸರಿಂದ ಹುಡುಕಾಟ: ಇನ್ನು ಇವರಿಬ್ಬರೇ ಅಲ್ಲ ಇವರ ಸಹಚರರಾದ ಸೈಯದ್ ಸಮೀರ್, ಇಮ್ರಾನ್, ತನ್ವೀರ್, ಯಾರಬ್ ಎಂಬುವವರನ್ನೂ ಕೂಡ ಕಳ್ಳತನಕ್ಕೆ ಬಳಸಿ ಕುಕೃತ್ಯ ಮೆರೆಯುತ್ತಿದ್ದರು. ಇನ್ನು ಬಂಧಿತರಿಂದ ಐದು ಹುಂಡೈ ಕ್ರೇಟಾ , 2 ಇನೊವಾ, 1 ಮಾರುತಿ ಬಲೆನೋ, 1 ಫೋಕ್ಸ್​ ವ್ಯಾಗನ್ ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.

ಇನ್ನು ಉಳಿದ ಆರೋಪಿಗಳಿಗಾಗಿ ಪೊಲೀಸರು ಈಗಾಗಲೇ ಹುಡುಕಾಟ ಮುಂದುವರೆಸಿದ್ದಾರೆ. ಸದ್ಯ ಮತ್ತಷ್ಟು ಕಡೆ ಕಾರು ಕದ್ದು ಮಾರಾಟ ಮಾಡಿರುವ ಬಗ್ಗೆಯೂ ವಿಚಾರಣೆ ಮುಂದುವರೆದಿದೆ ಎಂದು‌‌‌‌ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

ಓದಿ: ಎಂಟು ಜನ ಶ್ರೀಗಂಧ ಮರ ಕಳ್ಳರ ಬಂಧನ: ₹3 ಕೋಟಿ ಮೌಲ್ಯದ ಮಾಲು ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.