ETV Bharat / state

ಕಾಂಗ್ರೆಸ್ ಬಿಜೆಪಿ ನಡುವೆ ಟ್ವೀಟ್ ವಾರ್; ಡಿಕೆಶಿ, ಕಟೀಲ್ ಸಮರ್ಥನೆಗೆ ನಿಂತ ಆಡಳಿತ, ಪ್ರತಿಪಕ್ಷ..! - ನಳಿನ್ ಕುಮಾರ್​ ಕಟೀಲ್​

ನಳಿನ್ ಅವರೇ ದೊಡ್ಡವರ ಬಗ್ಗೆ ಮಾತಾಡಿದರೆ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆ ಬಿಡಿ ಎನ್ನುವ ಕಾಂಗ್ರೆಸ್ ಟ್ವೀಟ್​ಗೆ ನಳಿನ್ ಕುಮಾರ್ ಕಟೀಲ್ ರೀ ಟ್ವೀಟ್​ ಮಾಡುವ ಮೂಲಕ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.

DK Shivakumar
ನಳಿನ್ ಕುಮಾರ್​ ಕಟೀಲ್​
author img

By

Published : Nov 9, 2020, 11:14 PM IST

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಜೆಪಿ ಪಕ್ಷಗಳು ಪರಸ್ಪರ ಟ್ವೀಟ್ ಮೂಲಕ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದು ಸರಣಿ ಟ್ವೀಟ್​ಗಳ ಮೂಲಕ ವಾರ್ ನಡೆಸಿವೆ.

ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ತಲೆ ಹೊಂದಿದ ಕಾಮಿಡಿ ಕಿಲಾಡಿ ನಳಿನ್ ಕುಮಾರ್ ಕಟೀಲ್ ಅವರ ಮಾತುಗಳು ಯಕ್ಷಗಾನದಲ್ಲಿ ಬರುವ ಹಾಸ್ಯ ಪ್ರಸಂಗದಂತೆ. ನಳಿನ್ ಅವರೇ ದೊಡ್ಡವರ ಬಗ್ಗೆ ಮಾತಾಡಿದರೆ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆ ಬಿಡಿ ಎನ್ನುವ ಕಾಂಗ್ರೆಸ್ ಟ್ವೀಟ್​ಗೆ ತಿರುಗೇಟು ನೀಡಿರುವ ಬಿಜೆಪಿ, ಆಚಾರವಿಲ್ಲದ ನಾಲಿಗೆ ಯಾವುದು? ಕಾಡುಮನುಷ್ಯ, ಅಲೆಮಾರಿ, ಬೆನ್ನೆಲುಬಿಲ್ಲದವ ಎಂದಿದ್ದು ಸಭ್ಯತನವೇ? ʼನಾನು ಪಕ್ಷದ ಕಾರ್ಯಕರ್ತ. ನಾಳೆ ಸ್ಥಾನ ತ್ಯಜಿಸು ಎಂದು ಹೇಳಿದರೂ ತ್ಯಜಿಸುತ್ತೇನೆʼ ಎಂದು ಹೇಳುವ ನಮ್ಮ ಅಧ್ಯಕ್ಷರೆಲ್ಲಿ, ಜೈಲಿನಿಂದ ಹೊರಗೆ ಬಂದರೂ ಮೇಲಿನವರನ್ನು ಮೆಚ್ಚಿಸಿ ಅಧ್ಯಕ್ಷ ಸ್ಥಾನ ಪಡೆದ ನಿಮ್ಮ ಅಧ್ಯಕ್ಷರೆಲ್ಲಿ ಎಂದು ಪ್ರಶ್ನಿಸಿದೆ.

  • ಆಚಾರವಿಲ್ಲದ ನಾಲಿಗೆ ಯಾವುದು @INCKarnataka?

    ಕಾಡುಮನುಷ್ಯ, ಅಲೆಮಾರಿ, ಬೆನ್ನೆಲುಬಿಲ್ಲದವ ಎಂದಿದ್ದು ಸಭ್ಯತನವೇ?

    ʼನಾನು ಪಕ್ಷದ ಕಾರ್ಯಕರ್ತ. ನಾಳೆ ಸ್ಥಾನ ತ್ಯಜಿಸು ಎಂದು ಹೇಳಿದರೂ ತ್ಯಜಿಸುತ್ತೇನೆʼ ಎಂದು ಹೇಳುವ ನಮ್ಮ ಅಧ್ಯಕ್ಷರೆಲ್ಲಿ, ಜೈಲಿನಿಂದ ಹೊರಗೆ ಬಂದರೂ ಮೇಲಿನವರನ್ನು ಮೆಚ್ಚಿಸಿ ಅಧ್ಯಕ್ಷ ಸ್ಥಾನ ಪಡೆದ ನಿಮ್ಮ ಅಧ್ಯಕ್ಷರೆಲ್ಲಿ? https://t.co/rGztCu8ffS

    — BJP Karnataka (@BJP4Karnataka) November 9, 2020 " class="align-text-top noRightClick twitterSection" data=" ">

ನಮ್ಮಲ್ಲಿ ಅರ್ಹತೆ, ದಕ್ಷತೆಗೆ ಪ್ರಾಮುಖ್ಯತೆ. ಅದರಂತೆಯೇ ದಕ್ಷ ಅಧ್ಯಕ್ಷರನ್ನು ಹೊಂದಿದ್ದೇವೆ. ನಿಮ್ಮಲ್ಲಿ ಇನ್ಯಾರದ್ದೋ ಸಂಗದಲ್ಲಿ ಕುಣಿಯುವ ಗೊಂಬೆಗೆ ಮನ್ನಣೆ, ಅದರಂತೆಯೇ ವಿದೂಷಕನನ್ನು ಹೊಂದಿದ್ದೀರಿ ಎನ್ನುವ ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿರುವ ಬಿಜೆಪಿ ಅಕ್ರಮ ಸಂಪಾದನೆ ಆರೋಪದ ಮೇಲೆ ಜೈಲಿಗೆ ಹೋಗಿ, ಜಾಮೀನಿನ ಮೇಲೆ ಹೊರಗೆ ಬಂದಿರುವುದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆಯೇ? ಭ್ರಷ್ಟ ಹಣದಲ್ಲಿ ‌ʼಡೋರ್‌ ಕೀಪರ್ʼ ಆಗಿ ಟ್ರಬಲ್‌ ಶೂಟರ್‌ ಎಂದು ಬಿಂಬಿಸಿಕೊಂಡಿದ್ದು ಕಾಂಗ್ರೆಸ್‌ ಪಾಲಿನ ದಕ್ಷತೆ. ತನ್ನ ಅಹಂಕಾರದಿಂದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದು ದಕ್ಷತೆಯೇ ಎಂದು ಪ್ರಶ್ನಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.