ಬೆಂಗಳೂರು: ಕೊರೊನಾ ವೈರಸ್ ಎಲ್ಲೆಡೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇದರ ಭಯಕ್ಕೆ ಲಕ್ಷಾಂತರ ಜನರು ರಾಜಧಾನಿ ಬೆಂಗಳೂರು ಬಿಟ್ಟು ಬೇರೆ ಬೇರೆ ರಾಜ್ಯಗಳಿಗೆ ಹೊರಟಿದ್ದಾರೆ.

ಇಂದು 591 ವಿವಿಧ ಮಾರ್ಗಗಳ ಬಸ್ ಸೇವೆ ರದ್ದಾಗಿವೆ. ಸಾಮಾನ್ಯ ಸಾರಿಗೆ, ನಗರ ಸಾರಿಗೆ , ವೇಗದೂತ ಮತ್ತು ಐಷಾರಾಮಿ ಸೇವೆ ಸೇರಿದಂತೆ ಪ್ರಯಾಣಿಕರ ಕೊರತೆಯಿಂದ 591 ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಒಟ್ಟು 2,910 ಬಸ್ ಗಳು ಹೊರಟಿದ್ದು, 1,40,295 ಜನರು ನಗರದಿಂದ ಹೊರಗೆ ಹೋಗಿದ್ರೆ, 57,200 ಜನ ಬಂದಿಳಿದಿದ್ದಾರೆ.
ಇನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ 4,215 ಬಸ್ಗಳು ಹೊರಟಿದ್ದು, 83,300 ಜನರು ಬಂದಿಳಿದಿದ್ದರೆ, 2,04,757 ಜನರು ಬೇರೆ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ನೀಡಿದೆ.