ಬೆಂಗಳೂರು : ಸಾರಿಗೆ ಸಂಸ್ಥೆಗಳ ಕಾರ್ಮಿಕರನ್ನ ಸರ್ಕಾರಿ ನೌಕರರನ್ನಾಗಿ ಖಾಯಂಗೊಳಿಸಬೇಕೆಂದು ನಡೆಸ್ತಿರೋ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ನೌಕರರ ಮುನಿಸು ತಪ್ಪಿಸಲು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು ಮುಖಂಡರನ್ನ ಸಭೆಗೆ ಕರೆದಿದ್ದಾರೆ.
ಆದರೆ, ಇತ್ತ ನಮ್ಮನ್ನ ಮಾತುಕತೆಗೆ ಕರೆದಿಲ್ಲ ಎಂದು ಸಾರಿಗೆ ನೌಕರರ ಸಂಘದ ಮುಖಂಡ ಆನಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ನೌಕರರನ್ನಾಗಿ ಮಾಡಿ ಅಂತಾ ಮುಷ್ಕರ ಮಾಡುತ್ತಿರುವ ಕಮಿಟಿಯನ್ನ ಈವರೆಗೆ ಸರ್ಕಾರ ಮಾತುಕತೆಗೆ ಕರೆದಿಲ್ಲ. ಆದರೆ, ಇಂದು ಅವಕಾಶವಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದೊಂದಿಗೆ ಸಭೆಗೆ ಕರೆದ್ರೆ ಮಾತುಕತೆಗೆ ನಾವು ಸಿದ್ದರಿದ್ದೀವಿ ಎಂದು ಆನಂದ್ ತಿಳಿಸಿದ್ದಾರೆ.
ಓದಿ :ಯಶವಂತಪುರದಿಂದ ಖಾಕಿ ಭದ್ರತೆಯಲ್ಲಿ ಹೊರಟ ಬಿಎಂಟಿಸಿ ಬಸ್
ನಮ್ಮನ್ನ ಮಾತುಕತೆಗೆ ಕರೆಸದೇ ಪೊಲೀಸರ ಮೂಲಕ ಖಾಸಗಿ ಚಾಲಕರನ್ನು, ಆಟೋ ಚಾಲಕರನ್ನ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಏನಾದ್ರೂ ಅನಾಹುತವಾದ್ರೆ ಸರ್ಕಾರವೇ ಕಾರಣವಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟ್ರೈನಿ ನೌಕರರನ್ನ ಹೆದುರಿಸುತ್ತಿದ್ದು, ಅವರು ಭಯಪಡುವ ಅವಶ್ಯಕತೆ ಇಲ್ಲ. ಸರ್ಕಾರ ಪ್ರತಿಷ್ಠೆ ರೀತಿಯಲ್ಲಿ ಈ ವಿಚಾರ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಮೌರ್ಯ ಸರ್ಕಲ್‌ನಿಂದ ಫ್ರೀಡಂ ಪಾರ್ಕ್ಗೆ ಮುಷ್ಕರ ಶಿಫ್ಟ್ ಆಗಿದೆ. ಬೆಳಗ್ಗೆ 10 ಗಂಟೆಯ ನಂತರ ಎಲ್ಲ ಸಿಬ್ಬಂದಿ ಒಗ್ಗಟ್ಟಾಗಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.