ETV Bharat / state

ನೀವು ಕಟ್ಟುವ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಹಣ ನೇರ ಸರ್ಕಾರದ ಖಜಾನೆಗೆ.. ಕನ್ನಡ ರಾಜ್ಯೋತ್ಸವ ದಿನದಿಂದ ಅನುಷ್ಠಾನ - ಆನ್‍ಲೈನ್ ವ್ಯವಸ್ಥೆ

Traffic E-Challan: ಸಂಚಾರ ನಿಯಮ ಉಲ್ಲಂಘನೆಗಾಗಿ ಸಂಗ್ರಹಿಸಲಾಗುವ ದಂಡದ ಹಣವು ನವೆಂಬರ್​ 1ರಿಂದ ನೇರವಾಗಿ ಸರ್ಕಾರದ ಖಜಾನೆಗೆ ಜಮೆಯಾಗುವ ವ್ಯವಸ್ಥೆಯ ಅನುಷ್ಠಾನಕ್ಕೆ ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.

Traffic E-Challan
ಇ-ಚಲನ್
author img

By ETV Bharat Karnataka Team

Published : Sep 16, 2023, 9:16 PM IST

ಬೆಂಗಳೂರು: ಕಾನೂನು ಜಾರಿ‌ ಪ್ರಕ್ರಿಯೆಯಲ್ಲಿ ಸರಳಗೊಳಿಸಲು ಹಾಗೂ ಡಿಜಿಟಲೀಕರಣಕ್ಕೆ ಒತ್ತು ನೀಡಲು‌ ರಾಜ್ಯ ಪೊಲೀಸ್ ಇಲಾಖೆಯು ಸಂಚಾರ ನಿಯಮ ಉಲ್ಲಂಘನೆಯ ದಂಡ ಸಂಗ್ರಹಣೆಗೆ ಇ-ಚಲನ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಇದಕ್ಕೆ ಮತ್ತಷ್ಟು ಪಾರದರ್ಶಕತೆಯ ಸ್ಪರ್ಶ ನೀಡಲು ಇಲಾಖೆ ಮುಂದಾಗಿದೆ. ವಾಹನ ಸವಾರರು ಕಟ್ಟುವ ದಂಡದ ಹಣವು ನೇರವಾಗಿಯೇ ಸರ್ಕಾರದ ಖಜಾನೆಗೆ ಜಮೆಯಾಗುವ ವ್ಯವಸ್ಥೆ ರೂಪಿಸಲಾಗಿದೆ. ಕನ್ನಡ ರಾಜ್ಯೋತ್ಸವ ದಿನದಿಂದ ಈ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.

ಈ ಹಿಂದೆ ಸಂಚಾರ ನಿಯಮ ಉಲ್ಲಂಘಿಸಿದರೆ ಸವಾರರಿಂದ ಪರ್ಸನಲ್ ಡಿಜಿಟಲ್ ಅಸ್ಟಿಸೆಂಟ್ (ಪಿಡಿಎ) ಉಪಕರಣ ಮೂಲಕ ಪೊಲೀಸರು ದಂಡ ಕಟ್ಟಿಸಿಕೊಳ್ಳುತ್ತಿದ್ದರು. ಭಾರತೀಯ ಸ್ಟೇಟ್​ ಬ್ಯಾಂಕ್​ (ಎಸ್​ಬಿಐ) ಮೂಲಕ ಸರ್ಕಾರದ ಖಜಾನೆಗೆ ದಂಡ ಪಾವತಿ ಹಣ ಹೋಗುವ ವ್ಯವಸ್ಥೆ ಇದಾಗಿದೆ. ಆದರೆ, ನವೆಂಬರ್​ 1ರ ನಂತರ ದಂಡದ ರೂಪದಲ್ಲಿ ಪಾವತಿಯಾದ ಹಣ ಬ್ಯಾಂಕ್​ ಖಾತೆಗೆ ತೆರಳದೆ ನೇರವಾಗಿ ಸರ್ಕಾರದ ಖಜಾನೆಗೆ ಹೋಗಲಿದೆ. ಈ ಕ್ರಮವು ಮುಕ್ತ ಹಾಗೂ ಪಾರದರ್ಶಕತೆ ಹೆಚ್ಚಿಸಲು ಸಹಕಾರಿಯಾಗಲಿದೆ‌.

ಅಷ್ಟೇ ಅಲ್ಲ, ಹೊಸ ನೂತನ ವ್ಯವಸ್ಥೆ ಜಾರಿಯಾದರೆ ದೇಶದಲ್ಲಿ‌ ಇಂತಹ ವ್ಯವಸ್ಥೆ ಹೊಂದಿದ ಮೊದಲ ರಾಜ್ಯ ಕರ್ನಾಟಕವಾಗಲಿದೆ. ಸದ್ಯ ಕಾರ್ಡ್ ಮತ್ತು ಯುಪಿಐ ಬಳಸಿ ಸಂಗ್ರಹಿಸಿದ ದಂಡದ ಮೊತ್ತವನ್ನು ಬ್ಯಾಂಕ್​ ಮೂಲಕ ಖಜಾನೆಗೆ ವರ್ಗಾಯಿಸಲಾಗುತ್ತಿದೆ. ಭಾರತೀಯ ಸ್ಟೇಟ್​ ಬ್ಯಾಂಕ್​ ವತಿಯಿಂದ ಒಟ್ಟು 2500 ಸಂಖ್ಯೆಯ ಪಿಡಿಎ ಉಪಕರಣಗಳು ಉಚಿತವಾಗಿ ನೀಡಿದ್ದು, ಈ ಪೈಕಿ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ 700 ಪಿಡಿಎ ಉಪಕರಣ ವಿತರಿಸಲಾಗಿದೆ.

ಸದ್ಯ ಅಸ್ತಿತ್ವದಲ್ಲಿರುವ ಇ-ಚಲನ್ ವ್ಯವಸ್ಥೆಯು ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸಂಚಾರ ದಂಡ ಪಾವತಿ ಮಾಡಲು ತಮ್ಮ ಕಾರ್ಡ್ ಹಾಗೂ ಯುಪಿಐ ಬಳಸುವ ಸೌಲಭ್ಯವನ್ನು ಒದಗಿಸುತ್ತದೆ. ಆನ್‍ಲೈನ್ ವ್ಯವಸ್ಥೆಯ ಮೂಲಕ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‍ಗಳು, ಲ್ಯಾಪ್​ ಟಾಪ್‍ಗಳು ಅಥವಾ ಇತರ ಡಿಜಿಟಲ್ ಸಾಧನಗಳಲ್ಲಿ ಬಾಕಿ ಇರುವ ತಮ್ಮ ದಂಡ ಪಾವತಿಯ ಮಾಹಿತಿ ಕುರಿತು ಪರಿಶೀಲಿಸಲು ಅವಕಾಶವಿದೆ.

ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆಯ ಹೆಸರಲ್ಲಿ ನಕಲಿ ಇ-ಚಲನ್ ಲಿಂಕ್​ಗಳು.. ಸೈಬರ್ ಖದೀಮರ ಹೊಸ ವರಸೆ ಬಗ್ಗೆ ಕಮಿಷನರ್ ಎಚ್ಚರಿಕೆ

ಮತ್ತೊಂದೆಡೆ, ವಾಹನ ಕಳ್ಳತನಕ್ಕೆ ಸಂಬಂಧಪಟ್ಟಂತೆ ದೂರು ದಾಖಲಿಸಲು ಇ-ಎಫ್ಐಆರ್ ವ್ಯವಸ್ಥೆಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಇದರಿಂದ ಸಾರ್ವಜನಿಕರು ಸುಖಾಸುಮ್ಮನೆ ಪೊಲೀಸ್ ಠಾಣೆಗೆ ಅಲೆಯುವುದು ತಪ್ಪಲಿದೆ‌. ಕರ್ನಾಟಕ ಪೊಲೀಸ್ ವೆಬ್‌ಸೈಟ್​ಗೆ ಹೋಗಿ ಸಿಟಿಜನ್ ಡೆಸ್ಕ್ ಮೇಲೆ ಕ್ಲಿಕ್‌ ಮಾಡಿ ದೂರು ನೋಂದಾಯಿಸಬಹುದು.

ಇದರಲ್ಲಿ ಲಾಗಿನ್ ಆದ ಬಳಿಕ ವಾಹನ ಕಳುವಿಗೆ ಸಂಬಂಧಪಟ್ಟಂತೆ ಇ-ಎಫ್ಐಆರ್ ದಾಖಲಿಸಬಹುದು. ವಾಹನದ ವಿವರ ಹಾಗೂ ದೂರುದಾರರ ಮಾಹಿತಿ ನಮೂದಿಸಬಹುದು. ಒಮ್ಮೆ ವಾಹನದ ನೋಂದಣಿ ಸಂಖ್ಯೆ, ಹೆಸರು ನಮೂದಿಸಿದರೆ ಸ್ವಯಂಚಾಲಿತವಾಗಿ ವಾಹನದ ಎಲ್ಲಾ ದಾಖಲಾತಿ ತಾನಾಗೇ ಭರ್ತಿಯಾಗಲಿದೆ. ನಂತರ ನಿಮ್ಮ ಮೊಬೈಲ್ ನಂಬರ್​ಗೆ ಮೆಸೇಜ್ ಬರಲಿದೆ. ಈ ಮೂಲಕ ಸ್ವಯಂಚಾಲಿತವಾಗಿ ಇ-ಎಫ್ಐಅರ್ ದಾಖಲಾಗಲಿದೆ.

ಇದನ್ನೂ ಓದಿ: ರಾಜ್ಯ ಪೊಲೀಸ್ ಇಲಾಖೆಯಿಂದ ವಿನೂತನ ಪ್ರಯತ್ನ: ಇ-ಎಫ್ಐಆರ್​ಗೆ ಸಿಎಂ ಸಿದ್ದರಾಮಯ್ಯ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.