ಬೆಂಗಳೂರು: ನಟ ಕಿಚ್ಚ ಸುದೀಪ್ ಅವರಿಗೆ ಬೆದರಿಕೆ ಪತ್ರ ರವಾನಿಸಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಪತ್ರದ ಜಾಡು ಹುಡುಕಿ ಹೊರಟಿರುವ ಪೊಲೀಸರಿಗೆ ಕಾರೊಂದರ ಸುಳಿವು ಸಿಕ್ಕಿದೆ. ಪತ್ರವನ್ನು ದೊಮ್ಮಲೂರು ಪೋಸ್ಟ್ ಆಫೀಸ್ ಮೂಲಕ ಪೋಸ್ಟ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಸ್ವಿಫ್ಟ್ ಕಾರಿನಲ್ಲಿ ಬಂದು ಲೆಟರ್ ಪೋಸ್ಟ್ ಮಾಡಲಾಗಿದೆ.
ಸಿಸಿಟಿವಿಯಲ್ಲಿ ಕಂಡುಬಂದ ದೃಶ್ಯದಲ್ಲಿ, ಕೆಂಗೇರಿ ನಿವಾಸಿಯೊಬ್ಬರ ವಾಹನದ ನಂಬರ್ ಪತ್ತೆಯಾಗಿದೆ. ಆದರೆ ಆತನನ್ನು ವಿಚಾರಿಸಿದಾಗ ಆ ವ್ಯಕ್ತಿಗೂ ಕೃತ್ಯಕ್ಕೂ ಸಂಬಂಧವಿಲ್ಲ ಎಂದು ತಿಳಿದುಬಂದಿರುವುದಾಗಿ ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.
ಮಾರ್ಚ್ 3ರಂದು ಸುದೀಪ್ ಅವರ ಜೆ.ಪಿ.ನಗರದ ನಿವಾಸದ ವಿಳಾಸಕ್ಕೆ ಬಂದಿರುವ ಎರಡು ಅನಾಮಧೇಯ ಪತ್ರಗಳಲ್ಲಿ ಸುದೀಪ್ ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿತ್ತು. ಸುದೀಪ್ ಆಪ್ತ ಜಾಕ್ ಮಂಜು ಪತ್ರದ ಸಮೇತ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ:ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ.. ಸಿಸಿಬಿ ಹೆಗಲಿಗೆ ಪ್ರಕರಣದ ತನಿಖಾ ಜವಾಬ್ದಾರಿ