ETV Bharat / state

ಬೆಂಗಳೂರಲ್ಲಿ ಪಾರ್ಕಿಂಗ್ ಸಿಬ್ಬಂದಿ ಯಾಮಾರಿಸಿ ಕಾರ್​ ಕದ್ದೊಯ್ದ​ ಖದೀಮರು

ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದು, ಈ ಕುರಿತು ಅಶೋಕ್‌ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೋವಾ ಕ್ರಿಸ್ಟಾ ಕಾರು
ಇನ್ನೋವಾ ಕ್ರಿಸ್ಟಾ ಕಾರು
author img

By

Published : Nov 8, 2021, 7:14 AM IST

ಬೆಂಗಳೂರು: ಪಾರ್ಕಿಂಗ್ ಸೆಕ್ಯೂರಿಟಿಯಿಂದ ಇನ್ನೋವಾ ಕ್ರಿಸ್ಟಾ ಕಾರಿನ ಕೀ ಪಡೆದು ನಂತರ ಕಾರು ಸಮೇತ ಕಳ್ಳರು ಪರಾರಿಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬನಶಂಕರಿ 2ನೇ ಹಂತದ ನಿವಾಸಿ, ಉದ್ಯಮಿ ಲಿಂಗರಾಜು (26) ನೀಡಿರುವ ದೂರಿನ ಆಧಾರದ ಮೇಲೆ ಅಶೋಕ್‌ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದೂರು ಪ್ರತಿ
ದೂರು ಪ್ರತಿ

ನವೆಂಬರ್ 5 ರಂದು ಲಿಂಗರಾಜು ತನ್ನ ಸ್ನೇಹಿತರೊಂದಿಗೆ ಮೆಗ್ರಾಥ್ ರಸ್ತೆಯಲ್ಲಿರುವ ಪಬ್‌ಗೆ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಊಟಕ್ಕೆ ಬಂದಿದ್ದರು. ಕಾರಿನ ಕೀ ಅನ್ನು ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿ ಕೈಗೆ ಕೊಟ್ಟು ತೆರಳಿದ್ದರು. ಪಾರ್ಕಿಂಗ್ ಸಿಬ್ಬಂದಿ ಕಾರ್ ನಂಬರ್‌ ಅನ್ನು ಸಹ ನಮೂದಿಸಿ ರಸೀದಿ ನೀಡಿದ್ದರು.

ಲಿಂಗರಾಜು ಕಾರಿನಲ್ಲಿ ಬಂದಿರುವುದನ್ನು ಗಮನಿಸಿದ ಕಳ್ಳರು, ಕಾರನ್ನು ಕದಿಯಲು ಸಂಚು ರೂಪಿಸಿದ್ದರು. ಅದರಂತೆ ಪಬ್ ಒಳಗೆ ಕೆಲ ಸಮಯ ಕಳೆದ ಖದೀಮರು ಬಳಿಕ ನೇರವಾಗಿ ಪಾರ್ಕಿಂಗ್ ಸಿಬ್ಬಂದಿ ಬಳಿ ಬಂದು ನಾವು ಹೊರಟಿದ್ದೇವೆ. ಬೇಗ ಇನ್ನೋವಾ ಕ್ರಿಸ್ಟಾ ಕಾರಿನ ಕೀ ಕೊಡಿ ಎಂದು ಕೇಳಿದ್ದಾರೆ. ಪಾರ್ಕಿಂಗ್ ಸಿಬ್ಬಂದಿ ಕಾರಿನ ಕೀ ಕೊಟ್ಟು ಕಳುಹಿಸಿದ್ದಾರೆ. ಕೀ ಪಡೆದ ಕಳ್ಳರು ಸುಲಭವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.

ಇನ್ನೋವಾ ಕ್ರಿಸ್ಟಾ ಕಾರು
ಇನ್ನೋವಾ ಕ್ರಿಸ್ಟಾ ಕಾರು

ಇತ್ತ ಊಟ ಮುಗಿಸಿಕೊಂಡು ಕಾರು ನಿಲುಗಡೆ ಜಾಗಕ್ಕೆ ಬಂದ ಲಿಂಗರಾಜು, ಪಾರ್ಕಿಂಗ್ ಸಿಬ್ಬಂದಿ ಬಳಿ ಕಾರಿನ ಕೀ ಕೇಳಿದಾಗ ಕಾರು ಕಳ್ಳತನವಾಗಿರುವುದು ತಿಳಿದು ಬಂದಿದೆ. ಸದ್ಯಕ್ಕೆ ಪಬ್‌ನ ಪಾರ್ಕಿಂಗ್ ಸಿಬ್ಬಂದಿ ಮೇಲೆಯೇ ಲಿಂಗರಾಜು ಅನುಮಾನ ವ್ಯಕ್ತಪಡಿಸಿ, ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.