ETV Bharat / technology

ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಗತ ಬೆಳವಣಿಗೆ ಹೆಚ್ಚಿಸಲು ಸುಮಾರು ಐದು ಸಾವಿರ ಡಿಜಿಟಲ್ ಸೇವಾ ಕೇಂದ್ರ ಪ್ರಾರಂಭ - DIGITAL SERVICE CENTRES

Digital Service Centres: ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಗತ ಬೆಳವಣಿಗೆ ಹೆಚ್ಚಿಸಲು ಸುಮಾರು ಐದು ಸಾವಿರ ಡಿಜಿಟಲ್ ಸೇವಾ ಕೇಂದ್ರಗಳನ್ನು ಸರ್ಕಾರ ಪ್ರಾರಂಭಿಸಿದೆ.

DIGITAL INDIA COMMON SERVICE CENTER  DIGITAL SERVICES  DICSC CENTRES
ಐದು ಸಾವಿರ ಡಿಜಿಟಲ್ ಸೇವಾ ಕೇಂದ್ರ ಪ್ರಾರಂಭ (IANS)
author img

By ETV Bharat Tech Team

Published : Nov 2, 2024, 10:22 AM IST

Digital Service Centers: ಗ್ರಾಮೀಣ ಭಾರತದಲ್ಲಿನ ಡಿಜಿಟಲ್ ವಿಭಜನೆ ನಿವಾರಿಸಲು ಮತ್ತು ಡಿಜಿಟಲ್ ಸೇವೆಗಳು ಪ್ರತಿಯೊಬ್ಬ ನಾಗರಿಕರನ್ನು ತಲುಪಿಸುವುದಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಶುಕ್ರವಾರ ಡಿಜಿಟಲ್ ಇಂಡಿಯಾ ಕಾಮನ್ ಸರ್ವಿಸ್ ಸೆಂಟರ್ (ಡಿಐಸಿಎಸ್​ಸಿ) ಯೋಜನೆ ಪ್ರಾರಂಭಿಸಿದೆ.

ಉತ್ತರ ಪ್ರದೇಶದ ಪಿಲಿಭಿತ್ ಮತ್ತು ಗೋರಖ್‌ಪುರದಿಂದ ಆರಂಭಗೊಂಡ ಈ ಯೋಜನೆಯು 10 ಜಿಲ್ಲೆಗಳಾದ್ಯಂತ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಒಂದು ಮಾದರಿ ಡಿಐಸಿಎಸ್​ಸಿ ಕೇಂದ್ರವನ್ನು ಸ್ಥಾಪಿಸುತ್ತದೆ. ಒಟ್ಟು 4,740 ಕೇಂದ್ರಗಳನ್ನು ರಾಷ್ಟ್ರವ್ಯಾಪಿಯಾಗಿ ಪ್ರಾರಭಿಸುತ್ತದೆ. ಈ ಕೇಂದ್ರಗಳು ಆಧಾರ್ ನೋಂದಣಿ, ಬ್ಯಾಂಕಿಂಗ್, ಹಣಕಾಸು ಯೋಜನೆ, ಟೆಲಿ - ಕಾನೂನು, ಟೆಲಿಮೆಡಿಸಿನ್, ಶಿಕ್ಷಣ ಮತ್ತು ಇ-ಕಾಮರ್ಸ್ ಬೆಂಬಲ ಸೇರಿದಂತೆ ವಿವಿಧ ಸೇವೆಗಳನ್ನು ನೀಡುತ್ತವೆ.

ಪಿಲಿಭಿತ್‌ನಲ್ಲಿ 720 ಡಿಐಸಿಎಸ್‌ಸಿ ಕೇಂದ್ರಗಳು ಸ್ಥಾಪನೆಯಾಗಲಿದ್ದು, ಗೋರಖ್‌ಪುರದಲ್ಲಿ 1,273 ಕೇಂದ್ರಗಳಿವೆ. ಜೊತೆಗೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ 870 ಕೇಂದ್ರಗಳನ್ನು ಹೊಂದಿದ್ದು, ಹಿಮಾಚಲ ಪ್ರದೇಶದ ಚಂಬಾ 309, ತೆಲಂಗಾಣದ ಖಮ್ಮಂ 589, ಗುಜರಾತ್​ನ ಗಾಂಧಿನಗರ 88, ಮಿಜೋರಾಮ್​ನ ಮಮಿತ್ 100, ರಾಜಸ್ಥಾನದ ಜೋಧ್‌ಪುರ 415, ಲಡಾಖ್​ನ ಲೇಹ್ 95 ಮತ್ತು ಪುದುಚೇರಿ ರಾಜ್ಯ 81 DICSC ಕೇಂದ್ರಗಳು ಹೊಂದಿವೆ.

31.6088 ಕೋಟಿ ಬಜೆಟ್‌ನ ಈ ಯೋಜನೆಯು ಪ್ರಾರಂಭಿಕವಾಗಿ ಆರು ತಿಂಗಳವರೆಗೆ ಚಾಲನೆಯಾಗಲಿದೆ. ಬಳಿಕ ಇದನ್ನು ಒಂಬತ್ತು ತಿಂಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ. ಕೇಂದ್ರಗಳು ಪ್ರಾಥಮಿಕವಾಗಿ ಗ್ರಾಮೀಣ ನಾಗರಿಕರಿಗೆ ಹಣಕಾಸು ಮತ್ತು ವಾಣಿಜ್ಯ ಸೇವೆಗಳ ಜೊತೆಗೆ ಅಗತ್ಯ ಇ-ಆಡಳಿತ ಸೇವೆಗಳನ್ನು ಒದಗಿಸುವ ಸಮಗ್ರ ಮಾಹಿತಿಯನ್ನು ನೀಡುತ್ತವೆ.

CSC ಇ-ಗವರ್ನೆನ್ಸ್ ಸರ್ವಿಸಸ್​ ಇಂಡಿಯಾ ಈ ಕೇಂದ್ರಗಳ ಕೇಂದ್ರೀಕೃತ ತಾಂತ್ರಿಕ ಮೇಲ್ವಿಚಾರಣೆಯನ್ನು ನಿರ್ವಹಿಸುತ್ತದೆ ಮತ್ತು ಕಾರ್ಯಗತಗೊಳಿಸುತ್ತದೆ. ಅಷ್ಟೇ ಅಲ್ಲ ಇದು ಉದ್ಯೋಗಗಳ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಪ್ರತಿ CSC ಬಹು-ಕಾರ್ಯಕಾರಿ ಸೇವಾ ಕೇಂದ್ರವಾಗಿ ಕಾರ್ಯನಿರ್ವಹಿಸಲು ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ಮತ್ತು ಆಧುನಿಕ ಮೂಲಸೌಕರ್ಯವನ್ನು ಹೊಂದಿದೆ. ಈ ಯೋಜನೆಯು ಗ್ರಾಮ ಮಟ್ಟದ ಉದ್ಯಮಿಗಳನ್ನು (ವಿಎಲ್‌ಇ) ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ, ಸ್ಥಳೀಯ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಸರ್ಕಾರದ ಯೋಜನೆಗಳನ್ನು ಉತ್ತೇಜಿಸಲು ಜಿಪಿಎಸ್-ಶಕ್ತಗೊಂಡ ಮೊಬೈಲ್ ವ್ಯಾನ್‌ಗಳನ್ನು ನಿಯೋಜಿಸಲಾಗುವುದು ಮತ್ತು ದೂರದ ಪ್ರದೇಶಗಳಿಗೆ ನೇರವಾಗಿ ಅಗತ್ಯ ಸೇವೆಗಳನ್ನು ತಲುಪಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಓದಿ: ದೇಶದಲ್ಲಿ ಹೆಚ್ಚುತ್ತಿದೆ ಡಿಜಿಟಲ್​ ವಹಿವಾಟು; ಅಕ್ಟೋಬರ್​ನಲ್ಲಿ ಹೊಸ ದಾಖಲೆ ಬರೆದ ಯುಪಿಐ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.