ETV Bharat / state

ಹಬ್ಬದ ರಜೆ ಮುಗಿಸಿಕೊಂಡು ನಗರಗಳತ್ತ ಮುಖ ಮಾಡಿದ ಜನ: ಕಿಕ್ಕಿರಿದ ಗಂಗಾವತಿ ಬಸ್​ ನಿಲ್ದಾಣ

ದೀಪಾವಳಿ ಹಬ್ಬದ ಸಾಲು ಸಾಲು ರಜೆ ಮುಗಿದ ಹಿನ್ನೆಲೆ ಜನರು ನಗರಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆ ಭಾನುವಾರ ಗಂಗಾವತಿ ಬಸ್ ನಿಲ್ದಾಣ ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು.

ಕಿಕ್ಕಿರಿದ ಗಂಗಾವತಿ ಬಸ್​ ನಿಲ್ದಾಣ
ಕಿಕ್ಕಿರಿದ ಗಂಗಾವತಿ ಬಸ್​ ನಿಲ್ದಾಣ (ETV Bharat)
author img

By ETV Bharat Karnataka Team

Published : Nov 3, 2024, 10:56 PM IST

ಗಂಗಾವತಿ(ಕೊಪ್ಪಳ): ದೀಪಾವಳಿ ಹಬ್ಬದ ಸಾಲು ಸಾಲು ರಜೆ ಮುಗಿಸಿಕೊಂಡು ಜನ ಮರಳಿ ನಗರ ಮತ್ತು ಪಟ್ಟಣಗಳಿಗೆ ಪ್ರಯಾಣ ಬೆಳೆಸುತ್ತಿದ್ದು, ನಗರದ ಬಸ್ ನಿಲ್ದಾಣ ಭಾನುವಾರ ಸಂಜೆ ಪ್ರಯಾಣಿಕರಿಂದ ಕಿಕ್ಕಿರಿದಿತ್ತು. ಸಮಯಕ್ಕೆ ಸರಿಯಾಗಿ ಬಸ್ ಸಿಗದೇ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.

ಬಸ್​ ನಿಲ್ದಾಣದಲ್ಲಿ ಬೆಂಗಳೂರು, ಮೈಸೂರು, ಕೋಲಾರ, ದಾವಣಗೆರೆ ಹಾಗೂ ಶಿವಮೊಗ್ಗಕ್ಕೆ ಹೋಗುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಬಸ್ ನಿಲ್ದಾಣದ ಪ್ರತಿಯೊಂದು ಫ್ಲಾಟ್​ಫಾರಂಗಳು ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು. ಬಸ್​ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಆಸನಗಳಿಗಾಗಿ ಜನ ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರಯಾಣಿಕರಿಂದ ಗಿಜಿಗುಡುತ್ತಿರು ಬಸ್​ ನಿಲ್ದಾಣ
ಪ್ರಯಾಣಿಕರಿಂದ ಗಿಜಿಗುಡುತ್ತಿರು ಬಸ್​ ನಿಲ್ದಾಣ (ETV Bharat)

ಗಂಗಾವತಿಯಿಂದ ಬೆಂಗಳೂರು, ತುಮಕೂರಿಗೆ ಹೋಗುವ ರಾತ್ರಿ ಸಂಚರಿಸುವ ಬಹುತೇಕ ಬಸ್​ ಸೀಟ್​ಗಳು ಬುಕ್ಕಿಂಗ್ ಆಗಿವೆ. ಹೀಗಾಗಿ ಪ್ರಯಾಣಿಕರು ಬೆಂಗಳೂರು ಕಡೆಗೆ ಹೋಗುವ ಯಾವುದೇ ಬಸ್ ಬಂದರೂ ಹತ್ತಲು ಪೈಪೋಟಿ ನಡೆಸುತ್ತಿದ್ದರು. ಬಹುತೇಕ ಖಾಸಗಿ ಬಸ್​ಗಳ ಮಾಲೀಕರು ಟಿಕೆಟ್​ ದರ ಹೆಚ್ಚಳ ಮಾಡಿರುವ ಹಿನ್ನೆಲೆ ಕಡಿಮೆ ದರದಲ್ಲಿ ಊರು ಸೇರಲು ಪ್ರಯಾಣಿಕರು ಅನಿವಾರ್ಯವಾಗಿ ಸಾರಿಗೆ ಬಸ್​ಗಳನ್ನು ಅವಲಂಭಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ರಜೆ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.