ETV Bharat / state

ಬಿಜೆಪಿಯವರು ವಕ್ಫ್​ ವಿಷಯ ಬಳಸಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ: ಶಾಸಕ ವಿನಯ್​ ಕುಲಕರ್ಣಿ - VINAY KULKARNI

ಬಿಜೆಪಿಯವರು ಸೋಮವಾರ ಪ್ರತಿಭಟನೆಗೆ ಮುಂದಾಗಿದ್ದಾರೆ. ಯಾಕಂದರೆ ಅವರಿಗೆ ಚುನಾವಣೆ ಬಂದ ಸಂದರ್ಭದಲ್ಲಿ ಯಾವುದೇ ಅಸ್ತ್ರ ಇರಲ್ಲ ಎಂದು ಶಾಸಕ ವಿನಯ್​ ಕುಲಕರ್ಣಿ ಟೀಕಿಸಿದ್ದಾರೆ.

ವಿನಯ್​ ಕುಲಕರ್ಣಿ
ವಿನಯ್​ ಕುಲಕರ್ಣಿ (ETV Bharat)
author img

By ETV Bharat Karnataka Team

Published : Nov 3, 2024, 11:00 PM IST

ಹಾವೇರಿ: ಬಿಜೆಪಿಯವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೇಹಾ ಹತ್ಯೆ ಪ್ರಕರಣ ಬಳಸಿಕೊಂಡಿದ್ದರು. ಈಗ ವಕ್ಫ್​ ವಿಷಯ ಬಳಸಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ ಎಂದು ಶಾಸಕ ವಿನಯ್​ ಕುಲಕರ್ಣಿ ವಾಗ್ದಾಳಿ ನಡೆಸಿದರು.

ಭಾನುವಾರ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್​ ವಿವಾದ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ನೋಟಿಸ್ ಹಿಂಪಡೆಯುವ ಕೆಲಸ ಈಗಾಗಲೇ ಆಗಿದೆ. ನಾವೂ ರೈತರೇ, ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಈ ವಿಚಾರದಲ್ಲಿ ನಮ್ಮ ಪಕ್ಷ ಕೂಡಾ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ವಿನಯ್​ ಕುಲಕರ್ಣಿ (ETV Bharat)

ಬಿಜೆಪಿಯವರು ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದ್ದಾರೆ. ಯಾಕಂದರೆ ಅವರಿಗೆ ಚುನಾವಣೆ ಬಂದ ಸಂದರ್ಭದಲ್ಲಿ ಯಾವುದೇ ಅಸ್ತ್ರ ಇರಲ್ಲ. ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಅವರಿಗೆ ಆಗಲ್ಲ, ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ನೇಹಾ ಹಿರೇಮಠ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡರು. ಇಲ್ಲದಿದ್ದರೆ ನಮ್ಮ ವಿನೋದ್​ ಅಸೂಟಿ ಗೆದ್ದು ಸಂಸದರಾಗುತ್ತಿದ್ದರು. ವಕ್ಫ್​ ಗೆಜೆಟ್​ ನೋಟಿಫಿಕೇಷನ್​ ರದ್ದು ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಕಡಕೋಳದಲ್ಲಿ ಗಲಾಟೆ ಆಗಿರೋದು ದುರದೃಷ್ಟಕರ: ಶಿವಾನಂದ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.