ಆನೇಕಲ್: ಕೆಎಸ್ಆರ್ಟಿಸಿ ಬಸ್ ಲೇಡಿ ಕಂಡಕ್ಟರ್ನ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದವನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಆನೇಕಲ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಆನೇಕಲ್ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳಲು ಸಿದ್ದವಾಗಿದ್ದ ಕೆಎಸ್ಆರ್ಟಿಸಿ ಎಕ್ಸ್‌ಪ್ರೆಸ್ ಬಸ್ನ ಲೇಡಿ ಕಂಡಕ್ಟರ್ ಕಚೇರಿಯಲ್ಲಿ ಎಂಟ್ರಿ ಮಾಡಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಬಸ್ ನಲ್ಲಿ ಇಟ್ಟಿದ್ದ ಬ್ಯಾಗ್ ಅನ್ನು ಗಮನಿಸಿದ ಖದೀಮ ಬ್ಯಾಗ್ ಕದ್ದು ಎಸ್ಕೇಪ್ ಆಗುವಾಗ ಲೇಡಿ ಕಂಡಕ್ಟರ್ ಹಿಂಬಾಲಿಸಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಕಪಾಳ ಮೋಕ್ಷ ಕೊಟ್ಟಿದ್ದಾರೆ.
ಇನ್ನು ಬ್ಯಾಗ್ ನಲ್ಲಿ ಮೊಬೈಲ್ ಪೋನ್ ಸೇರಿದಂತೆ ಬೆಲೆ ಬಾಳುವ ವಸ್ತುಗಳಿದ್ದು, ಕಳ್ಳ ಸಂಜೆ ಶಾಲಾ ಕಾಲೇಜು ಹಾಗೂ ಕೆಲಸ ಬಿಟ್ಟ ಸಂಧರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಹೆಚ್ಚು ಜನರಿರುವುದನ್ನು ಗಮನಿಸಿ ಬ್ಯಾಗ್ ಕದ್ದು ಎಸ್ಕೇಪ್ ಆಗಲು ಸ್ಕೆಚ್ ಹಾಕಿದ್ದ ಎಂದು ತಿಳಿದುಬಂದಿದೆ.