ETV Bharat / state

ಶಾಲೆಗಳು ಆರಂಭವಾದರೆ ಶುರುವಾಗಲಿದೆ ಶಿಕ್ಷಕರ ಕೊರತೆ: ಚಿಂತೆಯಲ್ಲಿ ಶಿಕ್ಷಣ ಸಂಸ್ಥೆಗಳು

ಕೊರೊನಾ ನಿಯಂತ್ರಣಕ್ಕೆ ಬಂದಮೇಲೂ ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರ ‌ಕೊರತೆ ದೊಡ್ಡ ಸಮಸ್ಯೆಯಾಗಲಿದೆ. ಈ ಸಂಬಂಧ ಆತಂಕ ವ್ಯಕ್ತಪಡಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಮುಂದಿನ‌ ದಿನಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಬಜೆಟ್ ಶಾಲೆಗಳು ಮುಚ್ಚುವ ದುಸ್ಥಿತಿ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Education
ಶಿಕ್ಷಣ
author img

By

Published : Oct 28, 2020, 5:18 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಬಂದಿದ್ದೇ ಬಂದಿದ್ದು ಎಲ್ಲಾ ಕ್ಷೇತ್ರಗಳ ಮೇಲೂ ಗಂಭೀರ‌ ಪರಿಣಾಮ ಬೀರಿದೆ.‌ ಇತ್ತ ಕೊರೊನಾ ರಾಜ್ಯಕ್ಕೆ ಕಾಲಿಟ್ಟು 8 ತಿಂಗಳು ಕಳೆದಿದ್ದರೂ ಯಾವುದೇ ರಂಗವಾಗಲಿ ಪೂರ್ಣ ಪ್ರಮಾಣದಲ್ಲಿ ಚೇತರಿಕೆ‌ ಕಂಡಿಲ್ಲ.‌ ಈ ಪೈಕಿ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಪೆಟ್ಟಿಗೆ ಇನ್ನು ಪುನರ್ ಆರಂಭಕ್ಕೆ ಪರ-ವಿರೋಧಗಳು ಕೇಳಿ ಬರುತ್ತಿವೆ. ಇತ್ತ ಭವಿಷ್ಯ ರೂಪಿಸುವ ಶಿಕ್ಷಕರ ಭವಿಷ್ಯವೇ ಅತಂತ್ರಕ್ಕೆ ಸಿಲುಕಿದೆ.

ಕೊರೊನಾ ನಿಯಂತ್ರಣಕ್ಕೆ ಬಂದಮೇಲೂ ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರ ‌ಕೊರತೆ ದೊಡ್ಡ ಸಮಸ್ಯೆಯಾಗಲಿದೆ. ಈ ಸಂಬಂಧ ಆತಂಕ ವ್ಯಕ್ತಪಡಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಮುಂದಿನ‌ ದಿನಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಬಜೆಟ್ ಶಾಲೆಗಳು ಮುಚ್ಚುವ ದುಸ್ಥಿತಿ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತ ಶಾಲೆಗಳು ಶಿಕ್ಷಕರಿಗೆ ಸಂಬಳ ನೀಡಲು ಸಾಧ್ಯವಾಗದೇ ಇರುವ ಕಾರಣಕ್ಕೆ ಅನಿವಾರ್ಯವಾಗಿ ಬಹುತೇಕ ಶಿಕ್ಷಕರನ್ನು ಕೆಲಸದಿಂದ ತಾತ್ಕಾಲಿಕವಾಗಿ ತೆಗೆಯಲಾಗಿದೆ. ಅತಂತ್ರದಲ್ಲಿ ಸಿಲುಕಿರುವ ಶಿಕ್ಷಕರು‌, ಇದೀಗ ಶಿಕ್ಷಕ ವೃತ್ತಿ ಬಿಟ್ಟು ಬೇರೆ ವೃತ್ತಿಯ ಕಡೆ ಹೆಜ್ಜೆ ಹಾಕಿದ್ದಾರೆ.‌

ಈ ಟಿವಿ ಭಾರತದೊಂದಿಗೆ ಮಾತನಾಡಿದ ಕ್ಯಾಮ್ಸ್​ನ ಕಾರ್ಯದರ್ಶಿ ಶಶಿಕುಮಾರ್

ಹೀಗಾಗಿ, ಶಿಕ್ಷಕರಿದ್ದರೆ ಶಿಕ್ಷಣ ಸಂಸ್ಥೆಗಳು ಉಳಿದರೆ ಶಿಕ್ಷಕರ ಉಳಿವು ಎಂಬುದನ್ನು ಅರಿತು ಇದೀಗ ರಾಜ್ಯ ಪಠ್ಯಕ್ರಮ ಹೊಂದಿರುವ ಖಾಸಗಿ ಅನುದಾನ ರಹಿತ ಶಾಲೆಗಳು ಹೋರಾಟಕ್ಕೆ ಸಿದ್ದವಾಗುತ್ತಿವೆ. ಸರ್ಕಾರ ಕೂಡಲೇ ಶಿಕ್ಷಕರ ವರ್ಗವನ್ನು ಉಳಿಸಬೇಕು. ಇದಕ್ಕಾಗಿ ಪ್ರತ್ಯೇಕ ಪ್ಯಾಕೇಜ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ನವೆಂಬರ್​ನಲ್ಲಿ ಈ ಸಂಬಂಧ ಮುಷ್ಕರ ಮಾಡಲು ತಯಾರಿ ನಡೆದಿದೆ.

ಈ ಬಗ್ಗೆ ಮಾತಾನಾಡಿರುವ ಕ್ಯಾಮ್ಸ್​ನ ಕಾರ್ಯದರ್ಶಿ ಶಶಿಕುಮಾರ್, ಕೊರೊನಾ‌ ಹೊಡೆತಕ್ಕೆ ಸಿಲುಕಿ ಶಿಕ್ಷಣ ಸಂಸ್ಥೆಗಳು ನಲುಗಿ ಹೋಗಿವೆ. ಸದ್ಯ ಶಿಕ್ಷಕರಲ್ಲಿ ಮೂರು ವರ್ಗವಾಗಿದ್ದು ಹಲವರು ಶಿಕ್ಷಕರು ಮತ್ತೆ ಊರ ದಾರಿ ಸೇರಿದ್ದಾರೆ. ಎರಡನೇ ವರ್ಗದವರು ಆನ್​ಲೈನ್ ಶಿಕ್ಷಣವಷ್ಟೇ ನೀಡುತ್ತಿದ್ದು, ಕಾಲೇಜಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಶಿಕ್ಷಕರ‌ ವೃತ್ತಿ‌ ತ್ಯಜಿಸಿ ಬೇರೆ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ.

ಕೊರೊನಾಗೂ ಮುಂಚೆಯೇ ದೇಶದಲ್ಲಿ ಶಿಕ್ಷಕರ ಕೊರತೆ ಇದ್ದು, ಇದೀಗ ಕೊರೊನಾ ನಂತರ ದಿನಗಳಿಂದ ಇನ್ನಷ್ಟು ಶಿಕ್ಷಕರ ಕೊರತೆ ಪ್ರಮಾಣ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರದಿಂದ ಇದಕ್ಕಾಗಿ ಪ್ರೇರಣೆಯಾಗುವಂತಹ ಕೆಲಸ ಶುರುವಾಗಬೇಕಿದೆ. ರಾಜ್ಯದಲ್ಲಿ ಈಗಾಗಲೇ ಶೇ.10ರಷ್ಟು ಶಿಕ್ಷಕರ ಕೊರತೆ ಉಂಟಾಗಿದ್ದು ನುರಿತ ಶಿಕ್ಷಕರು ಇಲ್ಲದಂತಾಗುತ್ತೆ. ನುರಿತ ಶಿಕ್ಷಕರು ಕೆಲಸ ಬಿಟ್ಟರೆ ಮುಂದಿನ‌ದಿನಗಳಲ್ಲಿ ತೊಂದರೆಯಾಗಲಿದೆ. ಅವರೆಲ್ಲರೂ ವಾಪಸ್ ಆಗಬೇಕು ಎಂದು ಶಶಿಕುಮಾರ್ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.