ETV Bharat / state

ವ್ಯಾಕ್ಸಿನ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ, ಲಸಿಕೆಗಾಗಿ ಗುಂಪು ಸೇರಿಕೊಂಡು ನಿಲ್ಲಬೇಡಿ: ಬೊಮ್ಮಾಯಿ - Basavaraja Bommai

ಕೋವಿಡ್​ ವ್ಯಾಕ್ಸಿನ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ಇನ್ನೆರಡು ದಿನದಲ್ಲಿ 3200 ಬೆಡ್ ಸಾಮರ್ಥ್ಯದ ಸ್ಟೆಪ್ ಡೌನ್ ಆಸ್ಪತ್ರೆಗಳು ಸಿದ್ಧಗೊಳ್ಳಲಿವೆ ಎಂದು ಬೆಂಗಳೂರಿನಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Minister Bommai
ಸಚಿವ ಬೊಮ್ಮಾಯಿ
author img

By

Published : May 12, 2021, 3:49 PM IST

ಬೆಂಗಳೂರು: ಕೋವಿಡ್​ ವ್ಯಾಕ್ಸಿನ್ ಸರಬರಾಜಿನಲ್ಲಿ ವ್ಯತ್ಯಾಸವಾಗಿದೆ. ಹಾಗಾಗಿ ಲಸಿಕೆ ಕೊಡುವುದರಲ್ಲಿ ವಿಳಂಬವಾಗುತ್ತಿದೆ. ಬರುವ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ವ್ಯಾಕ್ಸಿನ್ ಸರಬರಾಜು ಆಗಲಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಚಿವ ಬಸವರಾಜ ಬೊಮ್ಮಾಯಿ

ಆರ್.ಟಿ.ನಗರ ನಿವಾಸದಲ್ಲಿ ಮಾತನಾಡಿದ ಅವರು, ಎಸ್ಎಂಎಸ್ ಮೂಲಕ ಮಾಹಿತಿ ನೀಡಿ ಲಸಿಕೆ ನೀಡುವ ಕೆಲಸ ಮಾಡಲಾಗುತ್ತದೆ. ಸದ್ಯ ಎರಡನೇ ಡೋಸ್​ಗೆ ಆದ್ಯತೆ ನೀಡಲಾಗುತ್ತದೆ. ಸುಮ್ಮನೆ ಆತಂಕದಲ್ಲಿ ಗುಂಪು ಸೇರಿಕೊಂಡು ಲಸಿಕೆ ಪಡೆಯಲು ನಿಲ್ಲಬೇಡಿ. ಸ್ವಲ್ಪ ಕೊರತೆ ಇರುವ ಕಾರಣ ಸ್ವಲ್ಪ ಕಾಯಬೇಕಾಗಲಿದೆ. ಇನ್ನೆರಡು ದಿನದಲ್ಲಿ 3200 ಬೆಡ್ ಸಾಮರ್ಥ್ಯದ ಸ್ಟೆಪ್ ಡೌನ್ ಆಸ್ಪತ್ರೆಗಳು ಸಿದ್ಧಗೊಳ್ಳಲಿದ್ದು, ಆಸ್ಪತ್ರೆ ಬೆಡ್​ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳ ಬಳಕೆಯಿಂದ ಐಸಿಯು ಮೇಲಿನ ಒತ್ತಡವೂ ತಗ್ಗಲಿದೆ. ಸರ್ಕಾರಿ ಕೋಟಾದ ಬೆಡ್​ಗಳನ್ನು ಖಾಸಗಿ ಆಸ್ಪತ್ರೆಗಳು ತಪ್ಪದೇ ನೀಡಬೇಕು. ಬೆಡ್ ಖಾಲಿಯಾಗುತ್ತಿದ್ದಂತೆ ಅದನ್ನು ಸರ್ಕಾರದಿಂದ ಶಿಫಾರಸುಗೊಂಡ ರೋಗಿಗೆ ನೀಡಬೇಕು. ಇದೆಲ್ಲವೂ ಆಪ್ತಮಿತ್ರ ಆ್ಯಪ್​ನಲ್ಲಿ ಪಾರದರ್ಶಕವಾಗಿ ನಿರ್ವಹಣೆಯಾಗುವಂತೆ ಸೂಚಿಸಲಾಗಿದೆ.

ಬೆಡ್​​ ಖಾಲಿ ಇದ್ರೂ ನೀಡದಿರುವ ಆಸ್ಪತ್ರೆಗಳ ವಿರುದ್ಧ ಈಗಾಗಲೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹಾಗಾಗಿ ಕ್ರಮಕ್ಕೆ ಅವಕಾಶ ನೀಡದೆ ಸರ್ಕಾರ ಸೂಚಿಸಿದ ಸಂಖ್ಯೆಯ ಬೆಡ್​ಗಳನ್ನು ನೀಡಬೇಕು. 30ಕ್ಕೂ ಕಡಿಮೆ ಸಾಮರ್ಥ್ಯ ಇರುವ ಆಸ್ಪತ್ರೆಗಳಲ್ಲಿ ಬೆಡ್​ಗಳನ್ನು ಸರ್ಕಾರ ಈವರೆಗೆ ಪಡೆಯುತ್ತಿರಲಿಲ್ಲ. ಆದರೆ ಈಗ ಆ ಆಸ್ಪತ್ರೆಗಳು ಬೆಡ್ ಕೊಡಲು ಮುಂದೆ ಬಂದರೆ ಸ್ವೀಕರಿಸುತ್ತೇವೆ. ಇದರಿಂದಾಗಿ 1500-2000 ಬೆಡ್ ನಮಗೆ ಹೆಚ್ಚುವರಿಯಾಗಿ ಸಿಗಲಿವೆ ಎಂದರು.

ಲಾಕ್​ಡೌನ್​ನಿಂದ ಕೊರೊನಾ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಲಿದೆ. ಇದನ್ನು ಈ ಹಿಂದೆಯೇ ಲಾಕ್​ಡೌನ್ ಮಾಡಿದ್ದಾಗ ನೋಡಿದ್ದೇವೆ, ಎಲ್ಲವನ್ನೂ ಪರಿಶೀಲಿಸಿಯೇ ಲಾಕ್​ಡೌನ್ ಮಾಡಲಾಗಿದೆ. ಇದರ ಪರಿಣಾಮ 14 ದಿನದಲ್ಲಿ ಗೊತ್ತಾಗಲಿದೆ. ಈಗಾಗಲೇ ಸೋಂಕಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಇದಕ್ಕೆ ಕೋವಿಡ್ ಟೆಸ್ಟ್ ಸಂಖ್ಯೆಯಲ್ಲಿ ಕಡಿಮೆ ಮಾಡಲಾಗಿದೆ ಎನ್ನುವುದು ಕಾರಣವಲ್ಲ. ಯಾರಿಗೆ ಪಾಸಿಟಿವ್ ಬಂದಿರುತ್ತದೆಯೋ ಅವರ ಕುಟುಂಬ ಸದಸ್ಯರು, ನೆರೆಹೊರೆಯವರ ಪರೀಕ್ಷೆ ನಡೆಸಲಾಗುತ್ತಿದೆ. ನಾವು ಕೊರೊನಾ ಪರೀಕ್ಷೆಯ ಪ್ರಮಾಣ ಕಡಿಮೆ ಮಾಡುತ್ತಿಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.