ETV Bharat / state

ಲಾಕ್​​ಡೌನ್​ ಪರಿಣಾಮ ಪಾಳು ಬಿದ್ದ ಸ್ಥಿತಿಯಲ್ಲಿ ಮನರಂಜನಾ ಪಾರ್ಕ್​​​​ಗಳು - Theme Park

ರಾಜ್ಯದಲ್ಲಿರುವ ಮನರಂಜನಾ ಪಾರ್ಕ್​​ಗಳು ಇವು ಪಾರ್ಕ್​ಗಳಾ ಎನ್ನುವಷ್ಟರ ಮಟ್ಟಿಗೆ ಹಾಳಾಗಿವೆ. ಲಾಕ್​ಡೌನ್​ ಸಂಪೂರ್ಣವಾಗಿ ತೆರವಾದ ಬಳಿಕವೇ ಅವುಗಳ ದುರಸ್ತಿ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ.

amusement and theme parks
ಮನರಂಜನಾ ಪಾರ್ಕ್
author img

By

Published : Oct 10, 2020, 6:16 PM IST

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಮನರಂಜನಾ ಪಾರ್ಕ್​​ಗಳು ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿವೆ. ರಜೆ ಹಾಗೂ ವಾರಾಂತ್ಯದಲ್ಲಿ ಮಕ್ಕಳು ಆಟವಾಡುತ್ತಿದ್ದ ಆಟಿಕೆಗಳು ತುಕ್ಕು ಹಿಡಿಯುತ್ತಿವೆ. ಇತ್ತ ಕೆಲ ಪಾರ್ಕ್​​ಗಳ ನಿರ್ವಹಣೆ ಉತ್ತಮವಾಗಿದ್ದರೆ, ಮತ್ತೆ ಕೆಲವೆಡೆ ಇವು ಪಾರ್ಕ್​ಗಳಾ ಎಂಬ ಪ್ರಶ್ನೆ ಮೂಡುತ್ತದೆ. ಒಂದು ವೇಳೆ ಪಾಳು ಬಿದ್ದ ಪಾರ್ಕ್​​ಗಳಿಗೆ ಹೊಸ ರೂಪ ನೀಡಬಹುದು. ಆದರೆ, ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದರೆ ಅವರ ಬದುಕೇನು?

ತುಮಕೂರಿನ ಅಮಾನಿ ಕೆರೆಯಲ್ಲಿರುವ ಮನರಂಜನಾ ಪಾರ್ಕ್​​ನ ಆಟಿಕೆಗಳನ್ನು ಬೇರೆಡೆ ಸ್ಥಳಾಂತರಿಸಲಾಗದೇ ಗುತ್ತಿಗೆದಾರರು ಅಲ್ಲಿಯೇ ಬಿಟ್ಟಿದ್ದಾರೆ. ಹೀಗಾಗಿ, ಆಟಿಕೆಗಳು ನಿರ್ವಹಣೆ ಕೊರತೆಯಿಂದ ತಮ್ಮ ಮೂಲ ರೂಪವನ್ನೇ ಕಳೆದುಕೊಳ್ಳುತ್ತಿವೆ. ಲಾಕ್​​ಡೌನ್​​​ನಿಂದ ಪಾರ್ಕ್​​​​ಗಳಿಗೆ ಪ್ರವೇಶ ನಿಷೇಧಿಸಲಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಒಂದೊತ್ತಿನ ಊಟಕ್ಕೂ ಅಲೆಯುತ್ತಿರುವ ಅವರು, ಬೇರೆ ಕೆಲಸಕ್ಕಾಗಿ ಅಲೆಯುತ್ತಿದ್ದಾರೆ. ಅದಲ್ಲದೇ, ಪಾರ್ಕ್​​ಗೆ ಬರುತ್ತಿದ್ದವರನ್ನೇ ನಂಬಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದ ಚಾಟ್ ಸೆಂಟರ್​​ಗಳು ಸಹ ತೀವ್ರ ನಷ್ಟಕ್ಕೆ ಒಳಗಾಗಿವೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಾರ್ಕ್​​​ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅದೆಷ್ಟೋ ಕಾರ್ಮಿಕರದ್ದೂ ಇದೇ ಗೋಳು. ಆದರೆ, ವಿಜಯಪುರ ಜಿಲ್ಲೆ ಅದಕ್ಕೆ ವಿಭಿನ್ನವಾದದ್ದು. ಆಲಮಟ್ಟಿಯ ಕೃಷ್ಣಾ ನದಿ ಬಳಿಯಿರುವ ಸುಂದರ ಉದ್ಯಾನವನ್ನು ಕೊವಿಡ್​​ನಿಂದ ಬಂದ್ ಮಾಡಲಾಗಿದೆ. ಕೃಷ್ಣಾ ಜಲ ಭಾಗ್ಯ ನಿಗಮ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ನಿರ್ವಹಣೆ ಮಾಡುತ್ತಿರುವ ಈ ಉದ್ಯಾನದಲ್ಲಿ 250ಕ್ಕೂ ಅಧಿಕ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್​ಡೌನ್​​​ನಲ್ಲಿ ಉದ್ಯಾನದ ಆದಾಯ ಕನಿಷ್ಠ 50 ಲಕ್ಷ ನಷ್ಟ ಅನುಭವಿಸಿದೆ ಎನ್ನಲಾಗಿದೆ. ಆದರೂ ಯಾವೊಬ್ಬ ಕಾರ್ಮಿಕನನ್ನೂ ಕೆಲಸದಿಂದ ತೆಗೆದಿಲ್ಲ. ಸಂಬಳವನ್ನೂ ಕಾಲಕಾಲಕ್ಕೆ ಪಾವತಿ ಮಾಡಲಾಗುತ್ತಿದೆ.

ಮನರಂಜನಾ ಪಾರ್ಕ್​​​ಗಳ ವಸ್ತುಸ್ಥಿತಿ ವರದಿ

ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎನ್ನುವ ಖ್ಯಾತಿ ಹೊಂದಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ನಾಲ್ಕು ತಿಂಗಳಿಂದ ವಿಶ್ವವಿದ್ಯಾಲಯ ಬಂದ್ ಆಗಿದೆ. ಆದರೂ ಥೀಮ್ ಪಾರ್ಕ್ ನಿರ್ವಹಣೆಗೆ ಯಾವುದೇ ಕೊರತೆ ಎದುರಾಗಿಲ್ಲ. ಥೀಮ್ ಪಾರ್ಕ್ ಕೇವಲ ಇಲ್ಲಿ ಅಭ್ಯಸಿಸುವ ವಿದ್ಯಾರ್ಥಿನಿಯರಿಗೆ ಆಗಿರುವ ಕಾರಣ ನಷ್ಟದ ಮಾತು ಇಲ್ಲ.

ಅನ್​ಲಾಕ್​​ ನಂತರವೇ ಮನರಂಜನಾ ಪಾರ್ಕ್​​​ಗಳು ಆರಂಭವಾಗಲಿವೆ. ಅಲ್ಲದೇ, ಸಾರ್ವಜನಿಕರು ಮುಕ್ತವಾಗಿ ಬರುವವರೆಗೂ ಈ ವ್ಯವಹಾರದಿಂದ ಯಾವುದೇ ಲಾಭವಿಲ್ಲ ಎಂಬುದು ಮಾಲೀಕರಿಗೆ ಖಚಿತವಾಗಿದೆ. ಹೀಗಾಗಿ ಆಟಿಕೆಗಳ ನಿರ್ವಹಣೆಗೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಪಾರ್ಕ್​​​ಗಳಲ್ಲಿ ಆಟಿಕೆಗಳು ಪಾಳುಬಿದ್ದ ಸ್ಥಿತಿಯಲ್ಲಿವೆ. ಇದರಿಂದ ಅವುಗಳನ್ನು ಕೂಡಲೇ ಸರಿಪಡಿಸಿ ಹೊಸ ರೂಪ ನೀಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.