ETV Bharat / state

ಬೆಂಗಳೂರು ಕೈ ತಪ್ಪಿ ಚೆನ್ನೈ ಪಾಲಾದ ಎನ್ಐಎ ಕೇಂದ್ರ: ತಪ್ಪು ಮಾಹಿತಿ ನೀಡಿದ್ರಾ ಸಂಸದ ತೇಜಸ್ವಿ ಸೂರ್ಯ?

ತೇಜಸ್ವಿ ಸೂರ್ಯ ಮಾತು ನಂಬಿಕೊಂಡು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಕೂಡ ಸುದ್ದಿಗೋಷ್ಠಿಯಲ್ಲಿ ಎನ್ಐಎ ಕೇಂದ್ರದ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಇನ್ನೇನು ಬೆಂಗಳೂರಿಗೆ ಎನ್ಐಎ ಕೇಂದ್ರ ಮಂಜೂರಾಗಿಯೇ ಬಿಟ್ಟಿತು ಎನ್ನುವ ನಿರೀಕ್ಷೆಯಲ್ಲಿದ್ದ ರಾಜ್ಯಕ್ಕೆ ಕೇಂದ್ರ ಸರ್ಕಾರ ಇಂದು ಶಾಕ್ ನೀಡಿದೆ.

ಬೆಂಗಳೂರು ಕೈ ತಪ್ಪಿ ಚೆನ್ನೈ ಪಾಲಾದ ಎನ್ಐಎ ಕೇಂದ್ರ

author img

By

Published : Sep 28, 2020, 11:13 PM IST

ಬೆಂಗಳೂರು: ಬಿಜೆಪಿ ನಾಯಕರ ಬಹು ನಿರೀಕ್ಷೆಯ ರಾಷ್ಟ್ರೀಯ ತನಿಖಾ ದಳದ ಪ್ರಾದೇಶಿಕ ಕಚೇರಿ ರಾಜ್ಯದ ಕೈ ತಪ್ಪಿದ್ದು,‌ ಚೆನ್ನೈ ಪಾಲಾಗಿದೆ.

ರಾಜ್ಯಕ್ಕೆ ಎನ್ಐಎ ಕೇಂದ್ರ ಸಿಕ್ಕೇ ಬಿಟ್ಟಿತು ಎನ್ನುವಂತೆ ಹೇಳಿಕೆ ನೀಡಿ ಸಂಸದ ತೇಜಸ್ವಿ ಸೂರ್ಯ ಎಡವಟ್ಟು ಮಾಡುವ ಜೊತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೂ ಮುಜುಗರವನ್ನುಂಟು ಮಾಡಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಪ್ರಾದೇಶಿಕ ಕಚೇರಿಯನ್ನು ಆರಂಭಿಸುವಂತೆ ಮನವಿ ಸಲ್ಲಿಸಿದ್ದರು.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಪ್ರಸ್ತಾಪಿಸಿ ಬೆಂಗಳೂರನ್ನು ಆತಂಕವಾದಿಗಳು, ಉಗ್ರ ಚಟುವಟಿಕೆ ನಡೆಸುವವರು ಆಶ್ರಯತಾಣವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಎನ್ಐಎ ಪ್ರಾದೇಶಿಕ ಕಚೇರಿ ಆರಂಭಿಸಿ ಅಗತ್ಯ ಸಿಬ್ಬಂದಿ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಬರುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಅಮಿತ್ ಶಾ ಸಮ್ಮತಿ ನೀಡಿದ್ದಾರೆ. ಅತಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ‌ ಎನ್ಐಎ ಕಚೇರಿ ಆರಂಭಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಬರೆದುಕೊಂಡಿದ್ದರು.

ತೇಜಸ್ವಿ ಸೂರ್ಯ ಮಾತು ನಂಬಿಕೊಂಡು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಕೂಡ ಸುದ್ದಿಗೋಷ್ಠಿಯಲ್ಲಿ ಎನ್ಐಎ ಕೇಂದ್ರದ ಬಗ್ಗೆ ಹೇಳಿಕೊಂಡಿದ್ದರು. ಆದರೆ ಇನ್ನೇನು ಬೆಂಗಳೂರಿಗೆ ಎನ್ಐಎ ಕೇಂದ್ರ ಮಂಜೂರಾಗಿಯೇಬಿಟ್ಟಿತು ಎನ್ನುವ ನಿರೀಕ್ಷೆಯಲ್ಲಿದ್ದ ರಾಜ್ಯಕ್ಕೆ ಕೇಂದ್ರ ಸರ್ಕಾರ ಇಂದು ಶಾಕ್ ನೀಡಿದೆ.

ದೇಶದಲ್ಲಿ ಹೊಸದಾಗಿ ಮೂರು ಕಡೆ ಎನ್ಐಎ ಪ್ರಾದೇಶಿಕ ಕಚೇರಿ ಆರಂಭಿಸುವ ಆದೇಶ ಹೊರಡಿಸಿದ್ದು, ಅದರಲ್ಲಿ ಬೆಂಗಳೂರಿನ ಹೆಸರೇ ಇಲ್ಲ. ಇಂಫಾಲ, ಚೆನ್ನೈ ಮತ್ತು ರಾಂಚಿ ನಗರಗಳಲ್ಲಿ ಎನ್ಐಎ ಕೇಂದ್ರ ಸ್ಥಾಪನೆ ಮಾಡುವ ಆದೇಶ ಹೊರಬಿದ್ದಿದೆ. ಈಗಾಗಲೇ ಗುವಾಹಟಿ, ಮುಂಬೈ, ಜಮ್ಮು, ಕೋಲ್ಕತ್ತಾ, ಹೈದರಾಬಾದ್, ಕೊಚ್ಚಿ, ಲಖನೌ, ರಾಯ್‌ಪುರ ಮತ್ತು ಚಂಡೀಗಢ ದಲ್ಲಿ ಪ್ರಾದೇಶಿಕ ಕೇಂದ್ರಗಳಿದ್ದು ಇರುವ 9 ಕೇಂದ್ರಗಳ ಜೊತೆ ಹೊಸದಾಗಿ 3 ಕೇಂದ್ರ ಮಂಜೂರಾಗಿವೆ.

ದಕ್ಷಿಣ ಭಾತರದಲ್ಲಿ ಈಗಾಗಲೇ‌ ನೆರೆಯ ಹೈದರಾಬಾದ್ ಮತ್ತು ಕೊಚ್ಚಿಯಲ್ಲಿ ಕೇಂದ್ರಗಳಿದ್ದು, ಈ ಬಾರಿ ಬೆಂಗಳೂರಿಗೆ‌ ಸಿಗಲಿದೆ ಎನ್ನಲಾಗಿತ್ತು. ಆದರೆ ರಾಜ್ಯದ ಕೈ ತಪ್ಪಿ ನೆರೆಯ ಚೆನ್ನೈ ಪಾಲಾಗಿದೆ.

ಸಿಎಂಗೆ ಮುಜುಗರ: ಇದೀಗ ಎನ್ಐಎ ಕೇಂದ್ರ ರಾಜ್ಯದ ಕೈ ತಪ್ಪಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಜುಗರವನ್ನು ತರಿಸಿದೆ.‌ ಇಂದು ಆದೇಶದ ಪ್ರತಿ ಹೊರಡಿಸಲಾಗಿದ್ದರೂ ಕೂಡ ಸೆಪ್ಟಂಬರ್ 25 ರಂದೇ ಹೊಸದಾಗಿ ಸ್ಥಾಪಿಸಲ್ಪಡುವ ಎನ್ಐಎ ಕೇಂದ್ರಗಳ ಪಟ್ಟಿಗೆ ಅಂಕಿತ ಬಿದ್ದಿದೆ.

ತೇಜಸ್ವಿ ಸೂರ್ಯ ವಿರುದ್ಧ ಅಸಮಾಧಾನ: ಸಂಸದ ತೇಜಸ್ವಿ ಸೂರ್ಯ ಸರಿಯಾದ ಮಾಹಿತಿ ಪಡೆಯದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಎನ್ಐಎ ಕೇಂದ್ರ ಸ್ಥಾಪಿಸಲು ಒಪ್ಪಿಗೆ ನೀಡಿದ್ದಾರೆ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸಿದ್ದಾರೆ. ಇದೀಗ ಆ ಮಾಹಿತಿ ತಪ್ಪಾಗಿದ್ದು, ಸಂಸದರೊಬ್ಬರು ತಪ್ಪು ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.