ಬೆಂಗಳೂರು: 12 ವರ್ಷದ ನಂತರ ಕೊಲೆ ಆರೋಪಿಯೊಬ್ಬ ಪೊಲೀಸರ ಆ್ಯಪ್ ಮೂಲಕ ಪತ್ತೆಯಾಗಿದ್ದಾನೆ. ನೂತನ ತಂತ್ರಜ್ಞಾನ MCCTNS ಬೆರಳುಮುದ್ರೆ ಆಪ್ ಮುಖಾಂತರ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗಷ್ಟೇ M.CCTNS ಆ್ಯಪ್ ಬಳಕೆ ಮಾಡಲು ಪೊಲೀಸರು ಪ್ರಾರಂಭಿಸಿದ್ದರು. ಇದರಲ್ಲಿ ಪ್ರತಿ ಆರೋಪಿಯ ಫಿಂಗರ್ ಪ್ರಿಂಟ್ನ ಜೊತೆಗೆ ಆರೋಪಿಗಳ ಮಾಹಿತಿಯನ್ನು ಆಪ್ ನಲ್ಲಿ ನಮೂದಿಸಲಾಗಿತ್ತು. ಈ ಆ್ಯಪ್ನ ಸಹಾಯದಿಂದ ಆರೋಪಿ ರಮೇಶ್ನನ್ನು ಪತ್ತೆ ಹಚ್ಚಲಾಗಿದೆ. ಯಶವಂತಪುರ ಪಿಎಸ್ಐ ರಾಜು ಅವರು ರಾತ್ರಿ ಗಸ್ತಿನಲ್ಲಿದ್ದಾಗ ಅನುಮಾನಸ್ಫಾದವಾಗಿ ಓಡಾಡುತ್ತಿದ್ದ ರಮೇಶ್ನ ಫಿಂಗರ್ ಪ್ರಿಂಟ್ ಪರಿಶೀಲಿದಾಗ ಆರೋಪಿ ಮೇಲಿನ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ: 2005ರಲ್ಲಿ ತಿಗಳರಪಾಳ್ಯದ ಬಾಲಾಜಿನಗರದಲ್ಲಿ ಶಂಕರಪ್ಪ ಎಂಬುವವರನ್ನು ಕೊಲೆ ಮಾಡಿ ಆರೋಪಿ ರಮೇಶ್ ಜೈಲು ಸೇರಿದ್ದ. ಬಳಿಕ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ರಮೇಶ ಪೊಲೀಸರ ಕೈಗೂ ಸಿಗದೇ, ಕೋರ್ಟ್ಗೂ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಈ ಹಿನ್ನೆಲೆ 2010ರಲ್ಲಿ ರಮೇಶ ವಿರುದ್ದ ನ್ಯಾಯಾಲಯವು NDW (ಜಾಮೀನುರಹಿತ ವಾರೆಂಟ್) ಜಾರಿ ಮಾಡಿತ್ತು. ಸದ್ಯ 12 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಆ್ಯಪ್ ಮೂಲಕ ಪತ್ತೆಯಾಗಿದ್ದಾನೆ. ಸದ್ಯ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ : ಪತ್ರ ಬರೆದು ತ್ರಿವಳಿ ತಲಾಖ್: ಡೆಹ್ರಾಡೂನ್‌ನಲ್ಲಿ ವ್ಯಕ್ತಿ ವಿರುದ್ಧ ಪ್ರಕರಣ