ETV Bharat / state

ಎಂಬಿಬಿಎಸ್ ಕೋರ್ಸ್​ಗೆ ಕ್ರೀಡಾ ಕೋಟಾ ಸೇರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - Justice Alok Aradhe

ಎಂಬಿಬಿಎಸ್ ಕೋರ್ಸ್​ಗೆ ಕ್ರೀಡಾ ಕೋಟ ಸೇರಿಸಲು ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ ನೀಡಿದೆ.

ಹೈಕೋರ್ಟ್​
ಹೈಕೋರ್ಟ್​
author img

By

Published : Dec 20, 2022, 9:19 PM IST

ಬೆಂಗಳೂರು : ಎಂಬಿಬಿಎಸ್ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ರಾಜ್ಯದ ಕ್ರೀಡಾ ಕೋಟಾದ ರ್ಯಾಂಕಿಂಗ್ ಅನ್ನು ಹೊಸದಾಗಿ ನಿಗದಿಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

ಎಂಬಿಬಿಎಸ್ ಸೀಟು ಸಿಗದೆ ಬಿಡಿಎಸ್ ಕೋರ್ಸ್ ಸೇರಿದ್ದ ಅರ್ಜಿದಾರ ಅಭ್ಯರ್ಥಿ ಅದಿತಿ ದಿನೇಶ್ ರಾವ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮೂವರು ಚೆಸ್ ಆಟಗಾರರಾದ ಸಾತ್ವಿಕ್ ಶಿವಾನಂದ್, ಎಸ್. ಆರ್ ಪ್ರತಿಮಾ ಮತ್ತು ಖುಷಿ ಎಂ. ಹೊಂಬಾಳ್ ಅವರಿಗೆ ಕ್ರೀಡಾ ಕೋಟಾದಲ್ಲಿ ಎಂಬಿಬಿಎಸ್​ಗೆ ಪ್ರವೇಶ ನೀಡಿರುವ ಕ್ರಮವನ್ನು ಪ್ರಶ್ನಿಸಿದ್ದರು.

ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ. ಜತೆಗೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ರೂಪಿಸಿ ರ್ಯಾಂಕಿಂಗ್ ಅನ್ವಯ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶವನ್ನು ಖಾತ್ರಿಪಡಿಸಬೇಕು ಎಂದು ಸೂಚನೆ ನೀಡಿದೆ.

ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಪೀಠ ‘ಕ್ರೀಡಾ ಕೋಟಾದಡಿ ಅರ್ಹತಾ ಮಾನದಂಡ ಅತ್ಯಂತ ಸ್ಪಷ್ಟವಾಗಿದೆ. ಅದೆಂದರೆ ಅಭ್ಯರ್ಥಿಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳು/ ಚಾಂಪಿಯನ್‌ಶಿಪ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪದಕ/ಕಪ್‌ಗಳನ್ನು ಜಯಿಸಿರಬೇಕೆಂದು ಹೇಳಲಾಗಿದೆ.

ಅದರಂತೆ ಅರ್ಜಿದಾರರು ಭಾರತೀಯ ಈಜು ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್‌ಶಿಪ್ ಗಳಲ್ಲಿ 4 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾರೆ. ಆ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಪ್ರತಿವಾದಿ ಮೂವರು ಆಟಗಾರರು ಪದಕಗಳನ್ನು ಗೆದ್ದ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಹೇಳಿದೆ.

ಜತೆಗೆ ಪ್ರತಿವಾದಿ ಮೂವರು ಆಟಗಾರರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿರಬಹುದು. ಆದರೆ ಅವರು ಪದಕಗಳನ್ನು ಜಯಿಸಿಲ್ಲ. ಹಾಗಾಗಿ, ಅವರು ಕ್ರೀಡಾಕೋಟಾದ ಅರ್ಹ ಮಾನದಂಡದ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಅಂಶವನ್ನು ಪರಿಗಣಿಸುವಲ್ಲಿ ಸಮಿತಿ ವಿಫಲವಾಗಿದೆ.

ನ್ಯಾಯಾಲಯ ನಿರ್ದೇಶನ: ಮೊದಲು ಪ್ರಕಟಿಸಿದ್ದ ಪಟ್ಟಿಯಲ್ಲಿ ಅರ್ಜಿದಾರರು 10ನೇ ಶ್ರೇಯಾಂಕದಲ್ಲಿದ್ದರು. ಆನಂತರ ಪ್ರತಿವಾದಿಗಳಿದ್ದರು. ಆದರೆ ಆನಂತರ ಪರಿಷ್ಕೃತ ರ್ಯಾಂಕಿಂಗ್ ನಲ್ಲಿ ಅರ್ಜಿದಾರರು 16ನೇ ಸ್ಥಾನದಲ್ಲಿದ್ದರು. ಅದಕ್ಕೂ ಮೊದಲಿನ ರ್ಯಾಕಿಂಗ್ ನಲ್ಲಿ ಮೂವರು ಆಟಗಾರರಿದ್ದಾರೆ. ಇದು ಸರಿಯಲ್ಲ. ಹಾಗಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ರ್ಯಾಕಿಂಗ್ ನಿಗದಿಪಡಿಸಿ, ಕೆಇಎಗೆ ಸಲ್ಲಿಕೆ ಮಾಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ನ್ಯಾಯವಾದಿ ಎಂ. ಪಿ ಶ್ರೀಕಾಂತ್, ಅಧಿಕಾರಿಗಳು ಚೆಸ್ ಅನ್ನು ಅಂತಾರಾಷ್ಟ್ರೀಯ ಕ್ರೀಡೆ ಎಂದು ಪರಿಗಣಿಸಿ ಮೂವರು ಆಟಗಾರರ ಹೆಸರನ್ನು ಅರ್ಜಿದಾರರಿಗಿಂತ ರ್ಯಾಕಿಂಗ್ ಪಟ್ಟಿಯಲ್ಲಿ ಮೇಲೆ ಸೇರಿಸಿ ಅವರಿಗೆ ಪ್ರವೇಶ ಸಿಗುವಂತೆ ಮಾಡಲಾಗಿದೆ. ಆ ವೇಳೆ ಕನಿಷ್ಠ ಅರ್ಜಿದಾರರಿಗೆ ತಮ್ಮ ಅಹವಾಲು ಸಲ್ಲಿಸಲೂ ಸಹ ಅವಕಾಶ ನೀಡಿಲ್ಲ ಎಂದು ವಾದ ಮಂಡಿಸಿದ್ದರು.

ಅನ್ಯಾಯದ ಕ್ರಮ: ಅಲ್ಲದೆ, ಅರ್ಜಿದಾರರೂ ಸಹ ಹಲವು ರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಆದರೆ ಉಳಿದ ಮೂವರು ಚೆಸ್ ಆಟಗಾರರು ಪದಕಗಳನ್ನು ಗೆದ್ದಿಲ್ಲ. ಆದರೂ ಅವರಿಗೆ ರ್ಯಾಂಕಿಂಗ್ ನೀಡಿ ಸೀಟು ಲಭ್ಯವಾಗುವಂತೆ ಮಾಡಿರುವುದು ಅನ್ಯಾಯದ ಕ್ರಮ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಆದರೆ ಸರ್ಕಾರಿ ವಕೀಲರು, ಅದಿತಿ ಪ್ರವೇಶ ಪ್ರಕ್ರಿಯೆ ಮುಗಿದ ನಂತರ ತಡವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವಾದಿಸಿದ್ದರು.

ಓದಿ: ಸದಸ್ಯರಿಗೆ ಮಾತ್ರ ಪ್ರವೇಶವಿರುವ ಕ್ಲಬ್​ಗಳಲ್ಲಿ ನಡೆಯುವ ಕ್ರೀಡೆಗಳಿಗೆ ಪೊಲೀಸ್ ಅನುಮತಿ ಬೇಕಿಲ್ಲ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.