ETV Bharat / state

ಅಗತ್ಯ ಸೇವೆಯಲ್ಲಿರುವವರಿಗೆ ಮನೆ ಮಾಲೀಕರು ತೊಂದ್ರೆ ಕೊಟ್ರೆ ಕಾನೂನು ಕ್ರಮ - ಮನೆ ಮಾಲೀಕರ ವಿರುದ್ಧ ಸರ್ಕಾರದಿಂದ ಸೂಕ್ತ ಕ್ರಮ ಬೆಂಗಳೂರು

ಅಗತ್ಯ ಸೇವೆಯಲ್ಲಿರುವವರಿಗೆ ಮನೆ ಮಾಲೀಕರು ಮನೆಗೆ ಬಾರದಿರಲು ನಿಷೇಧಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

government ordere
ಸರ್ಕಾರದ ಆದೇಶ
author img

By

Published : Mar 26, 2020, 5:46 PM IST

ಬೆಂಗಳೂರು: ಕೊರೊನಾ ತಡೆಗಟ್ಟಲು ಅಗತ್ಯ ಸೇವೆ ಹೊರೆತುಪಡಿಸಿ ಉಳಿದ ಎಲ್ಲಾ ಸೇವೆಯನ್ನು ಬಂದ್ ಮಾಡಲಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಗತ್ಯ ಸೇವೆಯಲ್ಲಿರುವವರಿಗೆ ಮನೆ ಮಾಲೀಕರು ಮನೆಗೆ ಬಾರದಿರಲು ನಿಷೇಧಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ವೈದ್ಯರು, ನರ್ಸ್​ಗಳು ಹಾಗೂ ವೈದ್ಯಕೀಯ ಸಾಹಾಯಕರಿಗೆ ಈಗಾಗಲೇ ಮನೆ ಮಾಲೀಕರು ಇವರಿಗೆ ಮನೆಗೆ ಬರಬೇಡಿ ಹಾಗೂ ಮನೆ ಖಾಲಿ ಮಾಡಿ ಎಂದು ಕಿರುಕುಳ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಸರ್ಕಾರ ನಗರ ಪಾಲಿಕೆಗಳು ಹಾಗೂ ಪೊಲೀಸರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.

government ordere
ಸರ್ಕಾರದ ಆದೇಶ

ಹೀಗಾಗಿ ಪ್ರತಿನಿತ್ಯ ಕ್ರಮ ಕೈಗೊಂಡಿರುವ ಬಗ್ಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿಯನ್ನು ಪೊಲೀಸ್ ಇಲಾಖೆ, ನಗರ ಪಾಲಿಕೆ, ಪುರಸಭೆಗಳು ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ. ಇನ್ನು ನಿನ್ನೆ ಸಚಿವ ಆರ್​​.ಅಶೋಕ್ ಮಾತನಾಡಿ, ಮನೆ ಮಾಲೀಕರು ಅಗತ್ಯ ಸೇವೆಯಲ್ಲಿರುವವರಿಗೆ ತೊಂದರೆ ಕೊಡುತ್ತಿದ್ದಾರೆ. ಇದಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.