ETV Bharat / state

ಹೊಸ ಮದ್ಯದಂಗಡಿಗೆ ಲೈಸನ್ಸ್​​ ನೀಡುವ ಪ್ರಸ್ತಾವ ಇಲಾಖೆ ಮುಂದಿಲ್ಲ: ಸಚಿವ ಗೋಪಾಲಯ್ಯ - ಅಬಕಾರಿ ಸಚಿವ ಕೆ ಗೋಪಾಲಯ್ಯ

ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರದಲ್ಲಿ 18ರಿಂದ 25 ವರ್ಷ ವಯಸ್ಸಿನ ಯುವಕ-ಯುವತಿಯರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ ಹತೋಟಿಗೆ ತರಲು ಸ್ವಲ್ಪ ಕಾಲಾವಕಾಶ ನೀಡಿ ನಂತರ ಎಲ್ಲವನ್ನೂ ಸರಿಮಾಡುತ್ತೇನೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

Minister K Gopalyah
ಸಚಿವ ಕೆ ಗೋಪಾಲಯ್ಯ
author img

By

Published : Feb 12, 2021, 10:32 PM IST

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಹೊಸ ಲೈಸನ್ಸ್ ನೀಡುವ ಪ್ರಸ್ತಾವ ಇಲಾಖೆ ಮುಂದಿಲ್ಲ. ಈಗಾಗಲೇ ಹಳೆ ನಿಯಮದಂತೆ CL-07 ಲೈಸನ್ಸ್ ನೀಡುತ್ತಿದ್ದು, ಕಾನೂನು ಮೀರಿ ಲೈಸನ್ಸ್ ನೀಡಿದ್ದರೆ ಅದನ್ನು ರದ್ದು ಮಾಡಿ, ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಎಚ್ಚರಿಕೆ ನೀಡಿದರು.

ಹೊಸ ಮದ್ಯದಂಗಡಿಗೆ ಲೈಸನ್ಸ್​​ ನೀಡುವ ಪ್ರಸ್ತಾವ ಕುರಿತು ಸಚಿವ ಗೋಪಾಲಯ್ಯ ಸ್ಪಷ್ಟನೆ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಒಂದು ಲೈಸನ್ಸ್ ಪಡೆದು ಮೂರ್ನಾಲ್ಕು ಬಾರ್​​​ಗಳನ್ನು ನಡೆಸುತ್ತಿರುವ ವಿಚಾರದ ಬಗ್ಗೆ ಸಚಿವರ ಗಮನ ಸೆಳೆದಾಗ, ಆ ರೀತಿ ಯಾವುದೇ ದೂರುಗಳು ನನ್ನ ಗಮನಕ್ಕೆ ಬಂದಿಲ್ಲ. ತಮ್ಮಲ್ಲಿ ಯಾವುದೇ ಮಾಹಿತಿ ಇದ್ದಲ್ಲಿ ನೀಡಿದರೆ ತಕ್ಷಣವೇ ಯಾವುದೇ ಜಿಲ್ಲೆ ಇರಲಿ ಅಲ್ಲಿರುವ ಸಂಬಂಧಪಟ್ಟ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದು ಅಮಾನತು ಮಾಡಲಾಗುವುದು. ಪ್ರಭಾವಿಗಳು ಇದ್ದರೂ ಯಾವುದೇ ಒತ್ತಡಕ್ಕೆ ಮಣಿಯದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ. ನನಗೆ ಸಮಯಾವಕಾಶ ಕೊಟ್ಟು ನೋಡಿ ಇಲಾಖೆಯನ್ನು ಹೇಗೆ ನಿರ್ವಸುತ್ತೇನೆ ಎಂದರು.

ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರದಲ್ಲಿ 18ರಿಂದ 25 ವರ್ಷ ವಯಸ್ಸಿನ ಯುವಕ-ಯುವತಿಯರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ ಹತೋಟಿಗೆ ತರಲು ಸ್ವಲ್ಪ ಕಾಲಾವಕಾಶ ನೀಡಿ ನಂತರ ಎಲ್ಲವನ್ನೂ ಸರಿ ಮಾಡುತ್ತೇನೆ ಎಂದರು.

ಫುಡ್ ಕಿಟ್ ವಿತರಣೆ ಮಾಡಿಲ್ಲ:

ರಾಜ್ಯದಲ್ಲಿ ನಾನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಕೋವಿಡ್ ಸಂದರ್ಭದಲ್ಲಿ ಸಹ ಆಹಾರ ಇಲಾಖೆಯಿಂದ ಯಾವುದೇ ಫುಡ್ ಕಿಟ್ ವಿತರಣೆ ಮಾಡಿಲ್ಲ‌ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೊಡುತ್ತಿರುವ ಪಡಿತರ ವ್ಯವಸ್ಥೆಯಲ್ಲಿ ಏಪ್ರಿಲ್ 1ರಿಂದ ನವೆಂಬರ್ 30ರವರೆಗೂ ಈ ರಾಜ್ಯದಲ್ಲಿನ 19,000 ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಇಲಾಖೆಯಿಂದ 5 ಕೆಜಿ ಅಕ್ಕಿ ಹಾಗೂ ರಾಜ್ಯ ಸರ್ಕಾರದಿಂದ ನೀಡುವ 5 ಕೆಜಿ ಅಕ್ಕಿ, ಒಟ್ಟಿಗೆ 10 kg ಅಕ್ಕಿ, 1 kg ಬೇಳೆ ಮೂರು ತಿಂಗಳು, ನಂತರ 5 ತಿಂಗಳು 10 ಕೆಜಿ ಅಕ್ಕಿ, 1 ಕೆಜಿ ಕಡಲೇಕಾಳು ಮತ್ತು ಒಂದು ಕುಟುಂಬಕ್ಕೆ 2 ಕೆಜಿ ಗೋಧಿಯನ್ನು ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊರೊನಾ ಸಂದರ್ಭದಲ್ಲಿ ನಾನು ಆಹಾರ ಸಚಿವನಾಗಿದ್ದ ಸಮಯದಲ್ಲಿ ಬೀದರ್ ಜಿಲ್ಲೆಯಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೆ ಯಾರೇ ಆಹಾರದ ಸಮಸ್ಯೆ ಹೇಳಿಕೊಂಡು ನನಗೆ ಹಾಗೂ ಕಚೇರಿಗೆ ಕರೆ ಮಾಡಿದಾಗ ನಮ್ಮ ಇಲಾಖೆ ಅಧಿಕಾರಿಗಳು ಸೇರಿದಂತೆ ನಾನು ತಕ್ಷಣವೇ ಸ್ಪಂದಿಸಿ ಅವರಿಗೆ ಬೇಕಾದ ಆಹಾರದ ಕಿಟ್​ಗಳನ್ನ ನೀಡುವುದಕ್ಕೆ ವ್ಯವಸ್ಥೆ ಮಾಡಿದ ತೃಪ್ತಿ ನಮಗಿದೆ ಎಂದರು.

ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್​ ಸಂಪತ್​ ರಾಜ್ ಜೈಲಿಂದ​ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.