ETV Bharat / state

ಹೋಟೆಲ್​ ಮಾಲೀಕನ ಮಗನ ಅಪಹರಣ: 12 ಗಂಟೆಯಲ್ಲಿ ಬಾಲಕನನ್ನ ಸೇಫ್ ಆಗಿ ಕರೆತಂದ ಬೆಂಗಳೂರು ಪೊಲೀಸರು!

ಹೋಟೆಲ್​ನಲ್ಲಿ ಕೆಲಸ ಮಾಡುವವನಿಂದಲೇ ತನ್ನ ಮಾಲೀಕನ ಮಗನ ಅಪಹರಣಕ್ಕೆ ಸುಪಾರಿ. ಪ್ರಕರಣ ದಾಖಲಾದ 12 ಗಂಟೆಯೊಳಗೆ ಬಾಲಕನ ರಕ್ಷಿಸುವ ಮೂಲಕ ಬೆಂಗಳೂರಿನ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

author img

By

Published : Dec 1, 2019, 10:11 AM IST

The boy's kidnapping team arrested in bangalore
ಅಪಹರಿಸಿದ್ದ ಆರೋಪಿಗಳ ಬಂಧನ

ಬೆಂಗಳೂರು: ಬಾಣಸವಾಡಿ ನಗರದ ಕಡಾಯಿ ಹೋಟೆಲ್ ಮಾಲೀಕನ 13 ವರ್ಷದ ಮಗನನ್ನು ಅಪಹರಣ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.

ದೂರು ದಾಖಲಿಸಿದ 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೂರ್ವ ವಿಭಾಗದ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಕಡಾಯಿ ಹೋಟೆಲ್ ಮಾಲೀಕನ ಮಗನನ್ನು ಆರೋಪಿಗಳು ಅಪಹರಿಸಿ ನ.30 ರಂದು ಮಧ್ಯಾಹ್ನ ಬಾಲಕನ ತಂದೆಗೆ ಕರೆ ಮಾಡಿ 50 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಡಿಸಿಪಿ ಡಾ.ಶರಣಪ್ಪ

ಬಾಲಕನ ತಂದೆ ತಕ್ಷಣ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಬಳಿ ದೂರು ಸಲ್ಲಿಸಿದ್ರು. ಬಾಣಸವಾಡಿ ಎಸಿಪಿ ರವಿ ಪ್ರಸಾದ್, ಬಾಣಸವಾಡಿ ಇನ್​ಸ್ಪೆಕ್ಟರ್ ಜಯರಾಜ್ ಮತ್ತು ಕೆ.ಜಿ ಹಳ್ಳಿ ಇನ್​ಸ್ಪೆಕ್ಟರ್ ಅಜಯ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಬಲೆ ಬೀಸಿದ್ದರು.

ಆರೋಪಿಗಳು ಹೆಣ್ಣೂರು ಬಳಿಯ ಸಾರಾಯಿಪಾಳ್ಯ ಬಳಿ ಇರುವ ಮಾಹಿತಿ ಆಧರಿಸಿ ಬಾಲಕನ ರಕ್ಷಣೆಗೆ ಮುಂದಾಗಿದ್ದರು. ಕೆ.ಜಿ.ಹಳ್ಳಿ ಇನ್​ಸ್ಪೆಕ್ಟರ್ ಅಜಯ್ ಸಾರತಿ ಶರಣಾಗಲು ಆರೋಪಿಗೆ ಎಚ್ಚರಿಸಿದ್ದರು. ಈ ವೇಳೆ ಬಾಣಸವಾಡಿ ಪೊಲೀಸ್ ಪೇದೆ ನಾಯಕ್ ಎಂಬುವವರ ಮೇಲೆ ಪ್ರಮುಖ ಆರೋಪಿ ಮುಬಾರಕ್ ಚಾಕುವಿನಿಂದ ಹಲ್ಲೆ ನಡೆಸಿದ್ದ. ನಂತರ ಆತ್ಮರಕ್ಷಣೆಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಮುಬಾರಕ್ ಕಾಲಿಗೂ ಗುಂಡು ಹೊಡೆದು, ಬಾಲಕನನ್ನು ರಕ್ಷಿಸಿದ್ದಾರೆ. ಜೊತೆಗೆ ಆರೋಪಿ ಮುಬಾರಕ್ ಜೊತೆಗಿದ್ದ ಮೊಯಿನ್ ಹಾಗೂ ಅಯಾಜ್ ಅನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳು ಪೇದೆ ಹಾಗೂ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕನ ತಂದೆಯ ಹೋಟೆಲ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಅಪಹರಣಕ್ಕೆ ಸುಪಾರಿ ನೀಡಿದ್ದ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಮುಖ ಆರೋಪಿ ಮುಬಾರಕ್ ಗುಣಮುಖನಾದ ನಂತರ ತನಿಖೆ ಚುರುಕುಗೊಳ್ಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Intro:ಹೋಟೆಲ್ ಮಾಲೀಕ ಮಗನ ಕಿಡ್ನಾಪ್
12 ಗಂಟೆಗಳ ಒಳಗೆ ಆರೋಪಿಗಳ ಬಂಧಿಸಿದ ಖಾಕಿ

ಕಡಾಯಿ ಹೋಟೆಲ್ ಮಾಲೀಕನ 13 ವರ್ಷದ ಮಗನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳ ಕಾಲಿಗೆ ಗುಂಡೇಟ್ ಮಾಡಿ ದೂರು ದಾಖಲಾದ 12 ಗಂಟೆಗಳ ಒಳಗೆ ಆರೋಪಿಗಳನ್ನ ಬಂಧಿಸುವಲ್ಲಿ ಪೂರ್ವ ವಿಭಾಗದ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ

ಬಾಣಸಾವಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಾಯಿ ಹೋಟೆಲ್ ಮಾಲೀಕನ ಮಗನನ್ನ ಕಿಡ್ನಾಪ್ ತಂಡ ನಿನ್ನೆ ಮದ್ಯಾಹ್ನ‌ ಕಿಡ್ನಾಪ್ ಮಾಡಿ ಬಾಲಕನ ತಂದೆಗೆ 50 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ತಕ್ಷಣ ಎಚ್ಚೆತ್ತು ಬಾಲಕನ ತಂದೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಬಳಿ ದೂರು ನೀಡಿದ್ರು. ತಕ್ಷಣ ಬಾಣಸವಾಡಿ ಎಸಿಪಿ ರವಿ ಪ್ರಸಾದ್ , ಬಾಣಸವಾಡಿ ಇನ್ಸ್ಪೆಕ್ಟರ್ ಜಯರಾಜ್ ಮತ್ತು ಕೆ .ಜಿ ಹಳ್ಳಿ ಇನ್ಸ್ಪೆಕ್ಟರ್ ಅಜಯ್ ಸಾರತಿ ನೇತೃತ್ವದಲ್ಲಿ ವಿಷೇಶ ತಂಡ ರಚಿಸಿ ಆರೋಪಿಗಳಿಗೆ ಹುಡುಕಾಟ ನಡೆಸಲಾಗಿತ್ತು.

ಆರೋಪಿಗಳು ಹೆಣ್ಣೂರು ಬಳಿಯ ಸಾರಾಯಿಪಾಳ್ಯ ಬಳಿ ಯಲ್ಲಿ ಇರುವ ಮಾಹಿತಿ ಆಧಾರದ ಮೇಲೆ ಬಾಲಕನ ರಕ್ಷಣೆ ಮಾಡಲು ತೆರಳಿದಾಗ ಬಾಣಸವಾಡಿ ಪೊಲೀಸ್ ಪೇದೆ ನಾಯಕ್ ಎಂಬುವವರಿಗೆ ಕಿಡ್ನಾಪ್ ಗ್ಯಾಂಗ್ ಪ್ರಮುಖ ಆರೋಪಿ ಮುಬಾರಕ್ ಚಾಕು ಇರಿತ ಮಾಡಿದ್ದಾನೆ.

ತಕ್ಷಣ ಕೆ ಜಿ ಹಳ್ಳಿ ಇನ್ಸ್ಪೆಕ್ಟರ್ ಅಜಯ್ ಸಾರತಿ ಶರಣಾಗಲು ಆರೋಪಿಗೆ ಹೇಳಿದರು ಎಚ್ಚೆತ್ತು ಕೊಳ್ಳದೇ ಇದ್ದಾಗ ಆತ್ಮ ರಕ್ಷಣೆಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತ್ರ ಮುಬಾರಕ್ ಕಾಲಿಗೆ ಗುಂಡು ಹಾರಿಸಿ ಬಾಲಕನ್ನು ರಕ್ಷಣೆ ಮಾಡಿದ್ದಾರೆ .ಹಾಗೆ ಪ್ರಮುಖ ಆರೋಪಿ ಮುಬಾರಕ್ ಜೊತೆ ಇದ್ದ ಮೊಯೀನ್, ಹಾಗೂ ಅಯಾಜ್ ಬಂಧಿಸಿದ್ದಾರೆ. ಗಾಯಾಳು ಪೇದೆ ಹಾಗೂ ಆರೋಪಿಯನ್ನ ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮತ್ತೊಂದೆಡೆ ಪ್ರಾಥಮಿಕ ತನಿಖೆಯಲ್ಲಿ ಬಾಲಕನ ತಂದೆಯ ಹೋಟೆಲ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವನು ಕಿಡ್ನಾಪ್ ಮಾಡಲು ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಮುಖ ಆರೋಪಿ ಮುಬಾರಕ್ ಗುಣಮುಖನಾದ ನಂತ್ರ ತನಿಖೆ ಚುರುಕುಗೊಳ್ಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

Body:KN_BNG_01_SHOUTOUT_7204498Conclusion:KN_BNG_01_SHOUTOUT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.