ETV Bharat / technology

ವಾರ್ಷಿಕೋತ್ಸವ ಸಂಭ್ರಮ: ಗ್ರಾಹಕರಿಗೆ ಬಂಪರ್​ ಆಫರ್​ ಘೋಷಿಸಿದ ಬಿಎಸ್​ಎನ್​ಎಲ್! - BSNL Anniversary Offers - BSNL ANNIVERSARY OFFERS

BSNL Anniversary Offers: BSNL ತನ್ನ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್ ತಂದಿದೆ. ತನ್ನ ವಾರ್ಷಿಕೋತ್ಸವದ ಸಂದರ್ಭದಲ್ಲಿ 24GB ಡೇಟಾ ಉಚಿತವಾಗಿ ನೀಡುತ್ತಿದೆ.

BSNL ANNIVERSARY CELEBRATION  BSNL ANNIVERSARY OFFER FOR COUSTMER  BSNL ANNIVERSARY 2024  BSNL NEW OFFERS
ಗ್ರಾಹಕರಿಗೆ ಬಂಪರ್​ ಆಫರ್​ ಘೋಷಿಸಿದ ಬಿಎಸ್​ಎನ್​ಎಲ್ (ETV Bharat)
author img

By ETV Bharat Tech Team

Published : Oct 4, 2024, 11:41 AM IST

BSNL Anniversary Offers: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ 4G ನೆಟ್‌ವರ್ಕ್ ಅನ್ನು ವೇಗವಾಗಿ ವಿಸ್ತರಿಸುತ್ತಿದೆ. ಗ್ರಾಹಕರನ್ನು ಆಕರ್ಷಿಸಲು ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೇ ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಅನ್ನು ಪರಿಚಯಿಸಿದ್ದು, ಈ ಮತ್ತೆ ತನ್ನ ಗ್ರಾಹಕರಿಗೆ ಅದೇ ಆಫರ್ ಅನ್ನು ತಂದಿದೆ. ಕಂಪನಿ ಸ್ಥಾಪನೆಯಾಗಿ 24 ವರ್ಷವಾಗಲಿದೆ. BSNL ಇದೇ ತಿಂಗಳು 25ನೇ ವರ್ಷಕ್ಕೆ ಕಾಲಿಡಲಿದೆ. ಈ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಿದೆ.

24 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, BSNL ಸಾಮಾಜಿಕ ಮಾಧ್ಯಮ ವೇದಿಕೆ X ಮೂಲಕ ಗ್ರಾಹಕರಿಗೆ ಉಚಿತ ಡೇಟಾವನ್ನು ನೀಡುವುದಾಗಿ ಘೋಷಿಸಿದೆ. BSNL ನೀಡುವ ಈ ಕೊಡುಗೆಯನ್ನು ಪಡೆಯಲು, ನೀವು ರೂ.500 ಕ್ಕಿಂತ ಹೆಚ್ಚಿನ ಮೌಲ್ಯದ ವೋಚರ್‌ನೊಂದಿಗೆ ರೀಚಾರ್ಜ್ ಮಾಡಬೇಕು. 500ಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡುವವರಿಗೆ 24GB ಉಚಿತ ಡೇಟಾ ನೀಡಲಾಗುತ್ತಿದೆ. ಈ ಕೊಡುಗೆ ಈಗಾಗಲೇ ಲಭ್ಯವಿದೆ. ಆದರೆ ಅಕ್ಟೋಬರ್ 24 ರ ಮೊದಲು ರೀಚಾರ್ಜ್ ಮಾಡಿದವರು ಮಾತ್ರ ಈ ಪ್ರಯೋಜನಗಳನ್ನು ಪಡೆಯುತ್ತಾರೆ.

ಎಲ್ಲ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ರೀಚಾರ್ಜ್ ದರ ಹೆಚ್ಚಿಸಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಪರಿಣಾಮವಾಗಿ, ಅನೇಕ ಬಳಕೆದಾರರು BSNL ರೀಚಾರ್ಜ್ ಯೋಜನೆಗಳ ಮೇಲೆ ನಿಗಾವಹಿಸಿದ್ದಾರೆ. ಇದರ ಲಾಭ ಪಡೆದು BSNL ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. BSNL ಅನ್ನು ಸೆಪ್ಟೆಂಬರ್ 15, 2000 ರಂದು ಸ್ಥಾಪಿಸಲಾಯಿತು. ಅದೇ ವರ್ಷದ ಅಕ್ಟೋಬರ್ 1 ರಿಂದ ದೆಹಲಿ ಮತ್ತು ಮುಂಬೈ ಹೊರತುಪಡಿಸಿ ದೇಶೀಯವಾಗಿ ಟೆಲಿಕಾಂ ಸೇವೆಗಳನ್ನು ಲಭ್ಯಗೊಳಿಸಲಾಯಿತು.

ಕಡಿಮೆ ಬೆಲೆ.. ಹೆಚ್ಚಿನ ಮಾನ್ಯತೆ: ಎಲ್ಲ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರಗಳನ್ನು ಹೆಚ್ಚಿಸುತ್ತಿರುವಾಗ, BSNL ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಇತ್ತೀಚೆಗೆ ಹೊಸ ಯೋಜನೆ ತಂದಿದೆ. BSNL ತನ್ನ ಹೊಸ ಯೋಜನೆ ಕಡಿಮೆ ವೆಚ್ಚದ ರೀಚಾರ್ಜ್‌ನೊಂದಿಗೆ ದೀರ್ಘಾವಧಿಯ ಮಾನ್ಯತೆಯೊಂದಿಗೆ ಪರಿಚಯಿಸಿದೆ. ಈ ಹೊಸ ರೀಚಾರ್ಜ್ ಪ್ಲಾನ್ 60 ದಿನಗಳ ವ್ಯಾಲಿಡಿಟಿಯೊಂದಿಗೆ ತಂದಿದ್ದು, BSNL ಗೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಈ ಬಿಎಸ್​ಎನ್​ಎಲ್​ ಯೋಜನೆ ಕುರಿತು ಹೆಚ್ಚಿನ ವಿವಗಳಿಗಾಗಿ ಈ ಕೆಳಗಿರುವ ಲಿಂಕ್​ ಅನ್ನು ಕ್ಲಿಕ್​ ಮಾಡಿ.

ಓದಿ: ಕಡಿಮೆ ಬೆಲೆಗೆ ಹೆಚ್ಚು ವ್ಯಾಲಿಡಿಟಿ: BSNL ಗ್ರಾಹಕರಿಗೆ ಈ ಪ್ಲಾನ್ ಬೆಸ್ಟ್​ ಚಾಯ್ಸ್! - BSNL New Prepaid Plan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.