ಬೆಂಗಳೂರು : ಕೋರಮಂಗಲ ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಯ ಆಗರವಾಗಿದೆ. ಬಾತ್ರೂಮ್, ಸಿಂಕ್ಗಳು ಕಟ್ಟಿಕೊಳ್ಳುತ್ತಿವೆ. ಕೊರೊನಾ ರೋಗಿಗಳಿಗೆ ಆರೋಗ್ಯಕರ ವಾತಾವರಣ ಇಲ್ಲ ಎಂದು ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಈಟಿವಿ ಭಾರತ್ ಕೂಡಾ ಈ ಬಗ್ಗೆ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಕೇರ್ ಸೆಂಟರ್ನ ಸ್ವಚ್ಛಗೊಳಿಸಲಾಗಿದೆ.
ಕೇರ್ ಸೆಂಟರ್ನ ನೈರ್ಮಲ್ಯಗೊಳಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ಆಯುಕ್ತ ಬಿ ಹೆಚ್ ಅನಿಲ್ಕುಮಾರ್ ಹಂಚಿಕೊಂಡಿದ್ದಾರೆ. ಕೆಲಸದಲ್ಲಿ ತೊಡಗಿರುವ ವೈದ್ಯರು, ಊಟದ ಮೆನುವಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಅಲ್ಲಿಂದ ಗುಣಮುಖಗೊಂಡ ರೋಗಿಗಳ ಪ್ರತಿಕ್ರಿಯೆಯನ್ನು ವಿಡಿಯೋ ಮಾಡಿದ್ದು, ಇಲ್ಲಿ ಚೆನ್ನಾಗಿ ನೋಡಿಕೊಂಡರು. ಮೆಡಿಸಿನ್, ಊಟ ಸಮಯಕ್ಕೆ ಸರಿಯಾಗಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.