ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶಾಸಕ ಅನಂದ್ ಸಿಂಗ್ಗೆ ಜಾಮೀನು ರಹಿತ ಬಂಧನ ವಾರೆಂಟ್ ಆದೇಶ ಹೊರಡಿಸಿದೆ.
ವೆಂಕಟೇಶ್ವರ ಟ್ರಾನ್ಸ್‌ಪೋರ್ಟ್ ಕಂಪನಿಯಿಂದ ₹ 50 ಸಾವಿರ ಮೆಟ್ರಿಕ್ಟನ್ ಅದಿರು ಸಾಗಾಣಿಕೆ ಮಾಡಿದ್ದ, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಸಿಬಿಐ ಟೀಂ ತನಿಖೆ ನಡೆಸಿ ಚಾರ್ಜ್ ಶೀಟ್ನನ್ನು ನ್ಯಾಯಲಯಕ್ಕೆ ಸಲ್ಲಿಸಿತ್ತು. ಈ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಆನಂದ್ ಸಿಂಗ್ಗೆ ಸೂಚನೆ ನೀಡಲಾಗಿತ್ತು.
ಆದರೆ ಇಂದು ಕೂಡ ಆನಂದ್ಸಿಂಗ್ ಅವರುಕೋರ್ಟ್ಗೆ ಹಾಜರಾಗದ ಕಾರಣ ನ್ಯಾಯಧೀಶರು ಬಂಧನ ವಾರೆಂಟ್ ಹೊರಡಿಸಿದ್ದಾರೆ.
ಈ ಹಿಂದೆ ಕೂಡ ಆನಂದ್ ಸಿಂಗ್ ಅವರು ಹಾಜರಾಗಿರಲಿಲ್ಲ. ರೆಸಾರ್ಟ್ ಗಲಾಟೆಯಲ್ಲಿ ಹಲ್ಲೆಗೊಳಗಾಗಿದ್ದ ಶಾಸಕರು ಇನ್ನು ಚೇತರಿಸಿಕೊಂಡಿಲ್ಲ ಎಂದು ಅವರ ಪರ ವಕೀಲರು ಕೋರ್ಟ್ಗೆ ಕಾರಣಕೊಟ್ಟಿದ್ದಾರೆ.