ETV Bharat / state

ಕಳ್ಳತನ-ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: ಹಲವು ವಸ್ತು ವಶಕ್ಕೆ - ತಲಘಟ್ಟಪುರ ಪೊಲೀಸರು

ದ್ವಿಚಕ್ರ ವಾಹನ, ಮೊಬೈಲ್ ಫೋನ್, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ಕಳುವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತಲಘಟ್ಟಪುರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಬೆಳ್ಳಿ ವಸ್ತುಗಳು, ದ್ವಿಚಕ್ರ ವಾಹನ, ಮೊಬೈಲ್ ಫೋನ್, ಲ್ಯಾಪ್​​ಟಾಪ್​ಗಳು ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Thalghatapura police arrested two robbers
ಕಳ್ಳತನ-ಸುಲಿಗೆ ಮಾಡುತ್ತಿದ್ದ 2 ಆರೋಪಿಗಳ ಬಂಧನ: ಹಲವು ವಸ್ತುಗಳ ವಶಕ್ಕೆ
author img

By

Published : Mar 20, 2021, 7:41 AM IST

ಬೆಂಗಳೂರು: ದ್ವಿಚಕ್ರ ವಾಹನ, ಮೊಬೈಲ್ ಫೋನ್, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ಕಳುವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತಲಘಟ್ಟಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೂರ್ಯ ಅಲಿಯಾಸ್ ದುನಿಯಾ ಮತ್ತು ಸೈಯದ್ ಫುರ್ಖಾನ್ ಅಲಿಯಾಸ್ ಭಾಷಾ ಬಂಧಿತರು. ನೀರಜಾಂಬ ಎಂಬ ಮಹಿಳೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಬೌನ್ಸ್ ಬೈಕ್​ನಲ್ಲಿ ಬಂದ ಮೂವರು ಖದೀಮರು, ಮಹಿಳೆಯ ಮೊಬೈಲ್​ ಕದ್ದು ಪರಾರಿಯಾಗುತ್ತಿದ್ದರು. ಈ ವೇಳೆ ಸಾರ್ವಜನಿಕರು ಹಿಡಿಯಲು ಮುಂದಾದಾಗ ಓರ್ವ ರಸ್ತೆ ಬದಿ ಗುಂಡಿಯಲ್ಲಿ ಜಾರಿಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಮೂವರ ಮೇಲೂ ನೀರಜಾಂಬ ಎಂಬ ಮಹಿಳೆ ತಲಘಟ್ಟಪುರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು‌‌. ಸದ್ಯ ತಲಘಟ್ಟಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಬಸವನಗುಡಿ, ಬನಶಂಕರಿ, ಜಯನಗರ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಹಾಗೂ ಸುಲಿಗೆ ನಡೆಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಿಂದ 80 ಸಾವಿರ ಬೆಲೆಬಾಳುವ 1,050 ಗ್ರಾಂ ಬೆಳ್ಳಿ ವಸ್ತುಗಳು, 35 ಸಾವಿರದ ದ್ವಿಚಕ್ರ ವಾಹನ, 16,800 ಮೌಲ್ಯದ ಮೊಬೈಲ್ ಫೋನ್, 2 ಟಿವಿಗಳು, 5 ಸಾವಿರ ಮೌಲ್ಯದ ಒಂದು ಡಿವಿಡಿ ಪ್ಲೇಯರ್, 2 ಲ್ಯಾಪ್​​ಟಾಪ್​ಗಳು, ಕಾರು ಬೀಗ ಮತ್ತು ಮನೆ ಬೀಗಗಳನ್ನು ವಶಕ್ಕೆ ಪಡೆಯಲಾಗಿದೆ.

ಓದಿ: ದುಶ್ಚಟಕ್ಕೆ ದಾಸರಾಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.