ಬೆಂಗಳೂರು: ತಾಯೂರಿನಲ್ಲಿರುವ ಜಯಲಕ್ಷ್ಮಿ ಬಾರ್ ಮುಚ್ಚಿಸುವಂತೆ ಅಲ್ಲಿನ ಮುಖಂಡರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಶಿವಾನಂದ ವೃತ್ತದ ಸಮೀಪದಲ್ಲಿರುವ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮುಖಂಡರು, ವೈನ್ ಶಾಪ್ ಮುಚ್ಚಿಸುವಂತೆ ಮನವಿ ಮಾಡಿದರು.
ಗೆಜ್ಜಗನಹಳ್ಳಿಯಲ್ಲಿ ಜನಸಂದಣಿ ಜಾಗದಲ್ಲಿ ಬಾರ್ ತೆರೆಯಲಾಗಿದೆ. ಇದರಿಂದ ಅಲ್ಲಿನ ಎಂಟು ಊರಿನ ಜನರಿಗೆ ಸಮಸ್ಯೆಯಾಗಿದೆ. ಮಹಿಳೆಯರು, ಮಕ್ಕಳು ಓಡಾಡೋದು ಕಷ್ಟವಾಗಿದೆ. ಕುಡಿದು ಅಲ್ಲಿಯೇ ಗಲಾಟೆ ಮಾಡುತ್ತಿರುತ್ತಾರೆ. ಶಾಲೆಯ ಸಮೀಪದಲ್ಲೇ ಬಾರ್ ತೆರೆಯಲಾಗಿದ್ದು, ಶಾಲಾ ಮಕ್ಕಳಿಗೆ ಕಿರಿಕಿರಿಯಾಗುತ್ತಿದೆ. ಹೀಗಾಗಿ ಕೂಡಲೇ ಬಾರ್ ಮುಚ್ಚಿಸುವಂತೆ ತಾಯೂರು ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಮೈಸೂರು ಅಬಕಾರಿ ಡಿಸಿ ಜೊತೆ ಮಾತುಕತೆ ನಡೆಸಿದರು. ನಾಳೆಯೇ ಬಾರ್ ಮುಚ್ಚುವಂತೆ ತಿಳಿಸಿದರು.