ಬೆಂಗಳೂರು: ವಿಧಾನ ಪರಿಷತ್ಗೆ ನೂತನವಾಗಿ ಚುನಾಯಿತರಾದ ನಾಲ್ವರು ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ನ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಪರಿಷತ್ ಸಭಾನಾಯಕ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಪರಿಷತ್ ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
![swearing-new-legislative-council-members-news](https://etvbharatimages.akamaized.net/etvbharat/prod-images/kn-bng-02-swearing-new-members-video-7208083_19112020142042_1911f_01324_447.jpg)
ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಬರಬೇಕಿತ್ತು. ಆದರೆ ಅನ್ಯ ಕಾರ್ಯಕ್ರಮವಿದ್ದ ಕಾರಣ ಅವರು ಗೈರಾಗಿದ್ದರು. ವಿಧಾನ ಪರಿಷತ್ನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನೂತನ ಸದಸ್ಯರಾದ ಶಶಿಲ್ ನಮೋಶಿ, ಪುಟ್ಟಣ್ಣ, ಚಿದಾನಂದಗೌಡ ಹಾಗೂ ಎಸ್.ವಿ.ಸಂಕನೂರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
![swearing-new-legislative-council-members-news](https://etvbharatimages.akamaized.net/etvbharat/prod-images/kn-bng-02-swearing-new-members-script-7208083_19112020142924_1911f_1605776364_973.jpg)
ನಂತರ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಕಾಲಿಗೆ ನಮಸ್ಕರಿಸಿ ನೂತನ ಸದಸ್ಯರು ಆಶೀರ್ವಾದ ಪಡೆದರು. ಸಭಾಪತಿ ನೂತನ ಸದಸ್ಯರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.
![swearing-new-legislative-council-members-news](https://etvbharatimages.akamaized.net/etvbharat/prod-images/kn-bng-02-swearing-new-members-script-7208083_19112020142924_1911f_1605776364_512.jpg)
ಗೆದ್ದ ಕ್ಷೇತ್ರಗಳು:
ಪುಟ್ಟಣ್ಣ - ಬೆಂಗಳೂರು ಶಿಕ್ಷಕರ ಕ್ಷೇತ್ರ
ಶಶಿಲ್ ನಮೋಶಿ - ಈಶಾನ್ಯ ಶಿಕ್ಷಕರ ಕ್ಷೇತ್ರ
ಚಿದಾನಂದಗೌಡ - ಆಗ್ನೇಯ ಪದವೀಧರ ಕ್ಷೇತ್ರ
ಎಸ್.ವಿ.ಸಂಕನೂರು - ಪಶ್ಚಿಮ ಪದವೀಧರ ಕ್ಷೇತ್ರ
![swearing-new-legislative-council-members-news](https://etvbharatimages.akamaized.net/etvbharat/prod-images/kn-bng-02-swearing-new-members-script-7208083_19112020142924_1911f_1605776364_792.jpg)