ಬೆಂಗಳೂರು: ಆತನಿಗೆ ಹೇಳಿಕೊಳ್ಳೊಕೆ ಕೆಲಸವಿಲ್ಲ. ಮನೆಯಲ್ಲೇ ಇದ್ದ ಆತ ಗೆಳೆಯರ ಜೊತೆ ಓಡಾಡಿಕೊಂಡಿದ್ದ. ತಾನಾಯ್ತು ತನ್ನ ಬದುಕಾಯ್ತು ಅಂದುಕೊಂಡಿದ್ದ ಆತನಿಗೆ ಸಂಬಂಧಿಕರ ಯುವತಿಯೋರ್ವಳ ಪರಿಚಯವಾಗಿತ್ತು. ಪರಿಚಯದಲ್ಲಿ ಮೊಬೈಲ್ಗೆ ಮೆಸ್ಸೇಜ್ ಮಾಡಿದ ಆತನ ಸಮಯ ಕೆಟ್ಟಿತ್ತು. ಪರಿಣಾಮ ಇದ್ದಕಿದ್ದಂತೆ ನಾಪತ್ತೆಯಾದ ಆತ ಈಗ ಕೊಲೆಯಾಗಿರೋ ಅನುಮಾನ ಹುಟ್ಟಿಕೊಂಡಿದೆ.
ಗೋವಿಂದರಾಜು ನಾಪತ್ತೆಯಾಗಿ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಮತ್ತಿಕೆರೆ ನಿವಾಸಿಯಾದ ಈತ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆದರೆ ಈಗ ಕೆಲಸ ಇಲ್ಲ ಅಂತ ಮನೆಯಲ್ಲೇ ಉಳಿದುಕೊಂಡಿದ್ದ. ಹೇಳಿಕೊಳ್ಳುವಂತೆ ಯಾರ ಜೊತೆಯೋ ದ್ವೇಷ ಕಟ್ಟಿಕೊಳ್ಳದ ಆತ ಗೆಳೆಯರ ಜೊತೆ ಓಡಾಡಿಕೊಂಡಿದ್ದ. ಹೀಗೆ ತಾನಾಯ್ತು, ತನ್ನ ಕೆಲಸವಾಯ್ತು ಅಂದುಕೊಂಡಿದ್ದ ಆತ ನಿನ್ನೆ ಮಧ್ಯಾಹ್ನ ಇದ್ದಕಿದ್ದಂತೆ ನಾಪತ್ತೆಯಾಗಿದ್ದಾನೆ. ಆತನ ನಾಪತ್ತೆಯಿಂದ ಸಂಬಂಧಿಕರ ಯುವತಿಯೋರ್ವಳ ಮಾವನ ಕಿಡ್ನಾಪ್ ಕಥೆಗಳು ರಿವೀಲ್ ಆಗುತ್ತಿದೆ.
ಗೊವಿಂದರಾಜುಗೆ ಇತ್ತೀಚಿಗೆ ತಮ್ಮ ದೂರದ ಸಂಬಂಧಿಯಾದ ಯುವತಿಯೋರ್ವಳ ಪರಿಚಯವಾಗಿತ್ತಂತೆ. ಕೆಲದಿನಗಳ ಹಿಂದೆ ಸಂಬಂಧಿಕರ ಮದುವೆಯಲ್ಲಿ ಪರಿಚಯವಾದ ಆಕೆ ಜೊತೆ ಈತ ಮೆಸೆಜ್ ಮಾಡಿದ್ದನಂತೆ. ಇನ್ನು ಈತ ಮೇಸೆಜ್ ಕಹಾನಿ ತಿಳಿದ ಯುವತಿಯ ಸೋದರ ಮಾವ ನಿನ್ನೆ ಮಧ್ಯಾಹ್ನ ಮಾತನಾಡುವ ನೆಪದಲ್ಲಿ ಕರೆದಿದ್ದಾನೆ. ಬಳಿಕ ಬ್ಯಾಡರಹಳ್ಳಿಯಲ್ಲಿನ ಆಂಧ್ರಳ್ಳಿಯ ತೋಟದಲ್ಲಿ ಹಲ್ಲೆ ಮಾಡಿದ್ದಾರೆ. ಆ ಘಟನೆ ಬಳಿಕ ಆತ ನಾಪತ್ತೆಯಾಗಿದ್ದಾನೆ. ನಾಪತ್ತೆ ಹಿಂದೆ ಆತ ಕೊಲೆಯಾಗಿರುವ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಆ ಯುವತಿ ಇಂಜಿನಿಯರಿಂಗ್ ಓದುತಿದ್ದಾಳೆ. ಆಕೆಗೆ ಜೊತೆ ಮೆಸೆಜ್ ಮಾಡಿದ ಅನ್ನೊ ಒಂದೆ ಕಾರಣಕ್ಕೆ ಸೋದರ ಮಾವ ಆತನನ್ನು ಕಿಡ್ನಾಪ್ ಮಾಡಿದ್ದಾನಂತೆ. ಯುವತಿಯ ಸೋದರ ಮಾವನ ಮಗ ಅನಿಲ್ ಕರೆ ಮಾಡಿ ಕರೆದ ಎಂಬ ಕಾರಣಕ್ಕೆ ಗೋವಿಂದರಾಜು ಮನೆಯಿಂದ ಹೊರಟಿದ್ದ. ಈ ಬಗ್ಗೆ ಗೋವಿಂದ ರಾಜು ಕುಟುಂಬಕ್ಕೆ ತಿಳಿದಿತ್ತು. ಈ ವೇಳೆ ಬುದ್ಧಿ ಹೇಳಿ ಆತನನ್ನು ಕಳುಹಿಸುವುದಾಗಿ ಸಹ ಅನಿಲ್ ತಾಯಿ ಹೇಳಿದ್ದರಂತೆ.
ಈ ಬಳಿಕ ನೆನ್ನೆ ರಾತ್ರಿಯಾದರೂ ಗೊವಿಂದರಾಜು ಮನೆಗೆ ಬಂದಿಲ್ಲ. ಬಳಿಕ ಹಲ್ಲೆ ಮಾಡಿದ ಸಂಬಂಧ ಗೋವಿಂದರಾಜುವಿನ ಕುಟುಂಬದವರು ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಇವತ್ತು ಬೆಳೆಗ್ಗೆಯಾದರೂ ಸಹ ಗೊವಿಂದರಾಜು ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲವಂತೆ. ಸದ್ಯ ಮಾಹಿತಿ ಆಧರಿಸಿ ತನಿಖೆ ಶುರು ಮಾಡಿದ ಯಶವಂತಪುರ ಪೊಲೀಸರಿಗೆ ಈವರೆಗೂ ಗೋವಿಂದರಾಜು ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ.
ಪ್ರತ್ಯೇಕ ಪ್ರಕರಣ: ಪತಿಯ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ: ಪತಿಯ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದು ಕುಟುಂಬಸ್ಥರು ಕಾಪಾಡಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿರುವ ಘಟನೆ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಧುರಿ 26 ಸಾವನ್ನಪ್ಪಿರೋ ಗೃಹಿಣಿ. ಪತಿ ಗುರುಪ್ರಸಾದ್ ಹಾಗೂ ಆತನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಾಧುರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ದೇವನಹಳ್ಳಿಯ ವಿಜೀಪುರ ಮೂಲದ ಮಾಧುರಿಗೆ 2016ರಲ್ಲಿ ಗುರುಪ್ರಸಾದ್ ಜೊತೆ ವಿವಾಹವಾಗಿತ್ತು. ಖಾಸಗಿ ಕಂಪನಿಗಳಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದ ದಂಪತಿ ವರ್ತೂರು ಠಾಣಾ ವ್ಯಾಪ್ತಿಯ ತುಬರಹಳ್ಳಿಯಲ್ಲಿ ವಾಸವಿದ್ದರು. ದಂಪತಿಗೆ ಆರು ವರ್ಷದ ಮಗ ಸಹ ಇದ್ದಾನೆ. ಇತ್ತೀಚಿಗೆ ಗಂಡನಿಗೆ ಅಕ್ರಮ ಸಂಬಂಧವಿದೆ, ಆತನ ಪೋಷಕರಿಗೆ ಹೇಳಿದರೆ ಅವರೂ ಸಹ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ಮಾಧುರಿ ಜನವರಿ 26ರಂದು ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ತೀವ್ರ ಅಸ್ವಸ್ಥಳಾಗಿದ್ದ ಮಾಧುರಿಯನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಾಧುರಿ ಸಾವನ್ನಪ್ಪಿದ್ದಾರೆ. ಗುರುಪ್ರಸಾದ್ ಹಾಗೂ ಆತನ ಕುಟುಂಬದವರ ವಿರುದ್ಧ ಮಾಧುರಿ ಪೋಷಕರು ಆರೋಪಿಸುತ್ತಿದ್ದು, ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸ್ವಿಮ್ಮಿಂಗ್ ಪೂಲ್ನಲ್ಲಿ ಬಾಲಕರು ಮೃತಪಟ್ಟ ಪ್ರಕರಣ: ಪೋಷಕರು ಇನ್ಸ್ಪೆಕ್ಟರ್ ನಡುವೆ ಮಾತಿನ ಚಕಮಕಿ