ETV Bharat / state

ಕೃಷಿ ಭೂಮಿಯ ಬಹು ವಿಧದ ಕೆಲಸಕ್ಕೆ ಇ-ಕುಂಟೆ ಯಂತ್ರವೇ ಪರಿಹಾರ!

ಸೂರ್ಯನಿರ್ಭರ್ ಅಗ್ರಿಟೆಕ್ ಸ್ಟಾರ್ಟ್ ಅಪ್ ಕಂಪನಿಯು ಕೃಷಿ ಕ್ಷೇತ್ರದಲ್ಲಿ ಬಳಸುವ ವಿವಿಧ ಯಂತ್ರಗಳನ್ನು ಇ-ಕುಂಟೆ ಎಂಬ ಹೆಸರಿನಲ್ಲಿ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರದರ್ಶಿನ.

suryanirbhar agritech
ಸೂರ್ಯನಿರ್ಭರ್ ಅಗ್ರಿಟೆಕ್
author img

By

Published : Nov 5, 2022, 10:44 AM IST

Updated : Nov 7, 2022, 2:05 PM IST

ಬೆಂಗಳೂರು: ಕಾರ್ಮಿಕರ ಕೊರತೆ ನಿವಾರಣೆಗೆ ಇಂದು ಕೃಷಿ ಕ್ಷೇತ್ರದ ಕೆಲಸಕ್ಕೆ ಯಂತ್ರಗಳ ಅವಲಂಬನೆ ಹೆಚ್ಚಾಗುತ್ತಿದೆ, ಸುಧಾರಿತ ಯಂತ್ರೋಪಕರಣಗಳು ಮಾರುಕಟ್ಟೆಗೆ ಬರುತ್ತಿವೆ. ಪ್ರಸ್ತುತ ದಿನಗಳಲ್ಲಿ ಕೃಷಿ ಕೆಲಸಗಳಿಗೆ ಯಂತ್ರೋಪಕರಣಗಳ ಮೇಲೆ ಅವಲಂಬನೆ ಅನಿವಾರ್ಯವಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಸಾಕಷ್ಟು ಸಂಸ್ಥೆಗಳು ಸ್ಪರ್ಧಾತ್ಮಕ ದರದಲ್ಲಿ ಯಂತ್ರೋಪಕರಣಗಳನ್ನು ಮಾರುಕಟ್ಟೆಗೆ ತರುತ್ತಿದ್ದು, ರೈತರ ಹಾಗೂ ಕೃಷಿ ಅವಲಂಬಿತರ ಕೆಲಸವನ್ನು ಸುಗಮಗೊಳಿಸಲಾಗುತ್ತಿದೆ.

ಕೃಷಿ ಕ್ಷೇತ್ರದಲ್ಲಿ ಮೂಡುತ್ತಿರುವ ಕ್ರಾಂತಿಗೆ ವಿವಿಧ ಸಂಸ್ಥೆಗಳ ಯಂತ್ರೋಪಕರಣಗಳ ಸಹಕಾರ ದೊರೆಯುತ್ತಿದೆ. ಹೊಲಗಳಲ್ಲಿ ಉಳುಮೆ, ಬಿತ್ತನೆ, ಔಷಧ ಸಿಂಪಡಣೆ ಸೇರಿದಂತೆ ಹಲವು ಕೆಲಸಗಳಿಗೆ ಉಪಯೋಗವಾಗುವ ಯಂತ್ರಗಳನ್ನು ಸೂರ್ಯನಿರ್ಭರ್ ಅಗ್ರಿಟೆಕ್ ಸ್ಟಾರ್ಟ್ ಅಪ್ ಕಂಪನಿಯು ತಯಾರಿಸಿದೆ. ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಈ ಯಂತ್ರಗಳನ್ನು ಪ್ರದರ್ಶಿಸಿದ್ದು, ಕೃಷಿಕರ ಗಮನ ಸೆಳೆಯುತ್ತಿದೆ.

ಸೂರ್ಯನಿರ್ಭರ್ ಅಗ್ರಿಟೆಕ್ ಕಂಪನಿಯ ಸಿಇಒ ಅಶ್ವಿನಿ

ಈ ಕಂಪನಿಯು 1 ಎಚ್ಪಿ ಹಾಗೂ 2 ಎಚ್ಪಿ ವೀಡರ್ ಎಂಬ ಎರಡು ವಿಧದ ಯಂತ್ರ ಸಿದ್ಧಪಡಿಸಿದ್ದು, ಕುಂಟೆ ಹೊಡೆಯಲು, ಮಣ್ಣಿನ ಬದು ಏರಿಸಲು, ರಿಜ್ಜರ್, ಔಷಧ ಸಿಂಪಡಿಸಲು ಮತ್ತು ಇತ್ಯಾದಿ ಕೆಲಸಕ್ಕೆ ಬಳಸಬಹುದು. ಜೊತೆ ರೋಟರಿ ಟಿಲ್ಲರ್​ಗೆ ಸಹ ಈ ಯಂತ್ರಗಳನ್ನು ಅಳವಡಿಸಬಹುದು.

ಈ ಯಂತ್ರಗಳು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ ಮತ್ತು ಹೊರ ರಾಜ್ಯಗಳಾದ ರಾಜಸ್ತಾನ, ಓಡಿಸ್ಸಾದಲ್ಲಿ ಯಂತ್ರೋಪಕರಣ ಮಾರಾಟ ಮಾಡಲಾಗುತ್ತಿದೆ. ಒಂದೆರಡು ಎಕರೆ ಹೊಂದಿರುವ ರೈತರಿಗೆ ಯಂತ್ರದ ಜೊತೆ ಬ್ಯಾಟರಿ ಕೊಳ್ಳುವುದು ದುಬಾರಿಯಾದರೆ ಮತ್ತು ಒಂದೆರಡು ತಿಂಗಳು ಮಾತ್ರ ಬಳಸುವವರಿಗೆ ಕಂಪನಿಯೇ ತಿಂಗಳಿಗೆ 100 ರೂ ಬಾಡಿಗೆಗೆ ಬ್ಯಾಟರಿ ನೀಡಲಿದೆ.

ಲೀತಿಯಂ ಅಯಾನ್ ಬ್ಯಾಟರಿ ಬಳಸುವುದರಿಂದ ಈ ಬ್ಯಾಟರಿ ಒಳಗೊಂಡ ಎಲೆಕ್ಟ್ರಿಕ್ ಸ್ಕೂಟರ್ ಇದ್ದರೆ ಅದನ್ನೂ ಬಳಸಬಹುದು. ಯಂತ್ರವು 1 ಎಚ್ಪಿ ಆದರೆ ಬ್ಯಾಟರಿ ಸಹಿತವಾಗಿ 40 ಸಾವಿರ ರೂ. ಹಾಗೂ 2 ಎಚ್ಪಿಗೆ 50 ಸಾವಿರ ರೂ. ಬೆಲೆ ಇರಲಿದೆ. ಹೆಚ್ಚುವರಿ ಸಲಕರಣೆಗಳು ಬೇಕಿದ್ದರೆ 6500 ರೂ ಆಗಲಿದೆ.

ಸೂರ್ಯನಿರ್ಭರ್ ಅಗ್ರಿಟೆಕ್ ಕಂಪನಿಯ ಸಿಇಒ ಅಶ್ವಿನಿ ಮಾತನಾಡಿ, ನಾವು ಇ-ಕುಂಟೆ ಎಂಬ ಹೆಸರಿನ ಯಂತ್ರ ಸಿದ್ಧಪಡಿಸಿದ್ದೇವೆ. ಈಗ ಎತ್ತುಗಳನ್ನು ಎಲ್ಲ ಕಡೆ ಬಳಸಿ ಕೃಷಿ ಮಾಡುವ ಕಾರ್ಯ ಕಡಿಮೆ ಆಗಿದೆ. ಸಕಾಲಕ್ಕೆ ಕೆಲಸ ಆಗುವುದಿಲ್ಲ. ಕೃಷಿ ವೆಚ್ಚದಾಯಕವಾಗುತ್ತಿದ್ದು, ಟ್ರ್ಯಾಕ್ಟರ್ ಬಳಕೆ ಸಹ ದುಬಾರಿಯಾಗಿದೆ. ಬೆಳೆಗಳಿಗೆ ಕಳೆ ತೆಗೆಯುವುದು ಪ್ರಮುಖ. ಇದಕ್ಕಾಗಿ ವಿಶೇಷ ಯಂತ್ರ ಸಿದ್ಧಪಡಿಸಿದ್ದೇವೆ ಎಂದರು.

ಕಳೆದ ಜೂನ್​​ನಲ್ಲಿ ನಮ್ಮ ಸಂಸ್ಥೆಯ ಯಂತ್ರ ಮಾರುಕಟ್ಟೆಗೆ ಬಂದಿದೆ. ನಮ್ಮ ಸಾಧನ ಯಂತ್ರ ಸಹಿತ ಹಾಗೂ ಯಂತ್ರ ರಹಿತವಾಗಿ ಲಭಿಸುತ್ತದೆ. ಇದು ಹೊಸ ಮಾದರಿಯ ಉತ್ಪನ್ನವಾಗಿದ್ದರಿಂದ ಪ್ರಮಾಣೀಕೃತ ಆಗಬೇಕಿದೆ. ಆದರೆ ವಿಶ್ವವಿದ್ಯಾಲಯದಲ್ಲಿ ಇದರ ತಪಾಸಣೆಗೆ ಅಗತ್ಯವಿರುವ ಯಂತ್ರೋಪಕರಣ ಲಭ್ಯವಿಲ್ಲ. ಈ ಕುರಿತು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಆದಷ್ಟು ಬೇಗ ನಮಗೆ ಅಗತ್ಯವಿರುವ ಎಲ್ಲಾ ಮಾನ್ಯತೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮನೆಯಲ್ಲೇ ಕುಳಿತು ತೋಟದ ಹನಿ ನೀರಾವರಿ ನಿಯಂತ್ರಿಸುವ ನೂತನ ತಂತ್ರಜ್ಞಾನ

Last Updated : Nov 7, 2022, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.