ಬೆಂಗಳೂರು: ಹಿಂದೂ ಶಬ್ದದ ಅರ್ಥ ಅಶ್ಲೀಲವಾಗಿದೆ ಎಂದು ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ವಿರುದ್ಧ ಕೇಸರಿಪಡೆ ಕೆರಳಿ ನಿಂತಿದೆ. "ಸ್ವಾಭಿಮಾನಿ ಹಿಂದೂ" ಎಂಬ ಘೋಷ ವಾಕ್ಯದೊಂದಿಗೆ ಇಂಧನ ಹಾಗೂ ಕನ್ನಡ-ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಹಿಂದೂ ನಮ್ಮ ಶಬ್ದ ಅಲ್ಲವೇ ಅಲ್ಲ : ಸತೀಶ ಜಾರಕಿಹೊಳಿ
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಚಿವರು, ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ಧಾರೆ. ನನ್ನನ್ನು ಹಿಂದೂ ಎಂದು ಕರೆಯಬೇಡಿ ಎಂದು ಹೇಳಿದ್ದ ಜವಾಹರ್ ಲಾಲ್ ನೆಹರು ಅವರ ಹಾದಿಯಲ್ಲೇ ಕಾಂಗ್ರೆಸ್ ಇಷ್ಟು ವರ್ಷ ನಡೆದುಕೊಂಡಿದೆ. ಹಿಂದೂ, ಹಿಂದುತ್ವ ಹಾಗೂ ಹಿಂದೂ ರಾಷ್ಟ್ರೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗಲೆಲ್ಲ ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಲೇ ಬಂದಿದೆ. ಸತೀಶ್ ಜಾರಕಿಹೊಳಿ ಈ ಪರಂಪರೆಯ ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ಹಿಂದುತ್ವ ಎಂಬ ಜೀವನ ಪದ್ದತಿಯನ್ನು ಕೀಳಾಗಿ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಸಂಪೂರ್ಣ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು.ಇದು ವೈಯುಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ಸುರ್ಜೆವಾಲಾ ರವರ ನಾಟಕವನ್ನು ಹಿಂದುಗಳು ಒಪ್ಪುವುದಿಲ್ಲ. ಭಾರತೀಯತೆಗೆ ಅಪಮಾನ ಮಾಡಿರುವ ನಿಮ್ಮ ನಾಟಕಕ್ಕೆ ಎಂದಿಗೂ ಕ್ಷಮೆ ಇಲ್ಲ.4/4
— Sunil Kumar Karkala (@karkalasunil) November 7, 2022 " class="align-text-top noRightClick twitterSection" data="
">ಹಿಂದುತ್ವ ಎಂಬ ಜೀವನ ಪದ್ದತಿಯನ್ನು ಕೀಳಾಗಿ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಸಂಪೂರ್ಣ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು.ಇದು ವೈಯುಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ಸುರ್ಜೆವಾಲಾ ರವರ ನಾಟಕವನ್ನು ಹಿಂದುಗಳು ಒಪ್ಪುವುದಿಲ್ಲ. ಭಾರತೀಯತೆಗೆ ಅಪಮಾನ ಮಾಡಿರುವ ನಿಮ್ಮ ನಾಟಕಕ್ಕೆ ಎಂದಿಗೂ ಕ್ಷಮೆ ಇಲ್ಲ.4/4
— Sunil Kumar Karkala (@karkalasunil) November 7, 2022ಹಿಂದುತ್ವ ಎಂಬ ಜೀವನ ಪದ್ದತಿಯನ್ನು ಕೀಳಾಗಿ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಸಂಪೂರ್ಣ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು.ಇದು ವೈಯುಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ಸುರ್ಜೆವಾಲಾ ರವರ ನಾಟಕವನ್ನು ಹಿಂದುಗಳು ಒಪ್ಪುವುದಿಲ್ಲ. ಭಾರತೀಯತೆಗೆ ಅಪಮಾನ ಮಾಡಿರುವ ನಿಮ್ಮ ನಾಟಕಕ್ಕೆ ಎಂದಿಗೂ ಕ್ಷಮೆ ಇಲ್ಲ.4/4
— Sunil Kumar Karkala (@karkalasunil) November 7, 2022
'ಸತೀಶ್ ಜಾರಕಿಹೊಳಿಗೆ ಹಿಂದೂ ಶಬ್ದ ಅಶ್ಲೀಲ. ಸಿದ್ದರಾಮಯ್ಯ ಅವರಿಗೆ ಕೇಸರಿ-ತಿಲಕ ಕಂಡರೆ ಭಯ. ದೈವಾರಾಧನೆ ಹಾಗೂ ತೀರ್ಥ ಬಿ.ಟಿ ಲಲಿತಾ ನಾಯಕರಿಗೆ ವಾಕರಿಕೆ ತರಿಸುತ್ತದೆ. ಡಿ.ಕೆ.ಶಿವಕುಮಾರ್ಗೆ ಮುಸ್ಲಿಂರು ಸೋದರರು. ಎಂ.ಬಿ ಪಾಟೀಲರಿಗೆ ಹಿಂದೂ ಧರ್ಮದ ಅಖಂಡತೆ ಒಡೆಯುವ ಯೋಚನೆ. ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ಗೆ ಭಗವದ್ಗೀತೆ ಜಿಹಾದ್ ಆಗಿ ಕಾಣುತ್ತದೆ. ಇವೆಲ್ಲವೂ ಕಾಂಗ್ರೆಸ್ ಒಳಮನಸಿನಲ್ಲಿರುವ ಹಿಂದೂ ವಿರೋಧಿ ಭಾವಗಳು' ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ: ನಾನು ಯಾವುದೇ ಧರ್ಮ, ಭಾಷೆಗೆ ಅವಮಾನ ಮಾಡಿಲ್ಲ: ಸತೀಶ ಜಾರಕಿಹೊಳಿ ಸ್ಪಷ್ಟನೆ
'ಭಾರತ್ ಜೋಡೊ ಯಾತ್ರೆ' ಹೆಸರಿನಲ್ಲಿ ರಾಹುಲ್ ಗಾಂಧಿ ನಡೆಸಿದ ಪಾದಯಾತ್ರೆಯ ಬಳಿಕ ಕಾಂಗ್ರೆಸ್ ನಾಯಕರ ಹಿಂದೂ ವಿರೋಧಿ ಹೇಳಿಕೆಗಳು ಮಿತಿ ಮೀರಿದೆ. ಕಾಂಗ್ರೆಸ್ ನಡೆಸುವ ಎಲ್ಲ ಯಾತ್ರೆ, ಅಭಿಯಾನದ ಹಿಂದಿರುವುದು ಹಿಂದೂ ದ್ವೇಷ. ಕಾಂಗ್ರೆಸ್ ಅಧಿನಾಯಕರ ಭಾವನೆಗಳಿಗೆ ಸತೀಶ್ ಜಾರಕಿಹೊಳಿ ಮಾತಿನ ರೂಪ ಕೊಟ್ಟಿದ್ದಾರೆ. ಹಿಂದುತ್ವ ಎಂಬ ಜೀವನ ಪದ್ಧತಿಯನ್ನೇ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಕಾಂಗ್ರೆಸ್ ಇಡೀ ರಾಷ್ಟ್ರದ ಕ್ಷಮೆ ಯಾಚಿಸಬೇಕು. ಇದು ವೈಯಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ನಾಟಕ ಬೇಡ ಸುರ್ಜೇವಾಲಾ ಅವರೇ. ಭಾರತೀಯತೆಗೆ ಅಪಮಾನ ಮಾಡುವ ನಿಮ್ಮ ನಾಟಕಕ್ಕೆ ಕ್ಷಮೆ ಇಲ್ಲ ಎಂದು ಸಚಿವ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
#ನಾನುಸ್ವಾಭಿಮಾನಿಹಿಂದು
— Sunil Kumar Karkala (@karkalasunil) November 8, 2022 " class="align-text-top noRightClick twitterSection" data="
- ನನ್ನೊಡಲೊಳಗೆ ದೇಶಭಕ್ತಿಯ ಕೆಚ್ಚಿದೆ.
- ನನ್ನ ಹೃದಯದಲ್ಲಿ ಹಿಂದು ರಾಷ್ಟ್ರ ಪ್ರೀತಿ ಇದೆ.
- ನನ್ನ ಮನಸಿನಲ್ಲಿ ಹಿಂದುತ್ವದ ಸಂಸ್ಕಾರವಿದೆ.
- ನನ್ನ ಉಸಿರಿನಲ್ಲಿ ರಾಷ್ಟ್ರ ವಿರೋಧಿಗಳ ವಿರುದ್ಧ ದ್ವೇಷವಿದೆ.
- ನನ್ನ ರಕ್ತದಲ್ಲಿ ಶಿವಾಜಿಯ ಸ್ವಾಭಿಮಾನವಿದೆ.
ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ. pic.twitter.com/F0mNrO8lkS
">#ನಾನುಸ್ವಾಭಿಮಾನಿಹಿಂದು
— Sunil Kumar Karkala (@karkalasunil) November 8, 2022
- ನನ್ನೊಡಲೊಳಗೆ ದೇಶಭಕ್ತಿಯ ಕೆಚ್ಚಿದೆ.
- ನನ್ನ ಹೃದಯದಲ್ಲಿ ಹಿಂದು ರಾಷ್ಟ್ರ ಪ್ರೀತಿ ಇದೆ.
- ನನ್ನ ಮನಸಿನಲ್ಲಿ ಹಿಂದುತ್ವದ ಸಂಸ್ಕಾರವಿದೆ.
- ನನ್ನ ಉಸಿರಿನಲ್ಲಿ ರಾಷ್ಟ್ರ ವಿರೋಧಿಗಳ ವಿರುದ್ಧ ದ್ವೇಷವಿದೆ.
- ನನ್ನ ರಕ್ತದಲ್ಲಿ ಶಿವಾಜಿಯ ಸ್ವಾಭಿಮಾನವಿದೆ.
ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ. pic.twitter.com/F0mNrO8lkS#ನಾನುಸ್ವಾಭಿಮಾನಿಹಿಂದು
— Sunil Kumar Karkala (@karkalasunil) November 8, 2022
- ನನ್ನೊಡಲೊಳಗೆ ದೇಶಭಕ್ತಿಯ ಕೆಚ್ಚಿದೆ.
- ನನ್ನ ಹೃದಯದಲ್ಲಿ ಹಿಂದು ರಾಷ್ಟ್ರ ಪ್ರೀತಿ ಇದೆ.
- ನನ್ನ ಮನಸಿನಲ್ಲಿ ಹಿಂದುತ್ವದ ಸಂಸ್ಕಾರವಿದೆ.
- ನನ್ನ ಉಸಿರಿನಲ್ಲಿ ರಾಷ್ಟ್ರ ವಿರೋಧಿಗಳ ವಿರುದ್ಧ ದ್ವೇಷವಿದೆ.
- ನನ್ನ ರಕ್ತದಲ್ಲಿ ಶಿವಾಜಿಯ ಸ್ವಾಭಿಮಾನವಿದೆ.
ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ. pic.twitter.com/F0mNrO8lkS
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿರುವ "ಸ್ವಾಭಿಮಾನಿ ಹಿಂದೂ ಅಭಿಯಾನದಲ್ಲಿ ನಾನು ಸ್ವಾಭಿಮಾನಿ ಹಿಂದೂ, ಹಿಂದುತ್ವದ ಅವಹೇಳನವಾದಾಗ ನಾನು ಪ್ರತಿರೋಧಿಸುತ್ತೇನೆ. ರಾಷ್ಟ್ರೀಯತೆಗೆ ಧಕ್ಕೆಯಾದಾಗ ನಾನು ಸೆಟೆದು ನಿಲ್ಲುತ್ತೇನೆ. ಭಾರತೀಯ ಪರಂಪರೆಯ ನಿಂದನೆಯಾದಾಗ ನಾನು ಹೋರಾಡುತ್ತೇನೆ. ಸ್ವಧರ್ಮ, ಸ್ವದೇಶ, ಸ್ವಭಾಷೆ ನನ್ನ ಅಸ್ಮಿತೆ.
ನಾನು ಸ್ವಾಭಿಮಾನಿ ಹಿಂದೂ, ನನ್ನೊಡಲೊಳಗೆ ದೇಶಭಕ್ತಿಯ ಕೆಚ್ಚಿದೆ. ನನ್ನ ಹೃದಯದಲ್ಲಿ ಹಿಂದೂ ರಾಷ್ಟ್ರ ಪ್ರೀತಿ ಇದೆ. ನನ್ನ ಮನಸಿನಲ್ಲಿ ಹಿಂದುತ್ವದ ಸಂಸ್ಕಾರವಿದೆ. ನನ್ನ ಉಸಿರಿನಲ್ಲಿ ರಾಷ್ಟ್ರ ವಿರೋಧಿಗಳ ವಿರುದ್ಧ ದ್ವೇಷವಿದೆ. ನನ್ನ ರಕ್ತದಲ್ಲಿ ಶಿವಾಜಿಯ ಸ್ವಾಭಿಮಾನವಿದೆ. ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ'' ಎಂದು ಸುನಿಲ್ ಕುಮಾರ್ ಟ್ವೀಟ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹಿಂದೂ ಪದದ ವಿಚಾರವಾಗಿ ಸತೀಶ್ ಜಾರಕಿಹೊಳಿ ಹೇಳಿಕೆ ನಾವು ಖಂಡಿಸುತ್ತೇವೆ: ಸುರ್ಜೇವಾಲಾ