ETV Bharat / state

ಕಲಾವಿದರ ಪಿಂಚಣಿ 1500 ರಿಂದ 2000 ರೂಗೆ ಏರಿಕೆ: ಸುನೀಲ್ ಕುಮಾರ್

ಕಲಾವಿದರ ಪಿಂಚಣಿಯನ್ನು ಏರಿಸಲಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

author img

By

Published : Nov 2, 2022, 11:03 PM IST

KN_BNG
ಸುನೀಲ್ ಕುಮಾರ್

ಬೆಂಗಳೂರು: ರಾಜ್ಯ ಸರ್ಕಾರವು ಕಲಾವಿದರ ಪಿಂಚಣಿಯನ್ನು 1,500 ರಿಂದ 2,000 ರೂ.ಗೆ ಏರಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಮಾಹಿತಿಯನ್ನು ಸಚಿವರು ನೀಡಿದ್ದಾರೆ. ರಾಜ್ಯ ಸರ್ಕಾರವು ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲು ಸದಾ ಸಿದ್ಧ. ಈ ಹಿನ್ನೆಲೆಯಲ್ಲಿ 12,000 ಕಲಾವಿದರಿಗೆ ನೀಡುತ್ತಿದ್ದ ಪಿಂಚಣಿಯನ್ನು 15,000 ಮಂದಿಗೆ ಹೆಚ್ಚಿಸಲಾಗಿದೆ. ಆಶೋಕ ಬಾಬು ನೀಲಗಾರ ಅವರು ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದರು. ಅವರ ಬಯೋಡಾಟವನ್ನು ಗಮನಿಸಿದಾಗ ಅವರ ಸಾಧನೆ ನಮ್ಮ ಅರಿವಿಗೆ ಬಂತು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು ಎಂದರು.

ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಸೇವೆಸಲ್ಲಿಸಿ ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರಿಗೆ ಮಾಸಿಕ 1,500 ರೂ.ಗಳ ಮಾಸಾಶನ ಮಂಜೂರು ಮಾಡಲಾಗುತ್ತಿತ್ತು. ಇದನ್ನೀಗ ಹೆಚ್ಚಳ ಮಾಡಲಾಗಿದೆ. ಮಾಸಾಶನ ಮಂಜೂರಾತಿಗೆ ಸಲ್ಲಿಸಬೇಕಾದ ದಾಖಲೆಗಳ ವಿವರ ಒದಗಿಸಿದ್ದು, ನಿಗದಿತ ಮಾಸಾಶನ ಅರ್ಜಿಯನ್ನು ಆಯಾಯ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಮೂಲಕ ಸಲ್ಲಿಸಬೇಕು ಎಂಬ ನಿಯಮ ಇದೆ.
ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ ಮತ್ತು ಯಕ್ಷಗಾನ, ಲಲಿತಕಲೆ, ಶಿಲ್ಪಕಲೆಗಳಲ್ಲಿ 25 ವರ್ಷಗಳ ಕಾಲ ಗಣನೀಯ ಸೇವೆಸಲ್ಲಿಸಿ ಕಷ್ಟಪರಿಸ್ಥಿಯಲ್ಲಿರುವವರು ಮಾಸಾಶನ ಪಡೆಯಲು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಸಾಹಿತಿ ಕಲಾವಿದರ ವಯಸ್ಸು 58 ವರ್ಷಗಳಾಗಿರಬೇಕು. ವಯಸ್ಸಿನ ಬಗ್ಗೆ ಶಿಕ್ಷಣ ಸಂಸ್ಥೆ ನೀಡಿದ ಅಥವಾ ಕೋರ್ಟಿನಿಂದ ಪಡೆದ ಅಫಿಡವಿಟ್ ಅನ್ನು ಸಲ್ಲಿಸಬೇಕು. ಕಲಾವಿದರು ತಹಶಿಲ್ದಾರರಿಂದ ಪಡೆದ ವಾರ್ಷಿಕ ಆದಾಯ ಪ್ರಮಾಣ ಪತ್ರ ನೀಡಬೇಕು (ಗ್ರಾಮಾಂತರ ಪ್ರದೇಶಗಳಿಗೆ ರೂ.40.000 ಹಾಗೂ ಪಟ್ಟಣ ಪ್ರದೇಶಗಳಿಗೆ ರೂ.50,000 ಅಥವಾ ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರಬೇಕು).

ಅಂಗವಿಕಲ ಕಲಾವಿದರಿಗೆ ವಯಸ್ಸು 40ವರ್ಷಗಳಾಗಿದ್ದರೆ ಅಥವಾ 20 ವರ್ಷಗಳ ಸೇವೆ ಸಲ್ಲಿಸಿದ್ದರೆ, ಮಾಸಾಶನ ಮಂಜೂರಾತಿಗೆ ಅರ್ಜಿಯನ್ನು ಪರಿಗಣಿಸಲಾಗುವುದು ಇಂತಹ ಕಲಾವಿದರು ಅಂಗವಿಕಲತೆಯ ಬಗ್ಗೆ ವೈದ್ಯಕೀಯ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿದಾರರು ಮೂರು ಬಣ್ಣಗಳುಳ್ಳ ತ್ರಿಪ್ರತಿಯ ಮಾಸಾಶನ ಅರ್ಜಿಯನ್ನು ಅವರ ಸಹಿ ಮತ್ತು ಸರಿಯಾದ ವಿಳಾಸದೊಂದಿಗೆ ಭರ್ತಿಮಾಡಿ ಅವಶ್ಯ ದಾಖಲೆಗಳೊಂದಿಗೆ, ಅವರ ಕಲಾಸೇವೆಯ ಸಾಧನೆಗಳ ಮೂಲ ಪ್ರಮಾಣ ಪತ್ರಗಳನ್ನು, ಇಲ್ಲವೇ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ದಾಖಲೆಗಳನ್ನು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರುಗಳಿಗೆ ಸಲ್ಲಿಸಬೇಕು.

ಅರ್ಜಿಯೊಂದಿಗೆ ಇತ್ತಿಚಿನ ಎರಡು ಭಾವಚಿತ್ರಗಳನ್ನು ಲಗತ್ತಿಸಿರಬೇಕು. ಭಾವಚಿತ್ರಗಳಿಗೆ ಗೆಜೆಟೆಡ್ ಅಧಿಕಾರಿಯ ದೃಢೀಕರಣವಿರಬೇಕು. ಅಪೂರ್ಣ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ವೃದ್ಧಾಪ್ಯ ವೇತನ, ವಿಧವಾವೇತನ, ಅಂಗವಿಕಲರ ಮಾಸಾಶನ, ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಪಿಂಚಣಿ ಇತ್ಯಾದಿಗಳನ್ನು ಪಡೆಯುತ್ತಿದ್ದು, ನಿಗದಿತ ಮಾಸಾಶನ ಹಣವೂ ಸೇರಿದಂತೆ ಆದಾಯ ಮಿತಿಯನ್ನು ಮೀರಬಾರದು.

ಇದನ್ನೂ ಓದಿ: ಪ್ರಭಾವಿ ಹುದ್ದೆಗೆ ಅಕ್ರಮ ನೇಮಕಾತಿ: ಸಿದ್ದರಾಮಯ್ಯ ವಿರುದ್ಧ ಎನ್ ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.